ಜ. ೭ ಶಿರಸಿಯಲ್ಲಿ ;
ಜಿಪಿಎಸ್ ಸರ್ವೇ ಆಕ್ಷೇಪಿಸಿ ಅರಣ್ಯ ಕಚೇರಿಗೆ ಮುತ್ತಿಗೆ- ರವೀಂದ್ರ ನಾಯ್ಕ.
ಶಿರಸಿ: ಕಾನೂನಿಗೆ ವ್ಯತಿರಿಕ್ತವಾಗಿ, ಅಸಮರ್ಪಕ ಜಿಪಿಎಸ್ ಆಧಾರದ ಅಡಿಯಲ್ಲಿ ಅರಣ್ಯ ಅತಿಕ್ರಮಣದಾರರ ಸಾಗುವಳಿಗೆಗೆ ಆತಂಕ ಉಂಟುಮಾಡುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಶಿರಸಿಯಲ್ಲಿ ಜನವರಿ ೭ ರಂದು ಬಂದ್ ಜರುಗಿದ ನಂತರ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ, ಅರಣ್ಯ ಇಲಾಖೆಯ ಕಾನೂನು ಬಾಹಿರ ಕೃತ್ಯ ಖಂಡಿಸಲಾಗುವುದೆAದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರಣ್ಯ ಅತಿಕ್ರಮಣದಾರರ ಕ್ಷೇತ್ರದ ಜಿಪಿಎಸ್ ಅಸಮರ್ಪಕವಾಗಿದ್ದು, ಕೃಷಿ ಚಟುವಟಿಕೆಗೆ ಸಂಬAಧಿಸಿದ ಕೊಟ್ಟಿಗೆ, ಗೊಬ್ಬರಗುಂಡಿ, ಹುಲ್ಲುಗಾವಲು, ಕೃಷಿ ಪೂರಕ ಚಟುವಟಿಕೆಯ ಪ್ರದೇಶವನ್ನ ಜಿಪಿಎಸ್ ಮಾಡುವ ಸಂದರ್ಭದಲ್ಲಿ ಹಾಗೂ ಅರ್ಜಿಯಲ್ಲಿ ಸಲ್ಲಿಸಿದ ಕ್ಷೇತ್ರ ಗಣನೆಗೆ ತೆಗೆದುಕೊಳ್ಳದೇ ಇರುವುದು ವಿಷಾದಕರ. ಈ ಕುರಿತು ಸಾಕಷ್ಟು ಸಾರೇ ಸಂಬAಧಿಸಿದ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾಗಿಯೂ ಸ್ಫಂಧಿಸದೇ ಇರುವುದು ವಿಷಾದಕರ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು ೩೨,೦೦೦ ಅಸಮರ್ಪಕ ಜಿಪಿಎಸ್ ಮೇಲ್ಮನವಿಯನ್ನು ಉಚಿತವಾಗಿ ಹೋರಾಟಗಾರರ ವೇದಿಕೆಯ ಸದಸ್ಯರಿಗೆ ಮಾಡುವ ಮೂಲಕ ಅಸಮರ್ಪಕ ಜಿಪಿಎಸ್ ವಿರುದ್ಧ ಕಾನೂನು ಹೋರಾಟ ಮಾಡುತ್ತಿದೆ ಎಂದು ಅವರು ಹೇಳಿದರು.
ಶೇ. ೭೩ ರಷ್ಟು ಜಿಪಿಎಸ್ ಸರ್ವೇ ದೋಷ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜರುಗಿದ ಜಿಪಿಎಸ್ ಸರ್ವೇಯಲ್ಲಿ ಶೇ. ೭೩ ರಷ್ಟು ಜಿಪಿಎಸ್ ಸರ್ವೇ ದೋಷದಿಂದ ಕೂಡಿದ್ದು, ಅರ್ಜಿ ಸಲ್ಲಿಸಿದವರಲ್ಲಿ ಶೇ. ೬ ರಷ್ಟು ಅತಿಕ್ರಮಣದಾರರ ಸಾಗುವಳಿ ಕ್ಷೇತ್ರದ ಜಿಪಿಎಸ್ ಆಗದೇ ಇರುವುದು ಕಾನೂನು ಅನುಷ್ಟಾನದಲ್ಲಿನ ವೈಪಲ್ಯವನ್ನು ತೋರಿಸುತ್ತದೆ ಎಂದು ರವೀಂದ್ರ ನಾಯ್ಕ ಹೇಳಿದರು