ಭಟ್ಕಳದ ತಾಲೂಕ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ 74 ನೆ ಗಣರಾಜ್ಯೋತ್ಸವ ಆಚರಣೆ
ಭಟ್ಕಳ- ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನ ನಮ್ಮದು. ಇದು ನಾಗರೀಕರ ಹಕ್ಕುಗಳೇನು ಎನ್ನುವುದರ ಜೊತೆಗೆ ನಾಗರೀಕರ ಕರ್ತವ್ಯವನ್ನೂ ಹೇಳಿಕೊಡುತ್ತದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಹೇಳಿದರು.
ಅವರು ಗುರುವಾರ ಇಲ್ಲಿನ ತಾಲೂಕು ಕ್ರಿಡಾಂಗಣದಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಷ್ಟç ನಿರ್ಮಾಣದಲ್ಲಿ ನಮ್ಮ ಪಾತ್ರವೇನು? ಎಂಬುದರ ಕುರಿತಂತೆ ಇಂದು ನಾವೂ ಆಲೋಚನೆಯನ್ನು ಮಾಡಬೇಕಾಗಿದೆ. ಸಂವಿಧಾನದ ಆದರ್ಶ, ಮೌಲ್ಯ ಹಾಗೂ ಆಶಯಗಳನ್ನು ಎತ್ತಿ ಹಿಡಿಯುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಮಮತಾ ದೇವಿ ಕರೆ ನೀಡಿದರು.
ಶಾಸಕ ಸುನಿಲ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆ ಯಾರ ಸ್ವತಲ್ಲ ಅದನ್ನು ಯಾರು ಯಾವಾಗ ಬೇಕಾದರೂ ಗಳಿಸಬಹುದು ಎಂದು ತಿಳಿಸಿದರು, ದಿನದಿಂದ ದಿನಕ್ಕೆ ಸಾಧಕರ ಸಂಖ್ಯೆ ನಮ್ಮ ಭಟ್ಕಳದಲ್ಲಿ ಹೆಚ್ಚು ಆಗುತ್ತಿದ್ದು, ಈವತ್ತು ಈ ವೇದಿಕೆಯಲ್ಲಿ ಸನ್ಮಾನಿಸಿದ ಸಾಧಕರ ಸಂಖ್ಯೆಯೇ ಇದಕ್ಕೆ ಸಾಕ್ಷಿ ಎಂದು ನುಡಿದರು. ಈವತ್ತು ನಾವೆಲ್ಲರೂ ಭೇದ ಭಾವ ಮರೆತು ಒಗ್ಗಟ್ಟಾಗಿ ಹಬ್ಬದ ವಾತಾವರಣದ ಹಾಗೆ ಗಣರಾಜ್ಯೋತ್ಸವ ಆಚರಿಸುತ್ತಿದೆವೆ ಎಂದು ತಿಳಿಸಿದರು. ಪಶ್ಚಿಮ ಘಟ್ಟ ಸರಂಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಅವರು ಮುಖ್ಯ ಅತಿಥಿ ಆಗಿ ಭಾಗವಹಿಸಿ ಮಾತನಾಡಿದರು.
ತಹಸಿಲ್ದಾರ್ ಅಶೋಕ್ ಭಟ್ ಸ್ವಾಗತಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ರವೀಂದ್ರ ನಾಯ್ಕ ಧನ್ಯವಾದ ಅರ್ಪಿಸಿದರು.
ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶಿಮಜಿ, ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ, ಪೊಲೀಸ್ ಅಧೀಕ್ಷಕ ಶ್ರೀಕಾಂತ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ , ಲೋಕೋಪಯೋಗಿ ಇಂಜಿನಿಯರ್ ರಾಮು, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಎಮ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು, ಮನೋರಂಜನಾ ಕಾರ್ಯಕ್ರಮ ನಡೆಯಿತು.