ಕುಮಟಾ- ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೂರಜ್ ನಾಯ್ಕ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ
ಕುಮಟಾ-ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ನಾಯ್ಕ್ ಸೋನಿಯವರು ಗೆಲುವಿನ ಹುಮ್ಮಸ್ಸಿನೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ ಸೂರಜ್ ನಾಯ್ಕ್ ಸೋನಿ ಅಂದರೆ ಪ್ರತಿಯೊಬ್ಬರಿಗೂ ಪರಿಚಯ ಯುವಕರ ನಾಯಕ ಎಂದೇ ಖ್ಯಾತಿಗಳಿಸಿದ ಪ್ರಭಾವಿ ನಾಯಕ ಜನರ ಸಮಸ್ಯೆಗಳಿಗೆ ಕೈ ಜೋಡಿಸಿದ ನಾಯಕ ಕರೋನಾ ಸಮಯದಲ್ಲಿ ಜನರ ಕಷ್ಟಗಳಿಗೆ ಕೈಜೋಡಿಸಿ ಜನರ ಜೊತೆ ಸದಾ ನಿಲ್ಲುವ ಮೂಲಕ ಜನರಿಗೆ ಹತ್ತಿರವಾಗುತ್ತೀರುವ ನಾಯಕ, ಅಧಿಕಾರದಲ್ಲಿ ಇಲ್ಲದಿದ್ದರೂ ಬೃಹತ್ ಉದೋಗ್ಯ ಮೇಳ ವನ್ನು ಹಮ್ಮಿಕೊಂಡು ಉದ್ಯೋಗ ಇಲ್ಲದೇ ಮನೆಯಲ್ಲಿ ಇದ್ದವರಿಗೆ ಉದ್ಯೋಗ ಒದಗಿಸಿದ ನಾಯಕ ಈ ಬಾರಿ ಮತ್ತೊಮ್ಮೆ ಅಖಾಡಕ ಕೆ ಇಳಿದಿದ್ದು ತಮ್ಮದೇ ಆದ ಶೈಲಿಯಲ್ಲಿ ಪ್ರಚಾರವನ್ನು ಪ್ರಾರಂಭಮಾಡಿದ್ದಾರೆ. ಈ ಬಾರಿ ಯುವಕರ ಸಮೂಹವೇ ಸೂರಜ ನಾಯ್ಕ್ ರ ಪರವಾಗಿ ಇದ್ದು ಈ ಬಾರಿ ಸೂರಜ್ ನಾಯ್ಕ್ ಅವರನ್ನು ಕ್ಷೇತ್ರದ ಶಾಸಕರಾಗಿ ತರಲೇಬೇಕು ಎಂದು ಪಣ ತೊಟ್ಟಿದ್ದಾರೆ.ಕಾಂಗ್ರೆಸ್ ಒಳ ಜಗಳ ಸೂರಜ್ ನಾಯ್ಕ ಅವರಿಗೆ ಬಹುತೇಕ ಲಾಭವಾಗುವ ಸಾಧ್ಯತೆ ಇದೆ. ಹಾಲಿ ಶಾಸಕ ದಿನಕರ ಶೆಟ್ಟಿ ಅವರ ಅಧಿಕಾರದ ವಿರೋಧ ಅಲೆಯು ಸೂರಜ್ ಅವರಿಗೆ ವರದಾನವಾಗಿ ಪರಿಣಮಿಸಿದೆ. ಇವೆಲ್ಲವನ್ನು ಲೆಕ್ಕ ಹಾಕಿದರೆ ಯುವಕರ ಹ್ರದಯ ಸಾಮ್ರಾಟ ಸೂರಜ್ ನಾಯ್ಕ ಸೋನಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕರಾಗಿ ಆಯ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವಂತಾಗಿದೆ.