ಭಟ್ಕಳದ ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಭಟ್ಕಳ- ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ , ಬಂದರ ರೋಡ, ಮುಗ್ದುಂ ಕಾಲನಿ. 5ನೇ ಕ್ರಾಸ್, ಭಟ್ಕಳ ಇವರು ಸೋಮವಾರ ಭಟ್ಕಳ -ಹೊನ್ನವಾರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ. ಈವರು 50ಕ್ಕೂ ಹೆಚ್ಚು ತಮ್ಮ ಮುಸ್ಲಿಂ ಸಮುದಾಯದ ಬೆಂಬಲಿಗರೊಂದಿಗೆ ಭಟ್ಕಳ ಎ.ಸಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಇಂದು ನಾಮಪತ್ರ ಸಲ್ಲಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿ ಭಟ್ಕಳ -ಹೊನ್ನವಾರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ದ್ರಷ್ಟಿಯಿಂದ ಸ್ಫರ್ಧೆ ಮಾಡಿರುವುದಾಗಿ ತಿಳುಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಂತೋನ ಜುಜೆ ಲೂಯಿಸ್, ವಕೀಲ ಸಾವೇರ್ ಲೂಯಿಸ್ ಮುಂತಾದವರು ಉಪಸ್ಥಿತರಿದ್ದರು.