ಡಿ. ೧೭ ಐತಿಹಾಸಿಕ ಅರಣ್ಯವಾಸಿಗಳ ರ‍್ಯಾಲಿಗೆ ಭರ್ಜರಿ ತಯಾರಿ.
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸಿ, ಸರಕಾರದ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ ಡಿ. ೧೭ ರಂದು ಶಿರಸಿಯಲ್ಲಿ ಜರುಗಲಿರುವ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಗೆ ಹೋರಾಟಗಾರರ ವೇದಿಕೆಯು ಐತಿಹಾಸಿಕ ರ‍್ಯಾಲಿಯನ್ನಾಗಿ ಜರಗಿಸಲು ವ್ಯಾಪಕವಾದ ಭರ್ಜರಿ ತಯಾರಿಯನ್ನು ಹಮ್ಮಿಕೊಂಡಿರುತ್ತದೆ.
ಹೋರಾಟಗಾರರ ವೇದಿಕೆ ಕಾರ್ಯಕರ್ತರು ಅರಣ್ಯ ಅತಿಕ್ರಮಣದಾರರ ಪ್ರದೇಶಕ್ಕೆ ಭೇಟ್ಟಿ ನೀಡಿ, ಅರಣ್ಯ ಅತಿಕ್ರಮಣದಾರರಿಗೆ ರ‍್ಯಾಲಿಯ ಮಹತ್ವ ಮತ್ತು ಅರಣ್ಯವಾಸಿಗಳ ಮುಂದಿನ ಸಮಸ್ಯೆಗಳ ಮಾಹಿತಿ ನೀಡುವ ಕಾರ್ಯ ಜಿಲ್ಲಾದ್ಯಂತ ಜರಗುತ್ತಿದೆ. ಹೋರಾಟಗಾರರ ವೇದಿಕೆಯು ನಿರಂತರ ೩೨ ವರ್ಷ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೋರಾಟ ಜರುಗಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕಿಗಾಗಿ ನಿರ್ಣಾಯಕ ಹೋರಾಟಕ್ಕೆ ಹೋರಾಟಗಾರರ ವೇದಿಕೆಯು ಸನ್ನದ್ಧವಾಗಿದ್ದು ಇರುತ್ತದೆ.
ಮಹತ್ವಪೂರ್ಣವಾದ “ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿ”ಯಲ್ಲಿ ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನ ಆಹ್ವಾನಿಸಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳನ್ನ ಮುಂದಿಡುವ ಪ್ರಯತ್ನ ಜಿಲ್ಲಾದ್ಯಂತ ಅರಣ್ಯ ಅತಿಕ್ರಮಣದಾರರ ಹೋರಾಟಗಾರರು ಮಾಡುತ್ತಿದ್ದಾರೆ.
ಶೇ. ೭೩ ರಷ್ಟು ಅರ್ಜೀ ತೀರಸ್ಕಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೯,೧೬೭ ಅರ್ಜಿಗಳು ದಾಖಲಿಸಿದ್ದು ಅವುಗಳಲ್ಲಿ ೨,೮೫೫ ಅರ್ಜಿಗಳಿಗೆ ಮಾತ್ರ ಬಾಧ್ಯತೆ ದೊರಕಿದೆ. ಸಲ್ಲಿಸುವಂತ ಅರ್ಜಿಗಳಲ್ಲಿ ೬೯,೭೩೩ ಅರ್ಜಿಗಳು ತೀರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಡಿ ೧೭ ರಂದು ಸಂಘಟಿಸಲಾದ ಬೃಹತ್ ರ‍್ಯಾಲಿ ಮಹತ್ವಪೂರ್ಣದಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.