ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ನೇತೃತ್ವದಲ್ಲಿ
ಭಟ್ಕಳದಲ್ಲಿ ಯಶಸ್ವಿಯಾಗಿ ನಡೆದ ಭಟ್ಕಳ -ಹೋನ್ನಾವರ ಜೆಡಿಎಸ್ ಬೂತ್ ಪ್ರಮುಖರ ಸಭೆ
ಭಟ್ಕಳ-ಗುರುವಾರ ಸಂಜೆ ಭಟ್ಕಳದ ವೈಭವ ಹೋಟೆಲ್ ಪಕ್ಕದಲ್ಲಿರುವ ಮೈದಾನದಲ್ಲಿಜೆಡಿಎಸ್ ಪಕ್ಷದ ಭಟ್ಕಳ-ಹೊನ್ನವಾರ ಪೊಲಿಂಗ್ ಬೂತ್ ಪ್ರಮುಖರ ಸಭೆ ನಡೆಯಿತು. ಜೆಡಿಎಸ್ ಬೂತ್ ಪ್ರಮುಖರ ಸಭೆಯಲ್ಲಿ 500 ಕ್ಕೂ ಹೆಚ್ಚು ಬೂತ್ ಪ್ರಮುಖರು ಹೊನ್ನವಾರ, ಭಟ್ಕಳ, ಮಂಕಿ, ಮುರುಡೇಶ್ವರ, ಶಿರಾಲಿ , ಭಟ್ಕಳ ಮುಂತಾದ ಭಾಗದಿಂದ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಭಟ್ಕಳ -ಹೊನ್ನಾವರ ಬೂತ್ ಪ್ರಮುಖರ ಸಭೆಯನ್ನುದೇಶಿಸಿ ಮಾತನಾಡಿದ ಭಟ್ಕಳ -ಹೊನ್ನವಾರ ಜೆಡಿಎಸ್ ಅಭ್ಯರ್ಥಿ , ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ ನಾನು ನಾಮಪತ್ರ ಸಲ್ಲಿಸುವಸುವ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನನ್ನ ಜೊತೆಗೆ ಬಂದು ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ದು ನನ್ನಲ್ಲಿನ ಆತ್ಮ ವಿಶ್ವಾಸ ಹೆಚ್ಚಿಸಿದೆ. ಈ ವಿಶ್ವಾಸದಿಂದ 2023 ರ ಚುನಾವಣೆಯಲ್ಲಿ ನೂರಕ್ಕೆ ನೂರು ಜೆಡಿಎಸ್ ಪಕ್ಷ ಗೆಲುವು ಸಾಧಿಸುವ ಎಂಬ ನಂಬಿಕೆ ಇದೆ ಎಂದರು.
ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿನ ಭ್ರಷ್ಟಾಚಾರದಂತಹ ಜಟಿಲವಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.
ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನನ್ನ ಶತಪ್ರಯತ್ನ ಮಾಡುತ್ತೆನೆ. ಕ್ಷೇತ್ರದಲ್ಲಿ ಉದ್ಯೋಗ ಸ್ರಷ್ಟಿಗಾಗಿ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದು ಬ್ರಹತ ಪ್ಯಾಕಿಂಗ್ ಯೂನಿಟ್ ನಿರ್ಮಾಣ ಮಾಡುತ್ತೆನೆ ಎಂದರು. ಕ್ಷೇತ್ರದಲ್ಲಿ ಕೃಷಿ ಚುಟುವಟಿಕೆಗಳ ಅಭಿವೃದ್ಧಿ ಪಡಿಸಲು ವಿಶೇಷವಾದ ಯೋಚನೆಗಳನ್ನು ತರುತೆನೆ ಎಂದರು.
