ಶಿರಸಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ವಕೀಲ ರವೀಂದ್ರ ನಾಯ್ಕ ಅವರಿಗೆ ಬೆಂಬಲಿಗರಿಂದ ಭಾರಿ ಒತ್ತಡ
ಶಿರಸಿ- ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎ.ಎಲ್.ಎ ಟಿಕೆಟ್ ಆಕಾಂಕ್ಷಿಯಾದ , ಅರಣ್ಯ ಭೂಮಿ ಅತಿಕ್ರಮಣ ಹೊರಾಟಗಾರರ ಜಿಲ್ಲಾ ಅಧ್ಯಕ್ಷರಾದ ವಕೀಲ ರವೀಂದ್ರ ನಾಯ್ಕ ಶಿರಸಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಅವರಿಗೆ ಬೆಂಬಲಿಗರಿಂದ ಮತ್ತು ಅರಣ್ಯ ಅತಿಕ್ರಮಣದಾರರಿಂದ ಭಾರಿ ಒತ್ತಡ ಬಂದಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಈಗಾಗಲೇ ಸಿದ್ದಾಪುರದಲ್ಲಿ ರವೀಂದ್ರ ನಾಯ್ಕ ಅವರ ಬೆಂಬಲಿಗರ ಸಭೆ ನಡೆದಿದ್ದು , ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಇಂದು ಬೆಳ್ಳಿಗೆ ಕಾಂಗ್ರೆಸ್ ಪಕ್ಷದ 2 ನೆ ಪಟ್ಟಿಯಲ್ಲಿ ಶಿರಸಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟೀಕೆಟ ಭೀಮ್ಮಣ್ಣ ನಾಯ್ಕ ಅವರಿಗೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಹಲವು ಸಾಮಾಜಿಕ ಹೋರಾಟಗಳ ಮೂಲಕ ಬಡವರ ಪರ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ವಕೀಲ ರವೀಂದ್ರ ನಾಯ್ಕ ಅವರಿಗೆ ರಾಜಕೀಯವಾಗಿ ಅನ್ಯಾಯವಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಅಭಿಪ್ರಾಯವಾಗಿದೆ.