ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ , ಪ್ರಭಾವಿ ಕಾಂಗ್ರೆಸ್ ಮುಖಂಡ ದೀಪಕ್ ನಾಯ್ಕ ಮಂಕಿ ಬಿಜೆಪಿ ಸೇರ್ಪಡೆ
ಭಟ್ಕಳ- ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರು ಹಾಗೂ ಮಾಜಿ ಎಪಿಎಂಸಿ ನಿರ್ದೇಶಕರು ಮತ್ತು ಈ ಬಾರಿಯ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶ್ರೀ ದೀಪಕ್ ನಾಯ್ಕ್ ಮಂಕಿ ಅವರು ನರೇಂದ್ರ ಮೋದಿಜಿಯವರ ನಾಯಕತ್ವ ಮತ್ತು ಭಟ್ಕಳ ಮತ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ತಮ್ಮ ನೂರಾರು ಕಾರ್ಯಕರ್ತರೊಂದಿಗೆ, ಪ್ರಮುಖರೊಂದಿಗೆ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಮತ್ತು ಬಿಜೆಪಿಯ ಮುಖಂಡರು ಮಾಜಿ ಸಚಿವರಾದ ಶ್ರೀ ಪ್ರಮೋದ್ ಮದ್ವರಾಜ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಗೆ ಸೇರ್ಪಡೆಗೊಂಡ ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೀಪಕ್ ನಾಯ್ಕ ಅವರು ಇದು ಆರಂಭ ಅಷ್ಟೇ ಇನ್ನೂ ಕೆಲವೇ ದಿನಗಳಲ್ಲಿ ಮಂಕಿ ಬಾಗದ ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬಿಜೆಪಿಯನ್ನು ಸೇರ್ಪಡೆಯಾಗಲಿದ್ದಾರೆ ಎಂದರು. ತಾನು ಮಾಜಿ ಶಾಸಕ ಮಂಕಾಳ ವೈದ್ಯ ಅವರ ಕಿರುಕುಳದಿಂದ ಬೆಸೆತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದ್ದಾಗಿ ತಿಳುಸಿದರು.ನಾನು ಯಾವುದೇ ಷರತ್ತು ಇಲ್ಲದೆ ಸಾಮಾನ್ಯ ಕಾರ್ಯಕರ್ತ ಆಗಿ ಬಿಜೆಪಿ ಸೇರಿರುವುದ್ದಾಗಿ ತಿಳಿಸಿದರು. ನಾನು ಶಾಸಕ ಸುನೀಲ್ ನಾಯ್ಕ್ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ದೀಪಕ್ ನಾಯ್ಕ ಅವರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಕಾಂಗ್ರೆಸ್ಸ್ ಪಕ್ಷ ತಲೆ ಬುಡ ಇಲ್ಲದ ಪಕ್ಷ , ತಲೆ ಇಲ್ಲ ಅಂದರೆ ಕೇದ್ರ ದಲ್ಲಿ ಗಟ್ಟಿ ನಾಯಕತ್ವ ಇಲ್ಲ, ಬುಡ ಇಲ್ಲ ಅಂದರೆ ಕಾರ್ಯಕರ್ತರು ಇಲ್ಲದ ಪಕ್ಷ ಎಂದು ವಿವರಿಸಿದರು. ಬಿಜೆಪಿ ತಲೆ ಬಡ ಗಟ್ಟಿಯಾಗಿ ಇರುವ ಪಕ್ಷ ಎಂದರು. ದೀಪಕ್ ನಾಯ್ಕ ಈಗ ಒಳ್ಳೆ ತಲೆ ಬುಡ ಗಟ್ಟಿ ಇರುವ ಪಕ್ಷ ಸೇರಿದ್ದಾರೆ ಈ ಪಕ್ಷದಲ್ಲಿ ಅವರಿಗೆ ಉತ್ತಮ ರಾಜಕೀಯ ಭವಿಷ್ಯ ಇದೆ ಎಂದರು.
ಶಾಸಕ ಸುನೀಲ ನಾಯ್ಕ ಮಾತನಾಡಿ ದೀಪಕ್ ನಾಯ್ಕ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದರು. ಈ ಸಂದರ್ಭದಲ್ಲಿ ಗೋವಾ ಶಾಸಕ ಉಲ್ಲಾಸ , ಬಿಜೆಪಿ ಮುಖಂಡ ಗೋವಿಂದ ನಾಯ್ಕ , ಹೊನ್ನವಾರ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ್ ಭಂಡಾರಿ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಡಿಗ ಮುಂತಾದವರು ಉಪಸ್ಥಿತರಿದ್ದರು.