ಬೊಲೆರೋ ಮತ್ತು ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವು
ಹೊನ್ನಾವರ-ತಾಲೂಕಿನ ಮಂಕಿ ಚಿತ್ತಾರ ಬಳಿಯ ಮುಂಡಾರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಬೊಲೆರೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಅಪಘಾತದ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಯುವಕನ್ನು ಮಾವಿನಕುರ್ವಾ ಮೂಲ ನಿವಾಸಿ ಹಾಲಿ ಹಡಿಕಲ್ ನಿವಾಸಿ ಸುಬ್ರಹ್ಮಣ್ಯ ರಾಮ ಗೌಡ ಎಂದು ಗುರುತಿಸಲಾಗಿದ್ದು,ಈತ ಪ್ರತಿದಿನ ಹೊನ್ನಾವರಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಈ ದಿನವೂ ಕೆಲಸಕ್ಕೆಂದು ಬೈಕಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬೋಲೇರೋ ಬೈಕ್ ನಡುವೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ.