ಮನವಿ ನನ್ನದು, ತೀರ್ಮಾನ ನಿಮ್ಮದು :-
ನಾಗೇಂದ್ರ ನಾಯ್ಕ, ಭಟ್ಕಳ, ಹೈಕೋರ್ಟ್ ವಕೀಲರು
ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತದಾರ ಬಾಂಧವರಲ್ಲಿ ನನ್ನ ಸವಿನಯ ಮನವಿ. ಭಟ್ಕಳದಂತಹ ಚಿಕ್ಕ ಊರಿನಿಂದ ಜೀವನವನ್ನು ಆರಂಭಿಸಿದ ನಾನು ಉಚ್ಛ ನ್ಯಾಯಾಲಯದಲ್ಲಿ ಹಲವಾರು ವರ್ಷಗಳು ವಕೀಲನಾಗಿ ಸೇವೆಯನ್ನು ಸಲ್ಲಿಸಿರುತ್ತೇನೆ. ನನ್ನ ಹೆಸರನ್ನು ಸರ್ವೋಚ್ಚ ನ್ಯಾಯಾಲಯವು ಹಲವು ಬಾರಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಕೂಡ ಕೇಂದ್ರ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ನನ್ನನ್ನು ನೇಮಕ ಮಾಡಿರುವುದಿಲ್ಲ. ಇದು ಕೇವಲ ನನಗೆ ಮಾಡಿರುವ ಅನ್ಯಾಯವಲ್ಲದೆ, ಹಿಂದುಳಿದ ವರ್ಗಗಳಿಗೆ ಮಾಡಿರುವ ಅನ್ಯಾಯವಾಗಿರುತ್ತದೆ.
ಭಟ್ಕಳದ ಅಭಿವೃದ್ಧಿಗೆ ನನ್ನದೇ ಆದ ಒಂದು ಚಿಕ್ಕ ಪರಿಕಲ್ಪನೆಯಿದ್ದು, ಅದನ್ನು ಜಾರಿಗೊಳಿಸಲು ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುತ್ತೇನೆ, ನನ್ನ ಪರಿಕಲ್ಪನೆ ಈ ಕೆಳಗಿನಂತಿದೆ.
ಉದ್ಯೋಗ ಸೃಷ್ಟಿ: ಎನ್ಟಿಟಿಎಫ್ ಮತ್ತು ಜಿಟಿಟಿಸಿಯಂತಹ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲಾಭಿವೃದ್ಧಿ ಸಂಸ್ಥೆಗಳನ್ನು ರಚಿಸುವ ತುರ್ತು ಅಗತ್ಯವಿದೆ. ಇದು ಕಾರ್ಖಾನೆಯೊಂದಿಗೆ ಅಂತಹ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ. ನನ್ನ ಸಂಪರ್ಕಗಳು ಮತ್ತು ಸರ್ಕಾರದ ಬೆಂಬಲದೊAದಿಗೆ, ನಾನು ಭಟ್ಕಳದಲ್ಲಿ ಅಂತಹ ಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಇದರಿಂದ ಶಾಲೆ ಬಿಟ್ಟ ನಿರುದ್ಯೋಗಿ ವರ್ಗ ಮತ್ತು ವಿದ್ಯಾವಂತ ವಲಯದ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೆಳಲು ಇಚ್ಛಿಸುತ್ತೇನೆ.
ಕೃಷಿ ಕ್ಷೇತ್ರ:
ಭಟ್ಕಳದಲ್ಲಿ ಉಷ್ಣವಲಯದ ಹವಾಮಾನವಿದೆ. ಹವಾಮಾನವು ಕೃಷಿಗೆ ಉತ್ತಮವಾಗಿದೆ. ಕ್ಷೇತ್ರಕ್ಕೆ ಮಾರುಕಟ್ಟೆ ಬೆಂಬಲ ಮತ್ತು ಬೆಳೆಯುತ್ತಿರುವ ತಂತ್ರಜ್ಞಾನದ ಅಗತ್ಯವಿದೆ. ನನಗೆ ಕೃಷಿ ಕ್ಷೇತ್ರದಲ್ಲಿ ೧೦ ವರ್ಷಗಳ ಅನುಭವವಿದೆ. ನಾನು ಬೆಂಗಳೂರಿನ ಸುತ್ತಮುತ್ತಲಿನ ೧೧.೫ ಎಕರೆಯಲ್ಲಿ ಹೈಟೆಕ್ ಫ್ಲೋರಿಕಲ್ಚರ್‌ವನ್ನು ಅಭಿವೃದ್ಧಿಪಡಿಸಿದ್ದೇನೆ. ನೆದರ್‌ಲ್ಯಾಂಡ್, ಪೋರ್ಚುಗಲ್, ಟರ್ಕಿ, ಸ್ಪೇನ್, ವಿಯೆಟ್ನಾಂ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ ನಂತರ ಪಡೆದ ಅನುಭವವನ್ನು ಕೃಷಿ ಕ್ಷೇತ್ರಕ್ಕೆ ಬಳಸಿಕೊಳ್ಳಬಹುದು. ನಾನು ಪಡೆದ ಅನುಭವಗಳನ್ನು ಭಟ್ಕಳದ ಕೃಷಿ ಕ್ಷೇತ್ರದಲ್ಲಿ ಕೊಡುಗೆ ನೀಡಬಹುದು. ಕೃಷಿ ಮಾಡದ ಭೂಮಿಯ ಬಹುಪಾಲು ಭಾಗವನ್ನು ಸಾಂಪ್ರದಾಯಿಕ ಬೆಳೆಗಳಾದ ಅಡಿಕೆ ಮತ್ತು ತೆಂಗು ಮಾತ್ರವಲ್ಲದೆ ಇತರ ನರ್ಸರಿ ಬೆಳೆಗಳು ಮತ್ತು ತರಕಾರಿಗಳ ಕೃಷಿಗೆ ಒಳಪಡಿಸಬಹುದು. ೧ ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ೧೦ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದು ಭಟ್ಕಳದ ತಲಾ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಇಡೀ ಸನ್ನಿವೇಶವನ್ನು ಬದಲಾಯಿಸುತ್ತದೆ.
