ಎಸ್.ಕೆ.ಡಿ.ಆರ್.ಪಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಮೂಲಕ ಅಭಿವೃದ್ಧಿ ಕಾರ್ಯಕ್ರಮಡದಡಿ ಬಂದರ್ ರೋಡ್ ಹಿಂದೂ ರುದ್ರಭೂಮಿ ಅಭಿವೃದ್ಧಿ ಗೆ 2.50 ಲಕ್ಷ ರೂಪಾಯಿ ಮಜೂರು
ಭಟ್ಕಳ: ಭಟ್ಕಳ ತಾಲೂಕಿನ ಹೃದಯ ಭಾಗವಾದ ಬಂದರ್ ರೋಡ್ ಸಮೀಪದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಮೂಲಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಪರಮ ಪೂಜ್ಯರು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಸಹಾಯಧನ 2.50 ಲಕ್ಷ ರೂಪಾಯಿ ಮಂಜೂರಾತಿ ಪತ್ರವನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ.ಆರ್.ನಾಯ್ಕ ರವರಿಗೆ ಹಾಗೂ ಸಮಿತಿಯ ಸದಸ್ಯರಿಗೆ ತಾಲೂಕು ಯೋಜನಾಧಿಕಾರಿ ಗಣೇಶ ಡಿ ನಾಯ್ಕ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ಎಂ. ಆರ್. ನಾಯ್ಕ ರವರು ಪೂಜ್ಯರ ಸಾಮಾಜಿಕ ಕಾಳಜಿಯ ಬಗ್ಗೆ ಹಾಗೂ ಅಭಿವೃದ್ಧಿ ಕಾರ್ಯ ಸಹಕಾರ ಕೋರಿ ಮನವಿಗೆ ತುರ್ತು ಸ್ಪಂದನೆ ಬಗ್ಗೆ ಶ್ಲಾಘಿಸಿದರು.
ವಿತರಣೆ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಪಾಂಡು ನಾಯ್ಕ, ಶ್ರೀನಿವಾಸ ನಾಯ್ಕ, ಇನ್ನಿತರರು ಹಾಗೂ ವಲಯದ ಮೇಲ್ವಿಚಾರಕರಾದ ಕೇಶವ ಗೌಡಾ ಉಪಸ್ಥಿತರಿದ್ದರು.