ಭಟ್ಕಳದ ಮಾರುಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶ್ರೀಮತಿ ನಾಗವೇಣಿ ಗೊಂಡ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಮುಖಂಡ ಶ್ರೀ ಎಂ.ಡಿ.ನಾಯ್ಕ ಆಯ್ಕೆ
ಭಟ್ಕಳ -ಭಟ್ಕಳ ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ನಾಗವೇಣಿ ಗೊಂಡ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಮುಖಂಡ ಶ್ರೀ ಎಂ.ಡಿ.ನಾಯ್ಕ ಅವರು ಆಯ್ಕೆಯಾಗಿದ್ದಾರೆ. ಗುರುವಾರ ಮಧ್ಯಾಹ್ನ ಚುನಾವಣಾಧಿಕಾರಿ ಗೀತಾ ಹೆಗಡೆಯವರ ಸುಮ್ಮುಖದಲ್ಲಿ ಮಾರುಕೇರಿ ಗ್ರಾಮ ಪಂಚಾಯಿತಿಯ 2 ನೆ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಿತು. ಗೀತಾ ಹೆಗಡೆ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.