ಭಟ್ಕಳ ಪುರಸಭೆಯ ಕಚೇರಿ ಮುಂದೆ ಪುರಸಭಾ ವಾಣಿಜ್ಯ ಮಳಿಗೆ ಅಂಗಡಿಕಾರರಿಂದ ಪ್ರತಿಭಟನೆ
ಭಟ್ಕಳ-ಭಟ್ಕಳ ಪುರಸಭೆಯ ಮುಂದೆ ಪುರಸಭಾ ವಾಣಿಜ್ಯ ಮಳಿಗೆ ಅಂಗಡಿಕಾರರು ಫೆ.7 ರಂದು ನಡೆಯಬೇಕಾಗಿದ್ದ ನ್ಯಾಯಸಮ್ಮತವಾದ ಹರಾಜು ಪ್ರಕ್ರಿಯೆಯನ್ನು ಪುರಸಭಾ ಅಧ್ಯಕ್ಷರು ಉರ್ದು ಭಾಷೆಯ ಪತ್ರಿಕೆಗಳಲ್ಲಿ ಜಾಹಿರಾತು ಕೊಡಲಿಲ್ಲ ಅನ್ನುವ ಕಾರಣ ನೀಡಿ ಸಂಪೂರ್ಣ ಪ್ರಕ್ರಿಯೆಯನ್ನು ಮುಂದೂಡಿ ಗೊಂದಲ ಸೃಷ್ಟಿಮಾಡಲು ಹುನ್ನಾರು ನಡೆಸಿದಂತಿದೆ ಎಂದು ಆರೋಪಿಸಿ ಸೋಮವಾರ ಮದ್ಯಾಹ್ನ ಭಟ್ಕಳ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಅಂಗಡಿಕಾರರು ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಂಗಡಿಕಾರರಿಗೆ ಅನ್ಯಾಯ ಮಾಡಿ ಇತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುರಸಭೆಯ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು. ಒಂದೊಮ್ಮೆ ಈಗಾಗಲೇ ಡಿ.ಡಿ ಪಡೆದ ಅನಗಡಿಗಳುಗೆ ನಾಳೆ ಹರಾಜು ಪ್ರಕ್ರಿಯೆ ನಡೆಸದೆ ಇದ್ದರೆ ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೀಮೆ ಎಣ್ಣೆಯನ್ನು ಕ್ಯಾನನಲ್ಲಿ ತಂದು ಪುರಸಭೆ ಕಚೇರಿ ಎದುರು ತಂದು ಇಟ್ಟುಕೊಂಡು ಅಂಗಡಿಕಾರರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ, ಶಿಪಾದ ಕಂಚುಗಾರ, ಅಂಗಡಿಕಾರರಾದ ಸಂದೀಪ್ ಶೇಟ್, ರಾಮ ಬಳಿಗಾರ, ಕೃಷ್ಣಾನಂದ ಮುಂತಾದವರು ಉಪಸ್ಥಿತರಿದ್ದರು.