”ಸ್ವಚ್ಛಸಂಕೀರ್ಣ” “‘ಸ್ವಚ್ಛವಾಹಿನಿ’ ಯೋಜನೆ ಗೋಕರ್ಣದಲ್ಲಿ ಹೆಸರಿಗೆ ಮಾತ್ರಕ್ಕೆ- ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿ ಹಳ್ಳ ಕಿಡಿ
ಗೋಕರ್ಣ-ಗೋಕರ್ಣದ ಓಂ ಬೀಚ್ ಹಾಗೂ ಅಶೋಕೆಗೆ ಹೋಗುವ ಕ್ರಾಸ್ ನಲ್ಲಿ ಇರುವಂತ ಕಸದ ಸಮಸ್ಯೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ. ಈ ಸಮಸ್ಯೆಯನ್ನು ೨೦ ದಿನಗಳಲ್ಲಿ ಬಗ್ಗೆ ಪರಿಹರಿಸದಿದ್ದರೆ, ಈ ಸುತ್ತಲಿನ ಊರಿನ ನಾಗರಿಕರ ಸಮಸ್ಯೆ ಬಗ್ಗೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗೋಕರ್ಣ ಘಟಕದಿಂದ
ಗೋಕರ್ಣದ #ಪಂಚಾಯಿತಿಯ ಎದುರಿಗೆ ಆಪ್ರತಿಭಟನೆ ನಡೆಸಲಾಗುವುದು… ಕೆಲವು ವರ್ಷಗಳಿಂದ ಈ ಸಮಸ್ಯೆಯನ್ನು ಸಾಮಾಜಿಕ ಮಾಧ್ಯಮ ಮೂಲಕ ಹಾಗೂ ಕೆಲವುಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು, ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಗೋಕರ್ಣದಲ್ಲಿ #ಪ್ರವಾಸೋದ್ಯಮದ ಹೆಸರಿನಲ್ಲಿ ಉತ್ಪತ್ತಿಯಾಗುವ ಅನೇಕ ರೀತಿಯ #ಫ್ಲ್ಯಾಸ್ಟಿಕ್ #ತ್ಯಾಜ್ಯ #ಕೋಳಿ ಅಂಗಡಿಯ #ತ್ಯಾಜ್ಯವನ್ನು ಹಾಗೇ ನಿರುಪಯುಕ್ತ ವಸ್ತುಗಳನ್ನು ಈ ಅರಣ್ಯ ಪ್ರದೇಶದಲ್ಲಿ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದೆ ತೆರೆದ ಪ್ರದೇಶದಲ್ಲಿ ಈ ಎಲ್ಲಾ ತ್ಯಾಜ್ಯವನ್ನು ಗೋಕರ್ಣ ಪಂಚಾಯಿತಿ #ಸ್ವಚ್ಛವಾಹಿನಿ ಮೂಲಕ ಮತ್ತು ಪಂಚಾಯಿತಿ
ವಾಹನಗಳಿಂದ ಹಾಗೂ ಕೆಲವು ಕಿಡಿಗೇಡಿಗಳು ನಿರುಪಯುಕ್ತ ವಸ್ತುಗಳನ್ನು ಹಾಕುತ್ತಿದ್ದಾರೆ. ಇದರಿಂದ ಅತಿ ದೊಡ್ಡ ಸಮಸ್ಯೆ ಎಂದರೆ ಈಗಾಗಲೇ ಸಾವಿರಾರು ಜಾನುವಾರುಗಳು (ಸಾಕು
ಪ್ರಾಣಿ ಹಾಗೂ ಕಾಡು ಪ್ರಾಣಿಗಳು) ಮರಣವನ್ನು ಹೊಂದಿದರು. ಇದರ ಬಗ್ಗೆ ಸೂಕ್ತ ಕ್ರಮವಿಲ್ಲ…
ಗೋಕರ್ಣದ ಆಲೋಕ್ಕೆ ಮೂಡಂಗಿ, ತದಡಿ,ಬಂಡಿಕೇರಿ ಬಂಗ್ಲೆಗುಡದೇವನಂಗಿ, ಮೇಲಿನಕೇಲಿ
ಹಾಗೂ ಸುತ್ತಮುತ್ತಲಿನ ಗೋವು ಈ ಕಸದ ರಾಶಿಗೆ ಹೋಗಿ ಪ್ಲಾಸ್ಟಿಕ್ ತಿಂದು ಸಾವನ್ನಪ್ಪುತ್ತಿವೆ.
ಈ ಜಾಗದಲ್ಲಿ ಎಲ್ಲಾ ಪ್ಲಾಸ್ಟಿಕ್ ಕಸಕ್ಕೆ ಬೆಂಕಿ ಹಾರುತ್ತಿದ್ದಾರೆ. ಇದರಿಂದ ನಾಗರಿಕರು ಮುಂದಿನ ದೊಡ್ಡ ಸಮಸ್ಯೆಯನ್ನು ಎದುರಿಸುವ ಆತಂಕದಿಂದ ಇದ್ದಾರೆ… ಕೆಲವರಲ್ಲಿ ಆರೋಗ್ಯ ಏರುಪೇರು ಉಂಟಾಗುತ್ತಿದೆ ಸರ್ಕಾರದಿಂದ ಕೆಲವು ಯೋಜನೆಗಳು ಈಗಾಗಲೇ ವಿನಿಯೋಗ ಮಾಡಲಾಗಿದೆ ಎಂಬ
ಮಾಹಿತಿಯಿದೆ. ಆದರೂ ಸಮಸ್ಯೆ ಇರುವಂತಹ ಈ ಜಾಗದಲ್ಲಿ ಯಾವುದೇ ಯೋಜನೆ
ನಮ್ಮ ಗೋಕರ್ಣ ಪಂಚಾಯಿತಿಯಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ. ಈ ಭಾಗದ ಜನರ
ಈ ದೊಡ್ಡ ಸಮಸ್ಯೆ ಬಗೆಹರಿಸಿ.ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜು ಮಾಸ್ತಿಹಳ್ಳಾ ಕರವೇ ಜಿಲ್ಲಾಧ್ಯಕ್ಷರು ,ಲಂಬೋದರ ಗೌಡ ಘಟಕಾಧ್ಯಕ್ಷರು ಹಾಗೂ ಅಶೋಕೆ ಗ್ರಾಮಸ್ಥರು ತಿಳಿಸಿದ್ದಾರೆ.