*ಪೋಲ್ ವಾಲ್ಟ್ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ* ಪಡೆದು ವಿಶೇಷ ಸಾಧನೆಗೈದ ಸರಕಾರಿ ಪ್ರೌಢಶಾಲೆ ಚಿತ್ತಾರದ ವಿದ್ಯಾರ್ಥಿನಿ ಕುಮಾರಿ ಚಿತ್ರಾಕ್ಷೀ ಮರಾಠಿ ಇವರಿಗೆ ಗ್ರಾಮಸ್ಥರಿಂದ ಸನ್ಮಾನ
ಹೊನ್ನಾವರ- ಹೊನ್ನಾವರ ತಾಲೂಕಿನ ಚಿತ್ತಾರ ಪಂಚಾಯತದ ಅಡ್ಕೇಕುಳಿಯಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ *ಪೋಲ್ ವಾಲ್ಟ್ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ* ಪಡೆದು ವಿಶೇಷ ಸಾಧನೆಗೈದ ಸರಕಾರಿ ಪ್ರೌಢಶಾಲೆ ಚಿತ್ತಾರದ ವಿದ್ಯಾರ್ಥಿನಿ ಕುಮಾರಿ ಚಿತ್ರಾಕ್ಷೀ ಮರಾಠಿ ಇವಳನ್ನು ಶ್ರೀ ವನದುರ್ಗಿ ಅಮ್ಮನವರ ಸೇವಾ ಸಮಿತಿ ಹಾಗೂ ಸ್ಥಳೀಯರು, ಕುಂಬ್ರಿ ಮರಾಠಿ ಸಮುದಾಯದ ಉತ್ತರಕನ್ನಡ ಜಿಲ್ಲಾ ಸಮಿತಿ ಮತ್ತು ಹೊನ್ನಾವರ ತಾಲೂಕಾ ಸಮಿತಿ, ಶಾಲಾ ಶಿಕ್ಷಕ ವೃಂದ ಮತ್ತು ಹಿತೈಷಿಗಳ ಸಹಯೋಗದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ರಾಷ್ಟ್ರೋತ್ಥನ ಬೆಂಗಳೂರು ಇವರು ನಡೆಸುವ *ತಪಸ್* ಪರೀಕ್ಷೆಯಲ್ಲಿ ಆಯ್ಕೆಯಾದ ಕುಮಾರ್ ದೇವೇಂದ್ರ ಗೋವಿಂದ ಮರಾಠಿ ಇವರನ್ನು ಇದೆ ಸಂದರ್ಭದಲ್ಲಿ ಸನ್ಮಾನಸಲಾಯಿತು.
ಸಭೆಯಲ್ಲಿ ಊರಿನ ಮುಖಂಡರು ಶ್ರೀ ಬೋಮೂಡಾ ಮರಾಠಿ, ಶ್ರೀ ಶ್ರೀನಾಥ್ ಪುಜಾರಿ, ತಾಲೂಕಾಧ್ಯಕ್ಷ ಶ್ರೀ ರಮೇಶ್ ಮರಾಠಿ, ಗೌರವಾಧ್ಯಕ್ಷ ಶ್ರೀ ಗಿರಿಧರ ಮರಾಠಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರಾಠಿ, ದೈಹಿಕ ಶಿಕ್ಷಕ ಶ್ರೀ ಗೋಪಾಲ ಲಮಾಣಿ, ಶ್ರೀ ರುಕ್ಮ ಮರಾಠಿ, ಶ್ರೀ ಅಣ್ಣಯ್ಯ ನಾಯ್ಕ, ಶಾಲಾ ಶಿಕ್ಷಕರು ಶ್ರೀ ಗೋಪಾಲ ಪಟಗಾರ, ಶ್ರೀ ನಾಗಪ್ಪ ಅಂಗನವಾಡಿ ಶಿಕ್ಷಕಿ ವಿಜಯಾ ಮತ್ತು ಸ್ಥಳೀಯರಾದ ಶಿವು, ಸುರೇಶ್, ರುಕ್ಮ ಊರಿನ ನಾಗರಿಕರು, ಜಿಲ್ಲಾ ಸಮಿತಿ ಸದಸ್ಯರು ಹಾಗೂ ತಾಲೂಕಾ ಸಮಿತಿ ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಅಡ್ಕೇಕುಳಿ ಗ್ರಾಮದ ವಾದ್ಯವೃಂದದವರು ಮೆರವಣಿಗೆ ಮೂಲಕ ಮನೆಗೆ ತಲುಪಿಸಿದರು.