ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವುದು ಕಾಲದ ಬೇಡಿಕೆಯಾಗಿದೆ-ಅನಿವಾಸಿ ಉದ್ಯಮಿ ಅತಿಕರ‍್ರಹ್ಮಾನ್ ಮುನಿರಿ
ಎಸ್.ಐ.ಓ ದಿಂದ ಸೈಬರ್ ಕ್ರೈಮ್ ಮತ್ತು ಡಿಜಿಟಲ್ ಗೌಪ್ಯತೆ ಕುರಿತು ಕಾರ್ಯಾಗಾರ
ಭಟ್ಕಳ : ಇಂದು ಯುವಕರಲ್ಲಿ ತಲ್ಲಣವನ್ನುಂಟು ಮಾಡುತ್ತಿರುವ ಸೈಬರ್ ಅಪರಾಧಗಳು ವಿದ್ಯಾರ್ಥಿ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಕಾಲದ ಬೇಡಿಕೆಯಾಗಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಭಟ್ಕಳ್ ಮುಸ್ಲಿಮ್ ಖಲೀಝ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅತಿಕರ‍್ರಹ್ಮಾನ್ ಮುನಿರಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಸಂಜೆ ಇಲ್ಲಿನ ನವಾಯತ್ ಕಾಲೋನಿಯಲ್ಲಿರುವ ರಾಬಿತಾ ಸೂಸೈಟಿಯ ಕಾಝಿಯಾ ಮುಹಮ್ಮದ್ ಹಸನ್ ಸಭಾಂಗಣದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಭಟ್ಕಳ ಶಾಖೆ ಆಯೋಜಿಸಿದ್ದ ಸೈಬರ್ ಕ್ರೈಮ್ ಮತ್ತು ಡಿಜಿಟಲ್ ಗೌಪ್ಯತೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸೈಬರ್ ಅಪರಾಧ ತಡೆ ಕುರಿತಂತೆ ವಿದ್ಯಾರ್ಥಿಗಳಲ್ಲಿ ಚಿಂತನೆ ಮೂಡಿದ್ದೇ ಒಂದು ಅದ್ಭುತವಾಗಿದೆ. ಇಂತಹ ಚಿಂತನೆಗಳನ್ನು ಪ್ರತಿಯೊಬ್ಬ ಯುವಕರು ಬೆಳೆಸಿಕೊಂಡಾಗ ದೇಶದ ಪ್ರಗತಿ ಮತ್ತು ಉನ್ನತಿಯತ್ತ ಸಾಗುತ್ತದೆ ಎಂದು ಹೇಳಿದ ಅವರು ವಿದ್ಯಾರ್ಥಿ ಯುವಕರು ಸಕರಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ, ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಅಝೀಂ ಪ್ರೇಂಜಿ ವಿಶ್ವವಿದ್ಯಾಲಯದ ಉಪನ್ಯಾಸಕ ಮುಜಾಹಿದ್-ಉಲ್-ಇಸ್ಲಾಂ, ಡಿಜಿಟಲ್ ಗೌಪತ್ಯೆ ಕುರಿತಂತೆ, ಎಂ.ಎನ್.ಸಿ ಮಂಗಳೂರು ಇದರ ಸಿನಿಯರ್ ಸಾಫ್ಟೆ÷್ವÃರ್ ಇಂಜಿಯನಿಯರ್ ಸಲ್ಮಾನ್ ಕುದ್ರೋಳಿ ಸೈಬರ್ ಸೆಕ್ಯುರಿಟಿ ಕುರಿತಂತೆ ಮಾಹಿತಿ ನೀಡಿದರು.
ಎಸ್.ಐ.ಓ ಭಟ್ಕಳ ಶಾಖೆಯ ಕಾರ್ಯದರ್ಶಿ ಮಷಾಯಿಖ್ ತಾಲೀಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಲತೀಫ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನೀಯರು, ಯುವಕರು ಭಾಗವಹಿಸಿದ್ದರು.