ಫೆ.11 ಮತ್ತು 12 ರಂದು ತಾಲೂಕಿನ ಶ್ರೀ ಯಕ್ಷೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಯಕ್ಷೆಮನೆ ಬೆಂಗ್ರೆ ಭಟ್ಕಳ ಇವರ ಆಶ್ರಯದಲ್ಲಿ ದೇವಡಿಗ ಸಮಾಜದವರಿಗೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ
ಭಟ್ಕಳ-ಫೆ.11 ಮತ್ತು 12ರಂದು ತಾಲೂಕಿನ ಶ್ರೀ ಯಕ್ಷೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಯಕ್ಷೆಮನೆ ಬೆಂಗ್ರೆ ಭಟ್ಕಳ ಇವರ ಆಶ್ರಯದಲ್ಲಿ ದೇವಡಿಗ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಬೆಂಗ್ರೆ ಶ್ರೀ ಕನ್ನಿಕಾ ಪರಮೇಶ್ವರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಮಾಜಿ ಅಧ್ಯಕಷ ವಿಷ್ಣು ದೇವಡಿಗ ಹೇಳಿದರು.
ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 30 ವರ್ಷಗಳಿಂದ ಶ್ರೀ ಯಕ್ಷೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವು ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಸೈ ಎನ್ನಿಸಿಕೊಂಡಿದೆ. ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಸಮಾಜದಲ್ಲಿ ಒಗ್ಗಟ್ಟು ತರುವ ನಿಟ್ಟಿನಲ್ಲಿ ಇದೀಗ ಫೆ.11 ಮತ್ತು 12ರಂದು ರಾಜ್ಯ ಮಟ್ಟದ ಕಬಡ್ಡಿ ಪಂದ್ಯವಳಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದ ವಿವಿದೆಡೆಯ 20 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಶಾಸಕ ಸುನಿಲ್ ನಾಯ್ಕ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಉಪಸ್ಥಿತರಿದ್ದು, ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಥಮ ಬಹುಮಾನವು ರು.33333 ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ ರು.22222 ಮತ್ತು ಶಾಶ್ವತ ಫಲಕ, ತೃತೀಯ ಬಹುಮಾನ ರು.11111 ಮತ್ತು ಶಾಶ್ವತ ಫಲಕಗಳನ್ನು ಒಳಗೊಂಡಿದೆ. ಉತ್ತಮ ರೈಡರ್, ಕ್ಯಾಚರ್, ಪಂದ್ಯಾವಳಿಯ ಸವ್ಯಸಾಚಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು. ಪಂಚಾಯತ ಸದಸ್ಯರಾದ ಶಿವರಾಮ ದೇವಡಿಗ, ಶ್ರೀ ಯಕ್ಷೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಶ ದೇವಡಿಗ, ಕಾರ್ಯದರ್ಶಿ ಮೋಹನ ದೇವಡಿಗ, ಸದಸ್ಯ ಮಹೇಶ ದೇವಡಿಗ ಮತ್ತಿತರರು ಉಪಸ್ಥಿತರಿದ್ದರು.