ಹಳಿಯಾಳಕ್ಕೆ ಇಎಸ್ಐ ಡಿಸ್ಪೆನ್ಸರಿ ಪ್ರಾರಂಭಿಸಲು ಜೆಡಿಎಸ ದಾಂಡೇಲಿ ತಾಲೂಕ ಅಧ್ಯಕ್ಷ ಅಕ್ರಮ್ ಖಾನ್ ಆಗ್ರಹ
ದಾಂಡೇಲಿ ..ಹಳಿಯಾಳ ಪಟ್ಟಣಕ್ಕೆ ಈ ಎಸ್ ಐ ಇಲಾಖೆಯಿಂದ ಕಳೆದ ಸಪ್ಟೆಂಬರ್ 2022ರಲ್ಲಿ ಡಿಸ್ಪೆನ್ಸರಿ ಮಂಜೂರಾತಿ ನೀಡಲಾಗಿತ್ತು ಆದರೆ ದುರ್ದೈವ ಸಂಗತಿ ಎಂದರೆ ಇಲ್ಲಿಯವರೆಗೆ ಡಿಸ್ಪೆನ್ಸರಿ ಪ್ರಾರಂಭಿಸಲು ಯಾವುದೇ ಕ್ರಮ ವಹಿಸಿದ್ದು ಇರುವುದಿಲ್ಲ ಹಳಿಯಾಳ ತಾಲೂಕಿನಲ್ಲಿ ಸುಮಾರು 3000 ಇಎಸ್ಐ ಕಾರ್ಡ್ಗಾರರು ಇದ್ದು ಮತ್ತು ಅವಲಂಬಿತ ಕುಟುಂಬದವರಿದ್ದರು. ಇಎಸ್ಐ ದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಕಾರಣ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ಮತ್ತು ಸ್ಥಳೀಯ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಕೂಡಲೇ ಹಳಿಯಾಳ ಪಟ್ಟಣಕ್ಕೆ ಡಿಸ್ಪೆನ್ಸರಿ ಪ್ರಾರಂಭಿಸಲು ಕ್ರಮ ವಹಿಸಬೇಕು ಕಾರಣ ಕಾರ್ಮಿಕರ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಮಾಡುವ ಸಿಬ್ಬಂದಿಗಳ ವೇತನದಿಂದ ಇಎಸ್ಐ ವಂತಿಗೆಯು ಕಡ್ಡಾಯವಾಗಿ ವೇತನದಿಂದ ಕಡಿತ ಮಾಡುತ್ತಾರೆ ಆದರೆ ಸಂಬಂಧಪಟ್ಟ ಈಎಸ್ಐ ಕಾರ್ಡ್ ದಾರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಈ ವಿಷಯದ ಬಗ್ಗೆ ಕೂಡಲೇ ಕ್ರಮ ವಹಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಅಕ್ರo ಖಾನ ಆಗ್ರಹಿಸುತ್ತಾರೆ.