ಭಟ್ಕಳ ತಹಸೀಲ್ದಾರ್ ಸುಮಂತ.ಬಿ ಅವರ ನೇತೃತ್ವದಲ್ಲಿ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಭಟ್ಕಳ- ತಾಲೂಕ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲೂಕ ತಹಶೀಲ್ದಾರ್ ಸುಮಂತ್ ಬಿ ಇ ಅವರ ನೇತ್ರತ್ವದಲ್ಲಿ ನಡೆಯಿತು. ಈ ಸಂಧರ್ಬದಲ್ಲಿ ಸಾರ್ವಜನಿಕರು ತಮ್ಮ ಕುಂದುಕೊರತೆಯನ್ನು ಸಭೆಯಲ್ಲಿ ಹೇಳಿಕೊಂಡರು ಹಾಗು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು ಮುಖ್ಯವಾಗಿ ಗ್ರಾಮದ ಅನೇಕ ಕೆರೆಗಳ ಹುಳೆತ್ತದೆ ಕೇರೆಗಳು ಮುಚ್ಚಿಹೊಗುತ್ತಿದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಕಾರಣ ಹುಳೆತ್ತುವ ಕಾರ್ಯ ಕೂಡಲೆ ನಡೆಯ ಬೇಕು ಹಾಗೆ ಗ್ರಾಮದಲ್ಲಿ ಅನೇಕ ಮನೆ ಅಂಗಡಿ ಮಳಿಗೆ ಹೀಗೆ ಅನೇಕ ಕಟ್ಟಡಗಳು ಟ್ಯಾಕ್ಸ ಇಲ್ಲದೆ ಇರುವುದರಿಂದ ಪಂಚಾಯತಿಗೆ ನಷ್ಟ ಉಂಟಾಗುತ್ತಿದೆ ಕೂಡಲೆ ಇಂತಹ ಕಟ್ಟಡಗಳಿಗೆ ಟ್ಯಾಕ್ಸ ಹಾಕುವ ಕೆಲಸ ಆಗ ಬೇಕು ಎಂದು ಹೇಳಿದರು.
ಹಾಗೆ ಮಟ್ಟಳ್ಳಿ ಬೈಪಾಸ್ ಅಂಡರ್ ಪಾಸ್ ಮಾಡಲು ಪ್ಲಾನ್ ರೇಡಿಯಾಗಿದ್ದರು ಇನ್ನು ಕಾಮಗಾರಿ ಪ್ರಾರಂಬವಾಗುತ್ತಲೆ ಇಲ್ಲಾ ಮೊನ್ನೆಯಷ್ಟೆ ಅಮಾಯಕರಾದ ಇಬ್ಬರು ಸಬ್ಬತ್ತಿ ಮೂಲದ ಯುವಕರು ಸಾವನ್ನಪ್ಪಿದ್ದಾರೆ ಕೂಡಲೆ ಈ ಬಗ್ಗೆ ಕ್ರಮ ಕೈಗೊಂಡು ಅಂಡರ್ ಪಾಸ್ ಕಾಮಗಾರಿ ಪ್ರಾರಂಬವಾಗಬೇಕು ಮತ್ತು ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ದೀಪ ಸೊಲಾರ್ ಬಲ್ಬ ವಾಯರ್ಸ ಖರಿದಿಯಲ್ಲಿ ಅವ್ಯವಹಾರ ನಡೆದಿರುತ್ತದೆ ಯಾವುದೆ ಟೆಂಡರ್ ಕರೆಯದೆ ಭ್ರಷ್ಟಾಚಾರ ನಡೆಸಿರುತ್ತಾರೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟಾಚಾರ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅರ್ಜಿ ಸಲ್ಲಿಸಿದರು
ಮತ್ತು ಮುಟ್ಟಳ್ಳಿ ಗೊರಜ್ಜಿಮನೆ ಪ್ರದೇಶದಲ್ಲಿ ಗುಡ್ಡ ಕುಸಿದು ತುಂಬ ನಷ್ಟ ಉಂಟಾಗಿದ್ದು ಗುಡ್ಡ ಕುಸಿದ ಮಣ್ಣನ್ನು ಇನ್ನು ತೆರವುಗೊಳಿಸಿರುವುದಿಲ್ಲಾ ಆ ಮಣ್ಣನ್ನು ತೆರವುಗೊಳಿಸಿಕೊಡಬೇಕು ಹಾಗು ಇಲ್ಲಿಯ 6 ಮನೆಗಳನ್ನು ತೆರವುಗೊಳಿಸಲು ಹೇಳಿದ್ದಾರೆ. ಆ ಮನೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಅರ್ಜಿಯನ್ನು ಸಲ್ಲಿಸಲಾಯಿತು ಹೀಗೆ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಅನೇಕ ಸಮಸ್ಯೆಗಳಿಗೆ ಮುಕ್ತಿ ಕಂಡುಕೊಳ್ಳಲು ಸಾರ್ವಜನಿಕರು ಪ್ರಯತ್ನ ಪಟ್ಟರು.
ಈ ಸಂದರ್ಬದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ, ಕ್ಷೇತ್ರ ಶಿಕ್ಷಣ ಅಧಿಕಾರಿ ದೇವಿದಾಸ ಮೊಗೇರ್, ಗ್ರಾಮ ಪಂಚಾಯತ್ ಅಧ್ಯಕ್ಷ ಶೆಷಗೀರಿ ನಾಯ್ಕ, ಉಪಾದ್ಯಕ್ಷೇ ಜಯಶ್ರೀ ನಾಯ್ಕ ಹಾಗು ಇತರ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.