ಭಟ್ಕಳ್ದಲ್ಲಿ ಅಕ್ರಮ ಮಣ್ಣು ಸಾಗಾಟ ಲಾರಿ ಮೇಲೆ ತಹಶೀಲ್ದಾರ್ ದಾಳಿ- ಸುದ್ದಿ ಬಿತ್ತರಿಸಿದ ವೆಬ್ ಪೋರ್ಟಲ್ ಸಂಪಾದಕ ಜೇವೋತ್ತಮ ಪೈ ಗೆ ಅರೋಪಿಗಳಿಂದ ಜೀವ ಬೆದರಿಕೆ , ಹಲ್ಲೆಗೆ ಯತ್ನ, ಪೊಲೀಸರಿಂದ ಪ್ರಕರಣ ದಾಖಲು
ಭಟ್ಕಳ – ದಿನಾಂಕ 22-12-2022 ರಂದು ಅಪರಾಹ್ನ ಭಟ್ಕಳದಲ್ಲಿ ಲಾರಿಯಲ್ಲಿ ಅಕ್ರಮ ವಾಗಿ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ತಹಶಿಲ್ದಾರ ಸುಮಂತ ಬಿ.ಇ ಇವರಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರರು ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಅಕ್ರಮ ಕೆಂಪು ಮಣ್ಣು ಸಾಗಾಟದ ವಾಹನ ಪರಿಶಿಲಿಸಿ, ಅಕ್ರಮ ಮಣ್ಣು ಸಾಗಾಟ ಎಂಬ ಕಾರಣಕ್ಕೆ ಲಾರಿಯನ್ನು ಹಿಡಿದು ಭಟ್ಕಳ ಗ್ರಾಮಿಣ ಪೋಲೀಸ್ ಠಾಣೆಯ ಸುಪರ್ದಿಗೆ ನೀಡಿರುವ ಬಗ್ಗೆ ಲೊಕರ ಖಬರ್ ಎಂಬ ವೆಬ್ ಪೋರ್ಟಲ್ ನಲ್ಲಿ ಸುದ್ದಿ ಪ್ರಕಟಸಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಅಶೋಕ ನಾಯ್ಕ ಮುಟ್ಟಳ್ಳಿ ಮತ್ತು ಗಣಪತಿ ನಾಯ್ಕ ತಲಾಂದ ಇಬ್ಬರು ಲೊಕಲ್ ಖಬರ್ ಎಂಬ ವೆಬ್ಸೈಟ್ ನ ಸಂಪಾದಕ ಜೀವೋತ್ತಮ ಪೈ ಭಟ್ಕಳ ಇವರಿಗೆ ತಾಲೂಕಾ ಆಡಳಿತ ಸೌಧದ ಎದರುಗಡೆ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಟಿ-ಶರ್ಟ್ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆಯನ್ನು ಹಾಕಿದ್ದು ಈ ಸಂಭಂದ ಆರೋಪಿಗಳಿಬ್ಬರ ಮೇಲೆ ಜೇವೋತ್ತಮ್ ಪೈ ಭಟ್ಕಳ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಟ್ಕಳ ನಗರ ಠಾಣೆಯ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಅವರು ಪ್ರಕರಣ ದಾಖಲಿಸಿಕೊಂಡು, ಎಫ್.ಐ.ಆರ್ ಮಾಡಿದ್ದಾರೆ. ಈ ಸಂಭಂದ ಹೆಚ್ಣಿನ ತನಿಖೆಯನ್ನು ಕೈ ಗೊಂಡಿದ್ದಾರೆ.
ಭಟ್ಕಳದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೇ ಮಹಾಪರಾಧ ಎಂಬಂತೆ ಹಲ್ಲೆ ಮಾದ್ಯಮದವರ ಮೇಲೆ ಅಕ್ರಮ ದಂದೆಕೊರರು ಹಲ್ಲೆ ನಡೆಸುತ್ತಿದ್ದು , ಮಾಧ್ಯಮದವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಇಂತವರಿಗೆ ರಾಜಕಿಯ ವ್ಯಕ್ತಿಗಳ ಕೃಪಾಕಟಾಕ್ಷವು ಕಾರಣವಿರಬಹುದು ಎಂದು ಸಾರ್ವಜನಿಕವಾಗಿ ಬಹಿರಂಗವಾಗಿ ಭಟ್ಕಳ ನಗರಗಳಲ್ಲಿ ಅಲ್ಲಲ್ಲಿ ಗುಸು ಗುಸು ಚರ್ಚೆ ಮಾಡುತ್ತಿರುವುದು ಕೇಳಿ ಬರುತ್ತಿದೆ.
ರಾಜ್ಯದ ಹಲವು ಭಾಗಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದೆ, ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರ ಬಗ್ಗೆ ಹಲ್ಲೆ ನಡೆಸುವ ಬಗ್ಗೆ ಚರ್ಚೆ ನಡೆಸುತ್ತಿರುವುದು ವಿಷಾದನೀಯ ಸಂಗತಿ ಈ ಬಗ್ಗೆ ಸರ್ಕಾರ ಮತ್ತು ಜನ ಪ್ರತಿನಿಧಿಗಳು , ಪೊಲೀಸ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸಂವಿಧಾನದ 4 ನೇ ಅಂಗ ಎನಿಸಿಕೊಂಡ ಪತ್ರಕರ್ತರಿಗೆ ಜೀವಕ್ಕೆ ಭದ್ರತೆ ನೀಡುವಂತಹ ಕೆಲಸಗಳು ಆಗಬೇಕಿದೆ.