ಚಿತ್ರಾಪುರ ಮಠದಲ್ಲಿ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ
ಭಟ್ಕಳ- ಜಿಲ್ಲೆಯ ಪ್ರಸಿದ್ದ ಮಠಗಳಲ್ಲಿ ಒಂದಾದ ತಾಲೂಕಿನ ಶ್ತೀ ಚಿತ್ರಾಪುರ ಮಠದಲ್ಲಿ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ನಿನ್ನೆ ಗುರುವಾರ ನಡೆಯಿತು.
ಚಾತುರ್ಮಾಸದ ಅಂಗವಾಗಿ ಶ್ರೀ ಚಿತ್ರಾಪುರ ಮಠದಲ್ಲಿ ಮುಂಡಳ್ಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ಷೇತ್ರದ ಭಕ್ತವೃಂದದವರ ಎದುರಿನಲ್ಲಿ ಮುಂಡೞ್ಳಿಯವರು ಹಾಡಿದ ದಾಸರೆಂದರೆ ಪುರಂದರ ದಾಸರಯ್ಯ, ಹರಿಚರಣಕೆ ಶರಣಾದೆ, ಯೋಗಿ ಮನೆಗೆ ಬಂದ, ಕೊಳಲೂದು ಗುರುವಾಯು ಕೃಷ್ಣನೇ ಹಾಡುಗಳಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕುಮಾರಿ ನಿನಾದ ಕೂಡ ಕೆಲವು ಹಾಡುಗಳನ್ನು ಹಾಡುವ ಮೂಲಕ ಗಮನಸೆಳೆದರು.
ಭಕ್ತಿ ಸಂಗೀತ ಕಾರ್ಯಮದಲ್ಲಿ ಪ್ರಕಾಶ ಹರಿದಾಸ ತಬಲಾ ಸಾಥ್ ನೀಡಿದರೆ ಶ್ರೀಮತಿ ಅರುಣಾ ಭಂಕೇಶ್ವರ ಕೀಬೋರ್ಡ್ ಸಾಥ್ ನೀಡಿದರು.