ಸರ್ಕಾರಿ ಶಾಲೆಗಳ ಆಧುನೀಕರಣ:
ಭಟ್ಕಳದ ಶಿಕ್ಷಣ ಕ್ಷೇತ್ರಕ್ಕೆ ಅಂಜುಮನ್ ಮತ್ತು ಗುರುಸುಧೀಂದ್ರ, ಸಿದ್ಧಾರ್ಥ, ಆರ್.ಎನ್.ಎಸ್.ನ ಕೊಡುಗೆ ಅದ್ವಿತೀಯವಾಗಿದೆ. ಆದರೆ ಈ ಭಾಗದ ಸರ್ಕಾರಿ ಶಾಲೆಗಳನ್ನು ಆಧುನೀಕರಣಗೊಳಿಸುವ ಅಗತ್ಯವಿದೆ. ಪುರವರ್ಗ ಪಬ್ಲಿಕ್ ಸ್ಕೂಲ್‌ನಲ್ಲಿ ನನ್ನ ಸಹಾಯದೊಂದಿಗೆ ಸಿದ್ಧಪಡಿಸಿರುವ ಸ್ಮಾರ್ಟ್ಕ್ಲಾಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಸಾರ್ವಜನಿಕ ಶಾಲೆಗಳನ್ನು ಅತ್ಯುತ್ತಮ ತಂತ್ರಜ್ಞಾನದೊAದಿಗೆ ಸುಧಾರಿಸಲು ಪ್ರಯತ್ನಪಡುತ್ತೇನೆ. ಬೋಧನಾ ವರ್ಗಕ್ಕೆ ತರಬೇತಿ ನೀಡಬಹುದು ಮತ್ತು ಹೊಸ ಶಿಕ್ಷಕರನ್ನು ಸಾರ್ವಜನಿಕ ಮತ್ತು ಪೋಷಕರ ಭಾಗವಹಿಸುವಿಕೆಯೊಂದಿಗೆ ತೊಡಗಿಸಿಕೊಳ್ಳಬಹುದು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ:
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರಕನ್ನಡದ ಜನರ ಕನಸಾಗಿದೆ. ಇದೊಂದು ಸಂಕೀರ್ಣ ಸಮಸ್ಯೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಿಂದ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಸಾಧ್ಯ.
ಸಹಕಾರಿ ಸಂಸ್ಥೆಗಳು:
ಸಹಕಾರಿ ಸಂಸ್ಥೆಗಳು ಸೊಸೈಟಿಯ ಬೆನ್ನೆಲುಬು. ನಾನು ಅಂತಹ ಸಂಸ್ಥೆಗಳನ್ನು ಕೃಷಿ ಉತ್ಪನ್ನಗಳ ಅಂತರಾಷ್ಟಿçÃಯ ಮಾರ್ಕೆಟಿಂಗ್ ಕಡೆಗೆ ಉತ್ತೇಜಿಸುತ್ತೇನೆ.
ಭಟ್ಕಳದಂತ ಗ್ರಾಮೀಣ ರಸ್ತೆ, ಚರಂಡಿ, ಕಟ್ಟಡಗಳು ತಲೆಯೆತ್ತಿ ನಿಂತರೆ ಮಾತ್ರ ಅಭಿವೃದ್ದಿಯಲ್ಲ. ಬದಲಾಗಿ ಕ್ಷೇತ್ರದ ಜನತೆಯನ್ನು ಕಾಡುತ್ತಿರುವ ಶಿಕ್ಷಣ, ಆರೋಗ್ಯ, ಉದ್ಯೋಗಗಳಿಗೆ ಸಂಬAಧಿಸಿದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ, ಅವರ ಜೀವನ ಮಟ್ಟ ಸುಧಾರಣೆಯಾಗಬೇಕೆಂಬ ಮಹದಾಸೆ ಹೊಂದಿದ್ದೇನೆ.
ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ:
ಅರಣ್ಯ ಅತಿಕ್ರಮಣದಾರರ ಪರ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರದ ಮೇಲೆ ಒತ್ತಡ.
ಅರಣ್ಯ ಅತಿಕ್ರಮಣದಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ,
ದಬ್ಬಾಳಿಕೆಗೆ ಕಡಿವಾಣ
ನಗರವ್ಯಾಪ್ತಿ ಅರಣ್ಯಭೂಮಿ ಅತಿಕ್ರಮಣದಾರರಿಗೆ ರ‍್ಯಾಯ ಮಾರ್ಗ
ರೂಪಿಸಿ ಹಕ್ಕುಪತ್ರ ನೀಡಿಕೆಗೆ ಕ್ರಮ.
ಅರಣ್ಯ ವಾಸಿಗಳ ಜನಜೀವನಕ್ಕೆ ಆತಂಕ ತಂದಿರುವ ದಿ//ಕಸ್ತೂರಿರಂಗನ್ ವರದಿ
ಜಾರಿಗೆ ವಿರೋಧ. ಭಟ್ಕಳದ ೨೭ ಗ್ರಾಮ, ಹೊನ್ನಾವರದ ೪೪ ಗ್ರಾಮಗಳು ಜನವಸತಿ
ಪ್ರದೇಶಗಳನ್ನು ವ್ಯಾಪ್ತಿಯಿಂದ ಹೊರಗಿಡಲು ಹೋರಾಟ.
ಹೊನ್ನಾವರ ತಾಲೂಕಿನ ೧೩೦೫ ಎಕರೆ ಭೂ ಪ್ರದೇಶ ಒಳಗೊಳ್ಳುವ ಶರಾವತಿ ಕಣಿವೆಯ ಜಲವಿದ್ಯುತ್ ಯೋಜನೆಯಡಿ ಗೆರಸೊಪ್ಪ ಜಲಾಶಯದ ಬಗ್ಗೆ ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ.
ಹೊನ್ನಾವರ (ಅನಿಲಗೋಡ) ಶರಾವತಿಯಿಂದ ಮಂಕಿ-ಮುರ್ಡೇಶ್ವರ ಮಾರ್ಗವಾಗಿ
ಶಿರಾಲಿ ತನಕ ಕುಡಿಯುವ ನೀರು, ಮಂಕಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗೆ ಉತ್ತೇಜನ
ನೀಡುವ ೭೫೦ ಕೋಟಿ ರೂ. ವೆಚ್ಛದ ಏತ ನೀರಾವರಿ ಯೋಜನೆ ಡಿ.ಪಿ.ಆರ್ ಸಿದ್ದವಾಗಿ ಸರ್ಕಾರದ ಮುಂದಿದ್ದು ಬಜೆಟ್‌ನಲ್ಲಿ ಘೋಷಣೆಗೆ ಪ್ರಯತ್ನ.
ಅಪ್ಪೆ ಮಿಡಿ ಮಾವು ತಳಿ ಅಭಿವೃದ್ಧಿಗೆ ಕ್ರಮ
ಗಿರಿಸಾಲು ಅಕ್ಕಿ ತಳಿ ಅಭಿವೃದ್ಧಿಗೆ ಕ್ರಮ
ಭಟಕಳ ಮಲ್ಲಿಗೆ ತಳಿ ಅಭಿವೃದ್ಧಿಗೆೆ ಕ್ರಮ
ಗೋಡಂಬಿ ಬೆಳೆ ಉತ್ತೇಜನಕ್ಕೆ ನೆರವು, ತೋಟಗಾರಿಕಾ ಇಲಾಖೆಯಿಂದ ಗೋಡಂಬಿ ಖರೀದಿಗೆ ಪ್ರಯತ್ನ
ಭಟ್ಕಳ-ಹೊನ್ನಾವರ ಮಧ್ಯಭಾಗದಲ್ಲಿ ಹಾಲು ಪ್ಯಾಕಿಂಗ್ ಘಟಕ ಸ್ಥಾಪನೆಗೆ ಪ್ರಯತ್ನ.
(ಸಾಗಣಿಕೆ ವೆಚ್ಚ ಕಡಿಮೆಯಾಗಿ ರೈತರಿಗೆ ಹೆಚ್ಚಿನದರ ಸಿಗುವ ಉದ್ದೇಶ) ಮತ್ತು
ಕೆ.ಎಮ್.ಎಫ್.ನಿಂದ ಹಾಲಿನ ಇತರೆ ಉತ್ಪನ್ನ ತಯಾರಿ ಘಟಕ ಸ್ಥಾಪನೆಗೆ ಯತ್ನ.
ಅಡಿಕೆ ಬೆಳೆಗೆ ತಗಲುವ ಶಿಲೀಂದ್ರ, ಕೊಳೆರೋಗಕ್ಕೆ ಪರಿಹಾರ ಕಂಡು ಹಿಡಿಯುವುದು ತಜ್ಞರೊಂದಿಗೆ ಚರ್ಚೆ.
ಕಾಲಕಾಲಕ್ಕೆ ರೈತರಿಗೆ ಕೊರತೆ ಆಗದಂತೆ ರಸಗೊಬ್ಬರ, ಬೀಜ, ಕ್ರಿಮಿನಾಶಕ ಪೂರೈಕೆಗೆ ಕ್ರಮ.
ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವ ಕಡವಿನ ಕಟ್ಟಾ ಡ್ಯಾಂನ ಹೂಳು ತೆಗೆಯಲು ಆದ್ಯತೆ, ಕೆಳಭಾಗದಲ್ಲಿ ನೀರು ಪೋಲಾಗದಂತೆ ತಡೆಯಲು ಕಿರು ಆಣೆಕಟ್ಟು ನಿರ್ಮಾಣಕ್ಕೆ ಪ್ರಯತ್ನ.
ಶರಾಬಿ ನದಿ ಹೂಳೆತ್ತಿ ಡಾರಂಟಾತನಕ ಎರಡೂ ಬದಿ ತಡೆಗೋಡೆ ನಿರ್ಮಾಣ.
ಕೋಗ್ತಿ ಕೆರೆ ಹೂಳೆತ್ತಿ, ತೀರದಲ್ಲಿ ಉದ್ಯಾನ ನಿರ್ಮಾಣಕ್ಕೆ ಪ್ರಯತ್ನ.
ಬೈಲೂರು ಸರಸ್ವತಿ ಹೊಳೆ ಹೂಳೆತ್ತಲು ಕ್ರಮ.
ಟೊಂಕಾದಿAದ ಗೊರ್ಟೆ ಕಡಲ ಕಿನಾರೆಯಲ್ಲಿ ಮೀನುಗಾರಿಕೆ ರಸ್ತೆ ನಿರ್ಮಾಣಕ್ಕೆ ಪ್ರಯತ್ನ.
ಭಟ್ಕಳ ಮೀನುಗಾರಿಕೆ ಬಂದರಿಗೆ ಕಾಯಕಲ್ಪ, ಹೂಳೆತ್ತುವದು, ಮಂಜುಗಡ್ಡೆ ಘಟಕ, ಪುನಶ್ಚೇತನ, ಮೂಲಭೂತ ಸೌಲಭ್ಯ ಕಲ್ಪಿಸುವುದು.
ತೆಂಗಿನಗುAಡಿ, ಅಳ್ವೇಕೋಡಿ ಬಂದರನ್ನು ವಾಣಿಜ್ಯ ಕೇಂದ್ರದ ಜೊತೆಗೆ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ.
ಕಾಸರಕೋಡ-ಟೊಂಕತೀರ ಪ್ರದೇಶದಲ್ಲಿ ಬಂದರು ಇಲಾಖೆ ಸ್ಥಳದಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡಲು ಕ್ರಮ.
೨೦೨೨ರ ಅಗಸ್ಟ್ ೨ರ ಮಳೆಯಿಂದಾಗಿ ದೋಣಿ, ಬಲೆ ಹಾನಿಗೊಳಗಾದ ಮೀನುಗಾರರಿಗೆ ಸರ್ಕಾರದ ನೆರವಿಗೆ ಪ್ರಯತ್ನ.
ಮೀನುಗಾರಿಕೆಗೆ ಅನುಕೂಲವಾಗುವಂತೆ ಕಾಲಕಾಲಕ್ಕೆ ಸೀಮೆ ಎಣ್ಣೆ, ಡೀಸೆಲ್ ಪೂರೈಕೆಗೆ ಕ್ರಮ.
ಮೀನುಗಾರಿಕಾ ವೃತ್ತಿಯನ್ನು ಅವಲಂಬಿಸಿರುವ ವಿವಿಧ ಜಾತಿ, ಧರ್ಮದವರ ವಸತಿ, ಆರೋಗ್ಯ ಶಿಕ್ಷಣಕ್ಕೆ ಉತ್ತೇಜನ.
ಕಾಸರಕೋಡ-ಟೊಂಕ ಬಂದರು ಸಮಸ್ಯೆ ಸೌಹಾರ್ದ ಪರಿಹಾರಕ್ಕೆ ಆದ್ಯತೆ. ಅಮಾಯಕರ ಮೇಲಿನ ಕೇಸು ಹಿಂದೆಗತಕ್ಕೆ ಪ್ರಯತ್ನ.
ಕರಾವಳಿ ಅಭಿವದ್ಧಿ ಪ್ರಾಧಿಕಾರದ ಮೂಲಕ ೨೪x೭ ಕಡಲ ಖಾದ್ಯ ಮಳಿಗೆ ಸ್ಫಾಪನೆಗೆ ಪ್ರಯತ್ನ.
ಒಣಮೀನು ಸಂಸ್ಕರಣ ಮತ್ತು ಪ್ಯಾಕಿಂಗ್ ಘಟಕ ಸ್ಥಾಪನೆಗೆ ಪ್ರಯತ್ನ.
ಆರೋಗ್ಯ:
ಅಪಘಾತ ಸಂದರ್ಭದಲ್ಲಿ ತುರ್ತುಚಿಕಿತ್ಸೆಗೆ ನೆರವಾಗುವುದಕ್ಕಾಗಿ ಹೊನ್ನಾವರದಲ್ಲಿ ಟ್ರಾಮಾ ಸೆಂಟರ್ ಮಂಜೂರಿಗೆ ಪ್ರಯತ್ನ.
ಕೋಸ್ಟಲ್ ಕರ್ನಾಟಕ ಎನ್.ಆರ್.ಐ. ಫೋರಮ್‌ರವರ ನೆರವು ಪಡೆದು ಭಟಕಳ-ಹೊನ್ನಾವರ ಗ್ರಾಮಾಂತರ ಪ್ರದೇಶಗಳಿಗೆ ಮೊಬೈಲ್‌ಕ್ಲಿನಿಕ್ ಸಂಚಾರಕ್ಕೆ ಪ್ರಯತ್ನ.
ಉತ್ತರಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳದಲ್ಲಿ ಏಮ್ಸ್ ಆಸ್ಪತ್ರೆ ಮಂಜೂರಿಗಾಗಿ ಪ್ರಯತ್ನ ಮತ್ತು ಬೆಂಬಲ.
ಸದ್ಯ ಮಂಗಳೂರಿನಲ್ಲಿರುವAತೆ ಶಿರಾಲಿ ಮತ್ತು ಮಂಕಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಎಂಡೋ ಸಲ್ಫಾನ್ ಪೀಡಿತರ ಪಾಲನಾ ಕೇಂದ್ರ ಮಂಜೂರಿಗೆ ಕ್ರಮ. ಇವರ ಸೇವೆಗಾಗಿ ಫಿಜಿಯೋಥೆರೆಪಿ ಘಟಕ, ಸೊಳ್ಳೆ ಪರದೆ, ವಾಟರ್ ಬೆಡ್, ಹೈಡ್ರಾಲಿಕ್ ಬೆಡ್, ವ್ಹೀಲ್‌ಚೇರ್ ಹಾಗೂ ವೈದ್ಯರನ್ನೊಳಗೊಂಡ ಸಂಚಾರಿ ಆರೋಗ್ಯ ವಾಹನಕ್ಕೆ ಪ್ರಸ್ತಾಪ.
ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವವರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಪೂರೈಕೆಗೆ ಕ್ರಮ.
ಆಶಾ ಕಾರ್ಯಕರ್ತರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಿ ವೇತನ ಹೆಚ್ಚಳಕ್ಕೆ ಪ್ರಯತ್ನ. ಆರೋಗ್ಯ ಕಾರ್ಯಕ್ರಮ ಬಿಟ್ಟು ಉಳಿದ ಕಾರ್ಯಕ್ಕೆ ಬಳಕೆಯಾಗದಂತೆ ಆದೇಶಕ್ಕೆ ಪ್ರಯತ್ನ. ಮುರ್ಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆದ್ಯತೆ.
ಶಿಕ್ಷಣ:
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೂ ಮುನ್ನ ವಿಶೇಷ ತರಬೇತಿಗೆ ಕ್ರಮ.
ಶೈಕ್ಷಣಿಕ ವರ್ಷಾರಂಭದಲ್ಲೇ ಸಮವಸ್ತç, ಪಠ್ಯಪುಸ್ತಕ ಲಭ್ಯತೆಗೆ ಆದ್ಯತೆ.
ಕನ್ನಡ ಶಾಲೆ ಅಳಿವು, ಉಳಿವಿಗೆ ಆದ್ಯತೆ
ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳನ್ನು ಮುಚ್ಚದಂತೆ ಎಚ್ಚರವಹಿಸುವುದು.
ಅನುದಾನರಹಿತ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನಕ್ಕೆ ಪ್ರಯತ್ನ.
೬೦ ವರ್ಷ ದಾಟಿದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ಅಥವಾ ಇಡಿಗಂಟು ವೇತನ ನೀಡಲು ಪ್ರಯತ್ನ.
ವೇತನ ಹೆಚ್ಚಳದ ಜೊತೆಗೆ ಪ್ರತಿ ತಿಂಗಳು ೫ನೇ ತಾರೀಕಿನೊಳಗೆ ವೇತನ ಪಾವತಿಗೆ ಕ್ರಮ.
