ಭಟ್ಕಳದ ಮುಂಡಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಅವಿರೋಧವಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಪದ್ಮಾವತಿ ವೆಂಕಟ್ರಮಣ ಮೊಗೇರ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಮುಖಂಡ ಶ್ರೀ ಗೋವಿಂದ ನಾರಾಯಣ ಮೊಗೇರ ಅಚ್ಚರಿ ರೀತಿಯಲ್ಲಿ ಆಯ್ಕೆ
ಭಟ್ಕಳ- ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯಿತಿಯ 2 ನೆ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಮುಂಡಳ್ಳಿ ಗ್ರಾಮ ಪಂಚಾಯತನ ಸಭಾಭವನದಲ್ಲಿ ಚುನಾವಣಾಧಿಕಾರಿಯಾದ ಭಟ್ಕಳ ಹೆಸ್ಕಾಂ ಮುಖ್ಯ ಇಂಜಿನಿಯರ್ ಮಂಜುನಾಥ ನಾಯ್ಕ ಅವರ ಸಮ್ಮುಖದಲ್ಲಿ ನಡೆಯಿತು. 13 ಸದಸ್ಯರುಳ್ಳ ಮುಂಡಳ್ಳಿ ಗ್ರಾಮ ಪಂಚಾಯಲ್ಲಿ 7 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು, 5 ಜನ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಒಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಮುಂಡಳ್ಳಿ ಗ್ರಾಮ ಪಂಚಾಯತಿಗೆ 2 ನೆ ಅವಧಿಯ ಅಧ್ಯಕ್ಷ ಮೀಸಲಾತಿ ಎಸ್.ಸಿ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ ಕೆಟಗರಿ ಬಂದಿತ್ತು.
ಮುಂಡಳ್ಳಿ ಗ್ರಾಮ ಪಂಚಾಯತಿಗೆ 2ನೆ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ಸ್ ಬೆಂಬಲಿತ ಶ್ರೀಮತಿ ಪದ್ಮಾವತಿ ವೆಂಕಟ್ರಮಣ ಮೊಗೇರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶ್ರೀ ಗೋವಿಂದ ನಾರಾಯಣ ಮೊಗೇರ 7- 6 ಅಂತರದಿಂದ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ವಿಶಲಾಕ್ಷಿ ಎಸ್ ದೇವಡಿಗ ಅವರನ್ನು ಸೋಲಿಸಿ ಉಪಾಧ್ಯಕ್ಷರಾಗಿ ಆಯ್ಕೆ ಆದರು. ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 7 ಜನ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಇದ್ದರೂ ಕೂಡ ಕಾಂಗ್ರೆಸ್ ಪಕ್ಷ ಬೆಂಬಲಿತ ಅಬ್ಯರ್ಥಿ ಶ್ರೀಮತಿ ವಿಶಾಲಾಕ್ಷಿ ದೇವಡಿಗ ಅಚ್ಚರಿ ರೀತಿಯಲ್ಲಿ ಸೋಲುವುದರ ಮೂಲಕ ಕಾಂಗ್ರೆಸ್ಸ್ ಪಕ್ಷದ ಮುಖಂಡರಿಗೆ ಮುಖಭಂಗವಾಯಿತು.