ವೆಲ್ಫೇರ್ ಸೂಸೈಟಿಯ ಕಾರ್ಯದರ್ಶಿ ಸಾದುಲ್ಲಾ ಬರ್ಮಾವರ್ ನಿಧನ
ಭಟ್ಕಳ: ಭಟ್ಕಳದ ಬಡ್ಡಿರಹಿತ ಬ್ಯಾಂಕ್ ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯಲ್ಲಿ ಕಳೆದ ೨೦ ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈಯ್ಯದ್ ಸಾದುಲ್ಲಾ ಬರ್ಮಾವರ್(೮೩) ಭಾನುವಾರ ಅವರ ಸ್ವಗೃಹ ಆಝಾದ್ ನಗರದಲ್ಲಿ ನಿಧನ ಹೊಂದಿದರು.
ಅವರು ಇಂದು ಮಧ್ಯಾಹ್ನದವರೆಗೆ ಬ್ಯಾಂಕಿನ ಕರ್ತವ್ಯದಲ್ಲಿದ್ದು ಮಧ್ಯಾಹ್ನ ಊಟ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
೨೫ ವರ್ಷಗಳ ಕಾಲ ದುಬೈಯಲ್ಲಿ ಅಕೌಂಟೆAಟ್ ಆಗಿ ಸೇವೆ ಸಲ್ಲಿಸಿದ್ದ ಇವರು ೨೦೦೩ ರಿಂದ ಭಟ್ಕಳದ ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ಸಧ್ಯ ಅವರು ಜತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
೭ಪುತ್ರರು, ೨ ಪುತ್ರಿಯರನ್ನು ಹೊಂದಿದ್ದ ಇವರು ಭಟ್ಕಳದ ವಿವಿಧ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಾಮಾಜಿಕ ಧಾರ್ಮಿಕ ಸಂಘಸAಸ್ಥೆಗಳಲ್ಲಿಯೂ ಸಕ್ರೀಯರಾಗಿದ್ದರು.
ಇವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್, ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಅಧ್ಯಕ್ಷ ಸೈಯ್ಯದ್ ಶಕೀಲ್ ಎಸ್.ಎಂ, ತರಬಿಯತ್ ಎಜುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸೇರಿದಂತೆ ವಿವಿಧ ಸಂಘಸAಸ್ಥೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದು ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. (ಫೋಟೊ: ೧೮-ಬಿಕೆಎಲ್-೦೧-ಸೈಯ್ಯದ್ ಸಾದುಲ್ಲಾ ಬರ್ಮಾವರ್)