ಅಂಗನವಾಡಿ ನೌಕರ ಹುದ್ದೆ ಪುನರ್‌ನಾಮಕರಣಕ್ಕೆ ಒತ್ತಡ.
ಶಾಸನಬದ್ಧ ಕರ್ತವ್ಯ ನಿರ್ವಹಣೆ ಆದ್ಯತೆಗೆ ಕ್ರಮ.
ಪ್ರಧಾನಮಂತ್ರಿ ಮಾತೃವಂದನಾ, ಪೋಷಣ ಅಭಿಯಾನದಡಿ ನೋಂದಣಿಯಾದ ತಾಯಿ ಕಾರ್ಡ್ ಫಲಾನುಭವಿಗೆ ತಲಾ ೫೦೦೦/- ರೂ. ಬಿಡುಗಡೆಗೆ ಕ್ರಮ.
ಪ್ರತಿದಿನ ಪ್ರತಿ ಫಲಾನುಭವಿಗೆ ರೂ. ೨೧ರ ಪೌಷ್ಠಿಕ ಆಹಾರ ನೀಡುವ “ಮಾತೃಪೂರ್ಣ” ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಯತ್ನ.
ಸಾರಿಗೆ:
ಭಟ್ಕಳದಲ್ಲಿ ಆರ್.ಟಿ.ಓ. ಕಛೇರಿ ಮಂಜೂರಿಗೆ ಪ್ರಯತ್ನ
ಮಂಕಿಯಲ್ಲಿ ಬಸ್ ನಿಲ್ದಾಣ ಮಂಜೂರಿಗೆ ಪ್ರಯತ್ನ
ಹೊನ್ನಾವರಕ್ಕೆ ಬಸ್ ಡಿಪೋ ಮಂಜೂರಿಗೆ ಪ್ರಯತ್ನ
ಲಗೇಜ್ ರಿಕ್ಷಾ, ಮ್ಯಾಕ್ಸಿ ಕ್ಯಾಬ್ ನಿಲ್ದಾಣಕ್ಕೆ ಸ್ಥಳ ಗುರುತಿಸುವಿಕೆಗೆ ಸಂಘಟನೆಯವರ ಪ್ರಯತ್ನಕ್ಕೆ ಬೆಂಬಲ.
ಆಟೋರಿಕ್ಷಾ ನಿಲ್ದಾಣ ಇಲ್ಲದ ಕಡೆ ಸ್ಥಳ ಗುರುತಿಸುವಿಕೆಗೆ ಪ್ರೋತ್ಸಾಹ
ಆಟೋಸ್ಟಾö್ಯಂಡ್‌ನಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ.
ಮ್ಯಾಕ್ಸಿಕ್ಯಾಬ್, ಲಗೇಜ್, ಆಟೋರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆಗೆ ಪ್ರೋತ್ಸಾಹ
ಭಟ್ಕಳ-ಬೈಂದೂರು ಹಾಗೂ ಭಟ್ಕಳ-ಹೊನ್ನಾವರ ಟೆಂಪೋ ನಿಲ್ದಾಣ ಗುರುತಿಸಲು ಕ್ರಮ
ಭಟ್ಕಳ-ಮಂಗಳೂರು ಮಾರ್ಗದ ಖಾಸಗಿ ಬಸ್ ನಿಲುಗಡೆಗೆ ಸ್ಥಳಾವಕಾಶಕ್ಕೆ ಪ್ರಯತ್ನ.
ವಾಯುವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಚಾಲಕ, ನಿರ್ವಾಹಕರಿಗೆ ನಿಯಮಿತವಾಗಿ ವರ್ಷಕ್ಕೆ ೨ ಬಾರಿ ಸಮವಸ್ತç ನೀಡಿಕಗೆ ಕ್ರಮ.
ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಅವಲಂಬಿತ ಗ್ರಾಮೀಣ ಸಾರಿಗೆ ವ್ಯವಸ್ಥೆ ಸರಿಪಡಿಸಲು ಕ್ರಮ.
ಕ್ರೀಡೆ:
ಭಟಕಳದಲ್ಲಿ ಕಬಡ್ಡಿ ಆಟದ ಉತ್ತೇಜನಕ್ಕಾಗಿ ರಜಾಕಾಲದ ತರಬೇತಿ ಶಿಬಿರ ಆಯೋಜನೆ. ಪ್ರತಿ ವರ್ಷ ಕಿರಿಯರ, ಹಿರಿಯರ ಪಂದ್ಯಾಟ.
ಭಟಕಳ-ಹೊನ್ನಾವರ ಕ್ಷೇತ್ರದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು.
