ಅರಣ್ಯ ಸಿಬ್ಬಂದಿಗಳಿAದ ಅಮಾನುಷ್ಯ ಕೃತ್ಯ;
ಸಿಬ್ಬಂದಿಯ ಅಮಾನತ್ತಿಗೆ ಅಗ್ರಹ, ಇಲ್ಲದಿದ್ದಲ್ಲಿ ಅರಣ್ಯ ಕಚೇರಿಗೆ ಮುತ್ತಿಗೆ- ರವೀಂದ್ರ ನಾಯ್ಕ ತೀವ್ರ ಆಕ್ರೋಶ.
ಭಟ್ಕಳ: ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗಳ್ಳಿ ಗ್ರಾಮದ ಮಂಜುನಾಥ ನಾಗು ಮರಾಠಿ ಅನಾಧಿಕಾಲದ ಅರಣ್ಯ ಅತಿಕ್ರಮಣ ಸಾಗುವಳಿಯ ಗಿಡ, ನೀರಿನ ಪೈಪ್ ನಾಶಪಡಿಸಿರುವ ಕೃತ್ಯವನ್ನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರವಾಗಿ ಖಂಡಿಸಿ, ತಕ್ಷಣ ದೌರ್ಜನ್ಯವೆಸಗಿದ ಸಿಬ್ಬಂದಿಯನ್ನ ಅಮಾನತ್ತುಗೊಳಿಸಿ, ಅತಿಕ್ರಮಣದಾರರಿಗೆ ಉಂಟಾದ ನಷ್ಟವನ್ನ ಐದು ದಿನಗಳಲ್ಲಿ ಭರಿಸದಿದ್ದಲ್ಲಿ ಭಟ್ಕಳ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಿಬ್ಬಂದಿಗಳ ಕಾನೂನು ಕೃತ್ಯದ ವಿರುದ್ಧ ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಭಟ್ಕಳ ತಾಲೂಕ, ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ, ಮೊಗಳ್ಳಿ ಗ್ರಾಮದ ಅರಣ್ಯ ಅತಿಕ್ರಮಣದಾರನ ಸಾಗುವಳಿ ಭೂಮಿ ಆತಂಕಪಡಿಸಿ, ಅಡಿಕೆ ಗಿಡ ಕಿತ್ತು ಹಾಕಿ, ಗಿಡ ಮರಕ್ಕೆ ಇರುವ ನೀರಿನ ಸೌಲಭ್ಯದ ಪೈಪ್‌ಗಳನ್ನ ದ್ವಂಸಗೊಳಿಸಿ ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ನಷ್ಟ ಉಂಟುಮಾಡಿರುವ ಅರಣ್ಯ ಸಿಬ್ಬಂದಿಯ ಕೃತ್ಯದ ಕುರಿತು ಅವರು ಮೇಲಿನಂತೆ ಅಗ್ರಹಿಸಿದರು.
ಸಂತ್ರಸ್ಥ ಮಂಜುನಾಥ ನಾಗು ಮರಾಠಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ೨ ಏಕರೆ ೧೬ ಗುಂಟೆ ಜಿಪಿಎಸ್ ಆಗಿದ್ದು ಅತಿಕ್ರಮಣ ಕ್ಷೇತ್ರದಲ್ಲಿ ೪೦-೪೫ ವರ್ಷದ ಗೇರು ಮರ ಅಸ್ತಿತ್ವದಲ್ಲಿರುವ ಅಡಿಕೆ ಮರವನ್ನ ನಾಶಗೊಳಿಸಿರುವುದು ಕಾನೂನು ಬಾಹಿರ ಎಂದು ಅರಣ್ಯ ಸಿಬ್ಬಂದಿಗಳ ಕೃತ್ಯಕ್ಕೆ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಅರಣ್ಯ ಕಚೇರಿಗೆ ಮುತ್ತಿಗೆ:
ಮುಂದಿನ ಐದು ದಿನಗಳಲ್ಲಿ ದೌರ್ಜನ್ಯವೆಸಗಿದ ಸಿಬ್ಬಂದಿಯನ್ನ ಅಮಾನತ್ತುಗೊಳಿಸಿ, ಅತಿಕ್ರಮಣದಾರರಿಗೆ ಉಂಟಾದ ನಷ್ಟ ಭರಿಸಬೇಕು. ಇಲ್ಲದಿದ್ದಲ್ಲಿ, ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಎಚ್ಚರಿಸಿದ್ದಾರೆ.