ಯುವ ವಕೀಲ ,ಸಂಘಟನಾ ಚತುರ ಶ್ರೀ ಮಂಜುನಾಥ ಗೊಂಡ ಭಟ್ಕಳ ತಾಲೂಕ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ
ಭಟ್ಕಳ-ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಜೆಡಿಎಸ್ ಭಟ್ಕಳ ತಾಲೂಕು ಅಧ್ಯಕ್ಷರನ್ನಾಗಿ ಯುವ ವಕೀಲ ಶ್ರೀ ಮಂಜುನಾಥ ಗೊಂಡ ಅವರನ್ನು ಆಯ್ಕೆ ಮಾಡಿ ಉತ್ತರ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳ, ನಿನ್ನೆ ಭಟ್ಕಳ ತಾಲೂಕಿನ ಅತಿ ಸಣ್ಣ ಸಮುದಾಯದಲ್ಲಿ ಒಂದಾದ ಗೊಂಡ ಸಮುದಾಯದ ಶ್ರೀ ಮಂಜುನಾಥ ಗೊಂಡ (ವಕೀಲರು) ಅವರನ್ನು ಆಯ್ಕೆ ಮಾಡಿ ಜೆಡಿಎಸ್ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಗಣಪಯ್ಯ ಗೌಡರು ಆದೇಶ ಹೊರಡಿಸಿದ್ದಾರೆ. ಭಟ್ಕಳ
ತಾಲೂಕಿನ ಇತಿಹಾಸದಲ್ಲೆ ಇದೊಂದು ಮಾದರಿ ನಡೆಯಾಗಿದ್ದು ಜೆ.ಡಿ.ಎಸ್ ಪಕ್ಷ ಸಮಾಜದ ಎಲ್ಲಾ ವರ್ಗವನ್ನು ಗಣನೆಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹಾಗೆ ಹಿಂದೆ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ರಾಜವರ್ಧನ ನಾಯ್ಕ್ ಅವರನ್ನು ಜಿಲ್ಲಾ ಹಿಂದುಳಿದ ಸಂಘಟನಾ ಕಾರ್ಯದರ್ಶಿಯಾಗಿ ಪದೋನ್ನತಿಗೊಳಿಸಿ ಜೆಡಿಎಸ್ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಗಣಪಯ್ಯ ಗೌಡರು ಆದೇಶ ಹೊರಡಿಸಿದ್ದಾರೆ.ಹೊಸದಾಗಿ ಭಟ್ಕಳ ಜೆಡಿಎಸ್ ತಾಲೂಕ ಅಧ್ಯಕ್ಶರಾಗಿ ಆಯ್ಕೆಯಾದ ವಕೀಲ ಮಂಜುನಾಥ್ ಗೊಂಡ ಅವರಿಗೆ ಭಟ್ಕಳ -ಹೊನ್ನವಾರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ , ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.