ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ನಡೆಯಿತು ಸ್ವಉದ್ಯೋಗ ಕಾರ್ಯಾಗಾರ
ಭಟ್ಕಳ : ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ಶುಕ್ರವಾರ ಗ್ರಹ ಉದ್ಯೋಗ ಕಾರ್ಯಾಗಾರ ನಡೆಯಿತು. ಭಟ್ಕಳದ ನಾಗಯಕ್ಷಿ ಸಭಾಭವನದಲ್ಲಿ ನಡೆದ ಮಹಿಳಾ ಸ್ವಾವಲಂಬನೆ ಕಾರ್ಯಗಾರವನ್ನು ಸೇವಾ ಭಾರತಿ ಮಹಿಳಾ ಪ್ರಮುಖರಾದ ಬೆಳಗಾವಿಯ ದೀಪಾಲಿ ದಿಂಡೂರ ಮತ್ತು ಶಿಲ್ಪಾ ವರ್ಣೇಕರ್ ನಡೆಸಿಕೊಟ್ಟರು. ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಪ್ರಮುಖರಾದ ಜಗದೀಶ್ ಕಾರ್ಯಗಾರ ಮಾರ್ಗದರ್ಶನ ನೀಡಿದರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿ ಮಹಾನಗರ ಕಾರ್ಯವಾಹ ಸುದೀರ್ ಶೆಟ್ಟಿ ಅವರು ಮಹಿಳಾ ಸಂಘಟನೆ ಮತ್ತು ಉತ್ಪಾದನೆ ಸೂತ್ರದ ಮಹತ್ವವನ್ನು ತಿಳಿಸಿದರು.
ಭಾರತ್ ಮಾತಾ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ವಿನೂತನವಾಗಿ ಉದ್ಘಾಟಿಸಲಾಯಿತು.
ಆರೋಗ್ಯ ಭಾರತಿ ಮಹಿಳಾ ಪ್ರಮುಖರಾದ ಡಾಕ್ಟರ್ ನಮೃತಾ ನಾಯಕ ಅವರು ಉಪಸ್ಥಿತರಿದ್ದು ಮಹಿಳೆಯರಿಗೆ ಈ ಕಾರ್ಯಗಾರದ ಉಪಯೋಗವನ್ನು ಪಡೆದುಕೊಂಡು ಆರ್ಥಿಕ ಸ್ವಾವಲಂಬನೆಯ ದಾರಿಯಲ್ಲಿ ಸಾಗಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಯೋಗ ಶಿಕ್ಷಕಿ ಲತಾ ನಾಯಕ ಅವರು ಪ್ರಾರ್ಥನೆ ಮಾಡಿದರೆ, ನಿವೃತ್ತ ಸೈನಿಕ ಶ್ರೀಕಾಂತ್ ನಾಯಕ ಅವರು ವಂದಿಸಿದರು.
ಕಾರ್ಯಗಾರದಲ್ಲಿ ಭಟ್ಕಳ ನಗರ ಮತ್ತು ಸುತ್ತಮುತ್ತಲಿನ ಗ್ರಾಮದ ಸುಮಾರು 120 ಮಹಿಳೆಯರು ಮತ್ತು ಯುವತಿಯರು ಕಾರ್ಯಗಾರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.