ಹೊನ್ನಾವರದ ಒಕ್ಕಲಿಗರ ಸ್ಪೋರ್ಟ್ಸ್ಕ್ಲಬ್‌ಗೆ ಪ್ರೋತ್ಸಾಹ.
ಭಟಕಳದಲ್ಲಿ ನಡೆಸುತ್ತಿರುವ “ಕೋಣನ ಕಂಬಳ”ಕ್ಕೆ ಮರುಜೀವ ನೀಡಿ ಕುಂಟವಾಣಿ, ಕಂಚಿಕೇರಿ, ಗೊರ್ಟೆ, ಯಲ್ವಡಿ, ಮುಂಡಳ್ಳಿ, ಮುಟ್ಟಳ್ಳಿಯಲ್ಲಿ ವಾರ್ಷಿಕವಾಗಿ ಕಂಬಳ ಆಯೋಜನೆಗೆ ಪ್ರೋತ್ಸಾಹ.
ಭಟಕಳ ತಾಲೂಕು ಕ್ರೀಡಾಂಗಣ ಸಮಸ್ಯೆಯನ್ನು ಸೌಹಾರ್ದ ಬಗೆಹರಿಸಿ, ಗ್ಯಾಲರಿ, ರನ್ನಿಂಗ್ ಟ್ರಾö್ಯಕ್, ಕಬಡ್ಡಿ, ವಾಲಿಬಾಲ್, ಖೋಖೋ ಕೋರ್ಟ್ ನಿರ್ಮಾಣಕ್ಕೆ ಕ್ರಮ.
ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಮೈದಾನದ ಉನ್ನತೀಕರಣಕ್ಕೆ ಪ್ರೋತ್ಸಾಹ.
ಸಂಕೀರ್ಣ:
ಭಟ್ಕಳದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಪುರಭವನ ಪಕ್ಕದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವುದು. (ಸುಧೀಂದ್ರ ಕಾಲೇಜ್ ಎದುರು).
ಭಟ್ಕಳದ ಸಮಸ್ತ ಗುರುವೃಂದವನ್ನು ಪ್ರತಿನಿಧಿಸುವ ಗುರುಭವನ ನಿರ್ಮಾಣ ಮಾಡಿ ಗುರುಕಾಣಿಕೆ ಅರ್ಪಿಸುವುದು. (ಪುರಭವನ ಸಮೀಪ)
ಹೊನ್ನಾವರ ಉಪ ನೋಂದಣಿ ಕಛೇರಿಯ ಸಿಬ್ಬಂದಿ ಆಯೋಜನೆ, ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ.
ಇಡಗುಂಜಿ, ಅಪ್ಸರಕೊಂಡ, ಮುರ್ಡೇಶ್ವರವನ್ನೊಳಗೊಂಡ ಟೂರಿಸಂ ಹಬ್ ಸ್ಥಾಪನೆಗೆ ಪ್ರಯತ್ನ.
ಮೂಡಭಟ್ಕಳ, ಬಸ್ತಿ ಸಮೀಪ ಅಂಡರ್‌ಪಾಸ್ ರಸ್ತೆ ನಿರ್ಮಾಣಕ್ಕೆ ಪ್ರಯತ್ನ. ಶಿರಾಲಿ ರಾಷ್ಟಿçÃಯ ಹೆದ್ದಾರಿ ವಿಸ್ತಾರ ಸಮಸ್ಯೆಗೆ ಸೌಹಾರ್ದ ಪರಿಹಾರ ಯತ್ನ.
ಭಟ್ಕಳ ನಗರದ ಕ್ವಾಲಿಟಿ ಹೊಟೇಲ್‌ನಿಂದ ತೆಂಗಿನಗುAಡಿ ಕ್ರಾಸ್‌ತನಕ ರಾಷ್ಟಿçÃಯ ಹೆದ್ದಾರಿ ಫ್ಲೆöÊಓವರ್ ರಸ್ತೆ ನಿರ್ಮಾಣಕ್ಕೆ ಒತ್ತಡ.
೨೦೨೨ರ ಆಗಸ್ಟ್ ೨ರ ಮಳೆಯಿಂದ ಹಾನಿಗೊಳಗಾದ ಭಟ್ಕಳ ನಗರದ ಅಂಗಡಿಕಾರರ ನಷ್ಟ ಪರಿಹಾರ ಮಂಜೂರಿಗೆ ಪ್ರಯತ್ನ.
ಒಕ್ಕಲಿಗರ ಕರಿಯರ್ ಅಕಾಡೆಮಿ ಮತ್ತು ಭೈರವಿ ಮಹಿಳಾ ಪತ್ತಿನ ಸಂಘದ ಚಟುವಟಿಕೆಗಳಿಗೆ ಪ್ರೋತ್ಸಾಹ.
ಪದೇ ಪದೇ ನೆರೆಹಾವಳಿಗೆ ತುತ್ತಾಗುವ ಚಿಕ್ಕನಕೋಡ್ ಕೆಂಚಗಾರ, ಗುಂಡಿಬೈಲ್ ಗುಂಡಬಾಳ, ಹೆಬ್ಬೆöÊಲ್, ಮುಟ್ಟಾ ಮತ್ತಿತರ ಭಾಗದ ಕುಟುಂಬಗಳಿಗೆ ಶಾಶ್ವತ ಪುನರ್ವಸತಿಗೆ ಕ್ರಮ.
ಭಟ್ಕಳ-ಹೊನ್ನಾವರದಲ್ಲಿ ಸಂಚಾರಿ ಮತ್ತು ಮಹಿಳಾ ಪೋಲೀಸ್ ಠಾಣೆ ಮಂಜೂರಿಗೆ ಪ್ರಯತ್ನ.
ಕರ್ನಾಟಕ ರಾಜ್ಯ ಎನ್.ಪಿ.ಎಸ್. ನೌಕರರ ಬೇಡಿಕೆಗಳ ಕುರಿತು ಸದನದಲ್ಲಿ ಪ್ರಸ್ತಾಪ ಮತ್ತು ನಿರಂತರ ನೈತಿಕ ಬೆಂಬಲ.
ಕರ್ನಾಟಕ ಗ್ರಾಮ ಪಂಚಾಯತ ನೌಕರರ ಬೇಡಿಕೆಗಳ ಕುರಿತು ಸ್ಪಂದನೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮೀಸಲಿರುವ ಸರ್ವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಾರ್ಮಿಕರಿಗೆ ತಲುಪಿಸಲು ಪ್ರಯತ್ನ.
ಭಟ್ಕಳ-ಹೊನ್ನಾವರ ಸರ್ಕಾರಿ ಕಛೇರಿಗಲ್ಲಿ ಪ್ರಭಾರಿಗಳ ಆಡಳಿತಕ್ಕೆ ಮುಕ್ತಿ.
ಜೀವಜಲ ಪರಿಸರ ರಕ್ಷಣೆಯ ಉದ್ದೇಶದ “ಶರಾವತಿಗೆ ಆರತಿ” ಕಾರ್ಯಕ್ರಮ ನದಿಯ ೨ ದಡದ ಪ್ರಮುಖ ಸ್ಥಳಗಳಲ್ಲಿ ಆಯೋಜನೆ.
ಪ್ರತಿವರ್ಷ ಪೋಲೀಸ್ ಮಕ್ಕಳ ಕ್ರೀಡಾಕೂಟಕ್ಕೆ ನೆರವು. ಪ್ರತಿವರ್ಷ ಪೊಲೀಸ್ ಮಕ್ಕಳ ಸಾಂಸ್ಕೃತಿಕ ಉತ್ಸವ ಪೊಲೀಸ್ ವಸತಿ ಗೃಹ, ಪೋಲೀಸ್ ಮೈದಾನಕ್ಕೆ ಕಾಯಕಲ್ಪ.
ಭಟ್ಕಳ ಹೊನ್ನಾವರ ಕ್ಷೇತ್ರದ ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ದತ್ತು ಪಡೆದು ಮುಂದಿನ ಹಂತಕ್ಕೆ ತರಬೇತಿ ಜವಾಬ್ದಾರಿ.
ಕರ್ನಾಟಕ ಸರ್ಕಾರ ನೌಕರರ ಸಂಘಕ್ಕೆ ಶಿವಮೊಗ್ಗ ಮಾದರಿಯಲ್ಲಿ ಭಟ್ಕಳ-ಹೊನ್ನಾವರದಲ್ಲಿ ರಿಯಾಯಿತಿ ದರದ ಸೂಪರ್ ಮಾರ್ಕೆಟ್ ಸ್ಥಾಪನೆಗೆ ನೆರವು.
ಈ ಎಲ್ಲಾ ಪರಿಕಲ್ಪನೆಗಳನ್ನು ಜಾರಿಗೊಳಿಸಲು ನನಗೆ ವಿದ್ಯಾವಂತ, ಜಾಗ್ರತಾ ನಾಗರೀಕರ ಸಹಕಾರ ಅಗತ್ಯ ಚುನಾವಣೆಗೆ ಅತಿ ಕಡಿಮೆ ಅವಧಿ ಉಳಿದಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕಿಯಿಸಲು ಆಸಕ್ತಿ ಉಳ್ಳವರು ಈ ಕೆಳಕಂಡ ವಾಟ್ಸಪ್ ನಂಬರ್‌ಗೆ ಪ್ರತಿಕ್ರಿಯಿಸಬಹುದು.
ನಾಗೇಂದ್ರ ನಾಯ್ಕ, ಹೈ ಕೋರ್ಟ್ ವಕೀಲರು ,
ಮೊಬೈಲ್ ನಂಬರ್ : ೯೧೪೧೭೦೯೬೭೪
ಇಮೇಲ್: nagendranaik@gmail.com