ಭಾರತದ ಈಶಾನ್ಯ ರಾಜ್ಯಗಳಾದ ತ್ರಿಪುರ,ನಾಗಾಲ್ಯಾಂಡ್ ಮೇಘಾಲಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು- ಭಟ್ಕಳ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ
ಭಟ್ಕಳ-ಭಾರತೀಯ ಜನತಾ ಪಾರ್ಟಿ ಭಟ್ಕಳ ತಾಲೂಕ ಬಿಜೆಪಿ ಮಂಡಲ ವತಿಯಿಂದ ಭಾರತದ ಈಶಾನ್ಯ ಭಾಗಗಳಾದ ತ್ರಿಪುರ,ನಾಗಾಲ್ಯಾಂಡ್ ಮೇಘಾಲಯಗಳ ಚುನಾವಣಾ ಅಭೂತ ಪೂರ್ವ ಯಶಸ್ಸಿಗಾಗಿ ಭಟ್ಕಳದ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಭಟ್ಕಳ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿಯ ಸಂಕಲ್ಪಕ್ಕೆ ಈಗಾಗಲೇ ನಾಂದಿ ಹಾಡಲಾಗಿದ್ದು ಈ ವಿಜಯ ಭದ್ರ ಬುನಾದಿಯಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಇಡೀ ಭಾರತವೇ ಒಪ್ಪಿಕೊಂಡಿದ್ದು ಖಂಡಿತವಾಗಿಯೂ ಮುಂಬರುವ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ
ಮಿಷನ್ 150 ರ ಸಂಕಲ್ಪದಲ್ಲಿ ಬಿಜೆಪಿ ವಿಜಯ ದುಂಧುಬಿ ಮೊಳಗಿಸಲಿದೆ ಎಂದರು.
ಈ ವೇಳೆ ಬಿಜೆಪಿ ತಾಲೂಕ ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಮಾಜಿ ತಾಲೂಕ ಅಧ್ಯಕ್ಷ ರಾಜೇಶ್ ನಾಯ್ಕ, ಪಾಂಡು ನಾಯ್ಕ, ಪುರಸಭೆ ಸದಸ್ಯ ಶ್ರೀಕಾಂತ್ ನಾಯ್ಕ, ರವಿ ನಾಯ್ಕ ಜಾಲಿ, ಮೋಹನ ನಾಯ್ಕ,ಬಿಜೆಪಿ ಕಾರ್ಯಕರ್ತರು, ಮುಂತಾದವರು ಉಪಸ್ಥಿತರಿದ್ದರು.