ಕಡು ಭ್ರಷ್ಟ ಲಂಚಬಾಕ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್ಆರ್) ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ
ಅಂಕೋಲಾ- ಜಮೀನಿನ ವಿಭಾಗ ನಕ್ಷೆ ರಚಿಸಿಕೊಡಲು ಲಂಚ ಬೇಡಿಕೆಯಿಟ್ಟ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್ಆರ್) ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಳೆದ 1 ತಿಂಗಳ ಹಿಂದಷ್ಟೇ ಪಾಂಡವಪುರದಿಂದ ಅಂಕೋಲಾಕ್ಕೆ ಪದೋನ್ನತಿ ಆಗಿ ಬಂದಿದ್ದ ಪುಟ್ಟಸ್ವಾಮಿ ಎನ್ನುವವರು, ವ್ಯಕ್ತಿಯೋರ್ವರ ಜಮೀನು (ವಿಭಾಗ ನಕ್ಷೆ ) ಮಾಡಿಕೊಡಲು ದೊಡ್ಡ ಮೊತ್ತದ ಲಂಚದ ಬೇಡಿಕೆ ಇಟ್ಟಿದ್ದು, ಈಗಾಗಲೇ ಕೆಲ ದಿನಗಳ ಹಿಂದೆ 5000 ರೂ. ಪಡೆದಿದ್ದು, ಜನವರಿ 6 ರಂದು ರೂ. 15,000 ನಗದು ಹಣವನ್ನು ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ರಾ.ಹೆ. 66 ರ ಎಪಿಎಂಸಿ ಮೈದಾನದ ಪಕ್ಕ ಇರುವ ಬಾರ್ ಮತ್ತು ಹೊಟೇಲಿನಲ್ಲಿ ರೆಡ್ ಹೆಂಡ್ ಆಗಿ ಖೆಡ್ಡಾಗೆ ಬಿದ್ದಿದ್ದು , ಅಲ್ಲಿಂದ ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ತಹಶೀಲ್ದಾರ ಕಾರ್ಯಾಲಯದ ಮೇಲ್ಮಹಡಿಯಲ್ಲಿರುವ ಭೂದಾಖಲೆಗಳ ಕಛೇರಿಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ.