ಭಟ್ಕಳ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಬ್ರಹತ ಸಭೆ
ಭಟ್ಕಳ-ಭಟ್ಕಳ ಬ್ಲಾಕ್ ಕಾಂಗ್ರೆಸ್ಸಿನ ವಿವಿಧ ಘಟಕಗಳ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯು ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ಸಿನ ಪ್ರಭಾವಿ ನಾಯಕರು ,ಮಾಜಿ ಶಾಸಕರಾದ ಸನ್ಮಾನ್ಯ ಮಂಕಾಳ್ ವೈದ್ಯರವರು ಅತೀ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದ್ದು ಚುನಾವಣೆ ಎದುರಿಸಲು ಸರ್ವಸನ್ನದ್ದರಾಗುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಭಟ್ಕಳದ 40% ಬಿಜೆಪಿಯ ಆಡಳಿತದೊಂದಿಗೆ ಅಧಿಕಾರಿಗಳು ಕೈಜೋಡಿಸಿರುವುದು ಮಾವಳ್ಳಿ ಗ್ರಾಮ ಪಂಚಾಯತ ಅವಿಶ್ವಾಸವನ್ನು ಸಕಾರಣ ವಿಲ್ಲದೆ ಮುಂದೂಡಿರುವುದು ಸಾಕ್ಷಿಕರಿಸಿದೆ ಎನ್ನುವ ಆತಂಕವನ್ನ ವ್ಯಕ್ತಪಡಿಸಿದರು. ಶಿರಾಲಿಯ ಹೆದ್ದಾರಿಯನ್ನು ಅಗಲಿಕರಿಸದೆ ತನ್ನ ಪೆಟ್ರೋಲ್ ಬಂಕಿನ ಹಿತಕ್ಕಾಗಿ ಬೇಂಗ್ರೆ ಹೆದ್ದಾರಿಯ ಸುತ್ತಮುತ್ತಲಿನ ಗಟಾರ ಕೆರೆಗಳನ್ನ ಮುಚ್ಚಿ ಸರ್ವೀಸ್ ರಸ್ತೆಯ ಮಾಡಿರುವುದು ಭಟ್ಕಳ ನಾಗರಿಕರ ದುರ್ದೈವದ ಸಂಗತಿಯಾಗಿದೆ ಎಂದು ವಿಷಾದವನ್ನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ಸಿನ ಸಂಯೋಜಕ ಭಾಸ್ಕರ ಪಟಗಾರ, ಮಾಜಿ ಶಾಸಕರಾದ ಜೆ.ಡಿ.ನಾಯ್ಕ, ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ವೆಂಕಟೇಶ ನಾಯ್ಕರವರು ಮಾತನಾಡಿದರು. ವೇದಿಕೆಯ ಮೇಲೆ ಜಯಶ್ರೀ ಮೊಗೇರ, ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನ ಪ್ರ. ಕಾರ್ಯದರ್ಶಿಗಳಾದ ಸುರೇಶ ನಾಯ್ಕ ನಿರ್ವಹಿಸಿದರೆ ದೇವಿದಾಸ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶ್ರೀಧರ್ ನಾಯ್ಕ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ, ಸಚಿನ್ ನಾಯ್ಕ, ಮಂಜುನಾಥ್ ನಾಯ್ಕ ಬೆಳಕೆ, ಟಿ.ಡಿ ನಾಯ್ಕ , ಸತೀಶ್ ಕುಮಾರ್ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.