ಕ್ಷೇತ್ರಕ್ಕೆ ಬರುವ ಸಂಪೂರ್ಣ ಕಾಮಗಾರಿಗಳನ್ನು ಗುತ್ತಿಗೆದಾರ ಸಂಘ ಕ್ಕೆ ನೇರವಾಗಿ ನೀಡುತ್ತೆನೆ, ನೀವೇ ಹಂಚಿಕೊಂಡು ಕಾಮಗಾರಿ ಮಾಡಿ ,ನನಗೆ ಯಾವುದೇ ರೀತಿಯ ಕಮಿಷನ್ ನೀಡಿಬೇಕಾಗಿಲ್ಲ ಎಂದರು. ಅತಿ ಕಡಿಮೆ ಅವಧಿಯಲ್ಲಿ 60 ಸಾವಿರದಷ್ಟು ಮತದಾರರಿಗೆ ನನ್ನ ಆಲೋಚನೆ ಮತ್ತು ಯೋಜನೆಗಳ ಮಾಹಿತಿ ಮುಟ್ಟಿಸಿದ್ದೇನೆ ಎಂದರು.ನಾನು ಗೆದ್ದರೆ ಭಟ್ಕಳ-ಹೊನ್ನವಾರ ಕ್ಷೇತ್ರದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪ್ರಯತ್ನ ಮಾಡುತ್ತೆನೆ ಎಂದರು.
ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ
ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ವಿಜಯೋತ್ಸವ ರೀತಿಯಲ್ಲಿ ಕಂಡು ಬಂದಿದ್ದು ಭಟ್ಕಳದಲ್ಲಿ ಜೆಡಿಎಸ್ ಪಕ್ಷದ ಗೆಲುವು ನಿಶ್ಚಿತವಾಗಿದೆ ಎಂದರು. ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಮೇಲಿನ ಪ್ರೀತಿ ಅಭಿಮಾನದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಸಿದ್ದು ನೋಡಿದರೆ ಅವರ ಗೆಲುವು ನಿಶ್ಚಿತ ಎಂದರು. ಮಾಜಿ ಶಾಸಕ ಮಂಕಾಳ ವೈದ್ಯ ಅವರು ಮೊಗೇರ ಸಮಾಜಕ್ಕೆ ಎಸ್.ಸಿ ಪ್ರಮಾಣ ಪತ್ರ ಕೊಡಿಸಲು ಶಾಸಕರಾಗಿದ್ದ ಸಂದರ್ಭದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ, ಈಗ ಗೊಂಡ ಸಮಾಜದವರು ಎಸ್.ಟಿ ಜಾತಿ ಪ್ರಮಾಣ ಪತ್ರ ಕೊಡಿಸುತೆನೆ ಅಂತ ಓಟಿಗಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.ಭಟ್ಕಳ -ಹೊನ್ನವಾರ ಜನತೆಗೆ ಹಾಲಿ ಶಾಸಕ ಸುನೀಲ್ ನಾಯ್ಕ ಮತ್ತು ಮಾಜಿ ಶಾಸಕ ಮಂಕಾಳ ವೈದ್ಯ ಇಬ್ಬರ ಮೇಲು ವಿಶ್ವಾಸ ಕಡಿಮೆ ಆಗಿದ್ಫು ಬದಲಾವಣೆ ಬಯಸಿದ್ದಾರೆ ಎಂದರು.ಹೊಸ ಮುಖವಾದ ಪ್ರಾಮಾಣಿಕ ವ್ಯಕ್ತಿ ನಾಗೇಂದ್ರ ನಾಯ್ಕ ಗೆ ಈ ಭಾರಿ ಭಟ್ಕಳ-ಹೊನ್ನವಾರ ಜನತೆ ಬೆಂಬಲ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಉತ್ತರ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ಮುನಾಫ್ ಮಿರ್ಜಾನಕರ, ಹೊನ್ನಾವರ ಜೆಡಿಎಸ್ ತಾಲೂಕ ಅಧ್ಯಕ್ಷ ಟಿ.ಟಿ.ನಾಯ್ಕ, ಭಟ್ಕಳ ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ಗೊಂಡ ,ಪುರಸಭಾ ಸದಸ್ಯ ಕೃಷ್ಣಾನಂದ ಪೈ, ಪುರಸಭಾ ಮುಟ್ಟಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ದೇವಯ್ಯ ನಾಯ್ಕ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಗಣಪತಿ ಭಟ್ ಮುರುಡೇಶ್ವರ, ಪಾಂಡು ನಾಯ್ಕ,ಈಶ್ವರ್ ನಾಯ್ಕ, ಭಟ್ಕಳ- ಹೊನ್ನವಾರ ಬಾಗದ 500 ಹೆಚ್ಚು ಜೆಡಿಎಸ್ ಬೂತ್ ಪ್ರಮುಖರು ,ಕಾರ್ಯಕರ್ತರು ಉಪಸ್ಥಿತರಿದ್ದರು.