ಮುರುಡೇಶ್ವರದಲ್ಲಿ ಎಂ.ಜಿ.ಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಐದನೇ ಶಾಖೆಯನ್ನು ಉದ್ಘಾಟಿಸಿದ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ
ಭಟ್ಕಳ-ಎಂ.ಜಿ.ಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಐದನೇ ಶಾಖೆಯನ್ನು ಶುಕ್ರವಾರ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ ಅವರು ದೀಪ ಬೆಳಗುವುದರ ಮೂಲಕ ಮುರುಡೇಶ್ವರದಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು. ಸಹಕಾರಿ ಧುರೀಣರು, ಉದ್ಯಮಿಗಳು ಆದ ಶ್ರೀ ಈರಪ್ಪ.ಎಂ.ಗರರ್ಡಿಕರ್ ಅವರ ಅಧ್ಯಕ್ಷತೆಯಲ್ಲಿ ಭಟ್ಕಳದ ಸರ್ಪನಕಟ್ಟೆಯಲ್ಲಿ ಆರಂಭಗೊಂಡಿರುವ ಈ ಸಂಘವು ಈಗ ತಾಲೂಕಿನಾದ್ಯಂತ ಬೆಳೆದು ನಿಂತು ಇದೀಗ 5 ನೆ ಶಾಖೆ ಮುರುಡೇಶ್ವರಲ್ಲಿ ಆರಂಭಗೊಂಡಿದೆ.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮಂಜುನಾಥ ನಾಯ್ಕ, ನಾಗಪ್ಪ ನಾಯ್ಕ, ಸುರೇಶ್ ನಾಯ್ಕ, ವಿಶ್ವನಾಥ್ ಶೆಟ್ಟಿ, ಗಣ್ಯರಾದ ಎಂ.ಆರ್ ನಾಯ್ಕ, ಪ್ರಕಾಶ್ ನಾಯ್ಕ, ಅಣಪ್ಪ ಅಬ್ಬಿಹಿತ್ಲು ಮುಂತಾದವರು ಉಪಸ್ಥಿತರಿದ್ದರು.