*ಭಟ್ಕಳದಲ್ಲಿ ನೂತನವಾಗಿ ಉದ್ಘಾಟನೆಗೊಂಡ ನಾಗಶ್ರೀ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್ ತರಬೇತಿ ಸಂಸ್ಥೆ*
ಭಟ್ಕಳ- ನಾಗಶ್ರೀ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ಇದರ ಉದ್ಘಾಟನಾ ಸಮಾರಂಭವು ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ ರೋಡಿನಲ್ಲಿರುವ ಸರಕಾರಿ ನೌಕರರ ಭವನ ಕಟ್ಟಡದಲ್ಲಿ ನೆರವೇರಿತು.
ಉದ್ಘಾಟಕರಾಗಿ ಆಗಮಿಸಿದಂತ ಶ್ರೀ ಮೋಹನ್ ನಾಯ್ಕ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಇವರ ಅಮೃತ ಹಸ್ತದಿಂದ ಉದ್ಘಾಟಯಿಸಲಾಯಿತು. ಆನಂತರ ಮಾತನಾಡಿದ ಅವರು ವಿಧ್ಯಾರ್ಥಿಗಳಿಗೆ ಕರಾಟೆ, ಯೋಗ ಇನ್ನಿತರ ವಿದ್ಯೆಗಳ ಅಗತ್ಯತೆಗಳ ಬಗ್ಗೆ ಮನವರಿಕೆ ಮಾಡಿ, ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶೋಟೊಕಾನ ಕರಾಟೆ ಇನ್ಸ್ಟಿಟ್ಯೂಟ್ ಭಟ್ಕಳ ಇದರ ಅಧ್ಯಕ್ಷರಾದ ಶ್ರೀ ಉಮೇಶ ಮೊಗೇರ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ರಾಮದಾಸ್ ಪ್ರಭು ಧರ್ಮದರ್ಶಿಗಳು ಶ್ರೀ ನಾಗಾಯಕ್ಷೆ ಧರ್ಮದೇವಿ ಸಂಸ್ಥಾನ ಭಟ್ಕಳ, ಶ್ರೀ ಶ್ರೀನಾಥ್ ಪೈ, ಪ್ರಾಂಶುಪಾಲರು ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ಭಟ್ಕಳ, ಶ್ರೀ ಮನಮೋಹನ ನಾಯ್ಕ, ಜಿಲ್ಲಾಧ್ಯಕ್ಷರು ಕರ್ನಾಟಕ ಜನಲಿಸ್ಟ್ ಯೂನಿಯನ್, ಕಾರವಾರ,
ಶ್ರೀ ಕೃಷ್ಣ ನಾಯ್ಕ, ಅಧ್ಯಕ್ಷರು ನಾಮಧಾರಿ ಸಮಾಜ ಭಟ್ಕಳ, ಶ್ರೀಮತಿ ರೂಪಾ ರಮೇಶ್ ಖಾರ್ವಿ ಮುಖ್ಯೋಪಾಧ್ಯಾಯರು ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆ ಭಟ್ಕಳ, ಶ್ರೀ ಗಣಪತಿ ಶಿರೂರ್ ಮುಖ್ಯೋಪಾಧ್ಯಾಯರು ದಿ ನ್ಯೂ ಇಂಗ್ಲೀಷ್ ಸ್ಕೂಲ್ ಭಟ್ಕಳ,
ಶ್ರೀ ಮನೋಜ ನಾಯ್ಕ ಕಾನೂನು ಸಲಹೆಗಾರರು ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ಭಟ್ಕಳ,
ಶ್ರೀ ಈಶ್ವರ ನಾಯ್ಕ ಜಿಲ್ಲಾಧ್ಯಕ್ಷರು ಉತ್ತರ ಕನ್ನಡ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಮೊದಲಾದವರು ಉಪಸ್ಥಿತರಿದ್ದು ತಮ್ಮ ಹಿತನುಡಿಗಳ ಮೂಲಕ ತರಬೇತಿ ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು. ಶುಭ
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು, ಕರಾಟೆ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಶ್ರೀ ಪಾಂಡುರಂಗ ನಾಯ್ಕ ಅವರು ನೆರವೇರಿಸಿದರು.