ಅರಣ್ಯ ಭೂಮಿ ಹಕ್ಕು ಹೋರಾಟ;
೨೦೨೨- ಹೋರಾಟದ ವರ್ಷ.
ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟಗಾರರ ವೇದಿಕೆಯ ಪರ ಮೂವತ್ತೇರಡನೇ ವರ್ಷವಾದ ೨೦೨೨ ರಲ್ಲಿ ಹೋರಾಟದ ಇತಿಹಾಸದಲ್ಲಿಯೇ ವಿಭಿನ್ನ ಹೋರಾಟದ ಮೂಲಕ ‘೨೦೨೨- ಹೋರಾಟದ ವರ್ಷ’ವನ್ನಾಗಿ ಹೋರಾಟಗಾರರ ವೇದಿಕೆಯಿಂದ ಉಲ್ಲೇಖಿಸಲ್ಪಟ್ಟಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
೨೦೨೨ರಲ್ಲಿ ಹೋರಾಟಗಾರರ ವೇದಿಕೆಯಿಂದ ಸಾಂಘೀಕ ಮತ್ತು ಕಾನೂನಾತ್ಮಕ, ಕಾನೂನು ತಿಳುವಳಿಕೆ, ಉರುಳು ಸೇವೆ, ಅರಣ್ಯವಾಸಿಗಳನ್ನ ಉಳಿಸಿ, ಭೂಮಿ ಹಕ್ಕಿಗಾಗಿ ಹಳ್ಳಿ ಕಡೆ ನಡಿಗೆ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ತೀವ್ರ ಪ್ರತಿಭಟನೆ, ಪಾದಯಾತ್ರೆ, ಉಚಿತವಾಗಿ ಜಿಪಿಎಸ್ ಮೇಲ್ಮನವಿ ಅಭಿಯಾನ, ಸರಕಾರದೊಂದಿಗೆ ಸಮಾಲೋಚನೆ, ಕಾನೂನಾತ್ಮಕ ಅಂಶಗಳನ್ನ ಒಳಗೊಂಡಿರುವ ಮೂವತ್ತು ವರ್ಷ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ, ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಅರಣ್ಯವಾಸಿಗಳಿಗೆ ಜಾಗೃತೆ ಮೂಡಿಸುವ ಉದ್ದೇಶದಿಂದ ಹೋರಾಟದ ವಾಹಿನಿ ಮೂಲಕ ಜಾಗೃತ ಕಾರ್ಯಕ್ರಮ ಮುಂತಾದ ವಿಭಿನ್ನ ರೀತಿಯ ಹೋರಾಟಗಳು ೨೦೨೨ ನೇ ಇಸವಿಯ ಹೋರಾಟದ ಪುಟಗಳಿಗೆ ಇಂದು ಸೇರಲ್ಪಟ್ಟಿದೆ ಎಂದು ಅವರು ಹೇಳಿದರು.
ಸರಕಾರದ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೋರತೆಯಿಂದ ಸಮಸ್ಯೆಗೆ ಪರಿಹಾರ ದೊರಕದೇ ಇರುವುದು ವಿಷಾದಕರ. ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾಗಿರುವ ಅತಿಕ್ರಮಣದಾರÀರನ್ನ ಒಕ್ಕಲೆಬ್ಬಿಸುವುದಾಗಿ ಸಲ್ಲಿಸಿದ ಪ್ರಮಾಣ ಪತ್ರ ಅರಣ್ಯ ಅತಿಕ್ರಮಣದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸುಫ್ರೀಂ ಕೋರ್ಟನಲ್ಲಿ ಸರಕಾರ ಅರಣ್ಯವಾಸಿಗಳ ಪರ ನಿಲುವನ್ನು ಪ್ರಕಟಿಸಬೇಕೆಂದು ರವೀಂದ್ರ ನಾಯ್ಕ ಅಗ್ರಹಿಸಿದರು.
೧೬೩ ಗ್ರಾ.ಪಂ. ಯಲ್ಲಿ ಜಾಗೃತೆ:
ಅರಣ್ಯವಾಸಿಗಳ ವ್ಯಾಪಕ ಹೋರಾಟದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ೧೬೩ ಗ್ರಾಮ ಪಂಚಾಯತದಲ್ಲಿ ಹೋರಾಟಗಾರರ ವೇದಿಕೆಯ ನಿಯೋಗವು ಸಂಚರಿಸಿ ಅರಣ್ಯವಾಸಿಗಳಲ್ಲಿ ಅರಣ್ಯ ಭೂಮಿ ಹಕ್ಕಿಗೆ ಕುರಿತು ಜಾಗೃತೆ ಉಂಟುಮಾಡಿರುವುದು ೨೦೨೨ ರ ಹೋರಾಟದ ವಿಶೇಷತೆಯಲ್ಲಿ ಒಂದಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.