ಲೋಕಸಭಾ ಚುನಾವಣೆಯಲ್ಲಿ ಸ್ವರ್ಧೆ ಮಾಡಲು ರಾಷ್ಟ್ರ ನಾಯಕರ ಮೊರೆ ಹೋದ ಕಾಂಗ್ರೆಸ್ ಪಕ್ಷದ ಮುಖಂಡ ಆರ್ ಎಚ್ ನಾಯ್ಕ್
ಕುಮಟಾ ತಾಲೂಕಿನ ಕಾಗಲ ಗ್ರಾಮದವರಾದ ಇವರು ತಮ್ಮ ಶಿಕ್ಷಣವನ್ನು ಕಾಗಲ, ಕುಮಟಾ ,ಹಾಗೂ ಬೆಂಗಳೂರಿನಲ್ಲಿ ಮುಗಿಸಿಕೊಂಡು ಲೆಕ್ಕಪತ್ರ ಪರಿಶೋಧಕ ರಾಗಿ ವೃತ್ತಿ ನಿರ್ವಹಿಸುತ್ತಿದ್ದ ಇವರು ರಾಜಕೀಯದಲ್ಲಿ ಆಸಕ್ತಿ ಇದ್ದ ಕಾರಣ ಇವರು ರಾಜಕಾರಣದಲ್ಲಿ ತಮ್ಮ ಸೇವೆ ಸಲ್ಲಿಸಲು ರಾಜಕೀಯದಲ್ಲಿ ಪದಗ್ರಹಣ ಮಾಡಿದರು ದಿ. ಆರ್ .ಎಸ್. ಭಾಗ್ವತ್ ಹಾಗೂ ಮೋಹನ್ ಶೆಟ್ಟಿ ಅವರ ಜೊತೆ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಆರ್ ವಿ ದೇಶಪಾಂಡೆ. ಮಾರ್ಗರೆಟ್ ಆಳ್ವ. ಬಿ.ಕೆ ಹರಿಪ್ರಸಾದ್ ಅವರ ಅನುಯಾಯಿಗಳಾಗಿದ್ದರು. ಕುಮಟಾ ಎಪಿಎಂಸಿ ಸದಸ್ಯರಾಗಿ ಹಾಗೂ ಬಾಡ ರೈತರ ಸೇವಾಸಹಕಾರಿ ಸಂಘದ ನಿರ್ದೇಶಕರಾಗಿ ಕುಮಟ ದಲ್ಲಿ ಸರಕಾರದಿಂದ ಸಿಗುವ ಸೌಲಭ್ಯವನ್ನು ಜನರಿಗೆ ಸಿಗುವ ಉದ್ದೇಶದಿಂದ ಜನರೊಂದಿಗೆ ಕೈ ಜೋಡಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿ ಇಂದಿಗೆ ೩೪ ವರ್ಷಗಳು ಕಳೆದವು. ಈ ಅವಧಿಯಲ್ಲಿ ಅವರಿಗೆ ಸಿಕ್ಕ ಪಕ್ಷದ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಕಾಂಗ್ರೆಸ್ ಪಕ್ಷದ ಎಲ್ಲಾ ಹೋರಾಟ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು. ಸೇವಾದಳ ಸಂಘಟನೆ ಮಾಡುವ ನಿಟ್ಟಿನಿಂದ ಕಾರ್ಯ ನಿರ್ವಹಿಸಿದರು. ಹೈಕಮಾಂಡ್ ಆದೇಶದ ಮೇರೆಗೆ ಈ ಹಿಂದೆ ಜಿಲ್ಲಾ ಮಟ್ಟದ ಕಾಂಗ್ರೇಸ್ ಸೇವಾದಳ ತರಬೇತಿಯನ್ನು ಹಮ್ಮಿಕೊಂಡು ನೂರಾರು ಕಾರ್ಯಕರ್ತರಿಗೆ ತರಭೇತಿ ನೀಡಿದರು. ಹಾವೇರಿ ಎಂ ಎಲ್ ಎ ಉಪಚುನಾವಣೆ ಯಲ್ಲಿ ಪಕ್ಷದ ನಾಯಕರ ಆದೇಶ ಮೇರೆಗೆ ಪಕ್ಷದ ಪರವಾಗಿ ಪ್ರಚಾರ ಮಾಡಿದರು . ಕಾಂಗ್ರೆಸ್ ಪಕ್ಷದಿಂದ ಪ್ರಾರಂಭವಾದ ಸದಸ್ವತ್ವ ನೋಂದಣಿಯಲ್ಲಿ ಮುಖ್ಯ ನೋಂದಣಿದಾರರಾಗಿ ಅವರ ವ್ಯಾಪ್ತಿಯಲ್ಲಿ ಹೆಚ್ಚು ಸದಸ್ವತ್ವ ಮಾಡಿ ಜಿಲ್ಲಾ ಹಾಗೂ ರಾಜ್ಯ ನಾಯಕರಿಂದ ಸೈ ಎನಿಸಿಕೊಂಡರು. ರಾಷ್ಟ್ರ ನಾಯಕರ ಜೊತೆ ಗುರುತಿಸಿಕೊಂಡು ಭಾರತ ಜೋಡೋ ಹಾಗೂ ಮೇಕೆದಾಟು ಹೋರಾಟದಲ್ಲಿ ಪಾದಯಾತ್ರೆಯ ಮೂಲಕ ಹೆಜ್ಜೆ ಹಾಕಿದರು.೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಿಯಮಕ್ಕೆ ಅನುಸಾರ ಅರ್ಜಿ ಸಲ್ಲಿದರು.ಪಕ್ಷದ ಕೇಂದ್ರ ಸಮಿತಿಯ ಒಳಗೆ ಚರ್ಚೆಗೆ ಬಂದು ಕೊನೇ ಹಂತದಲ್ಲಿ ಟಿಕೆಟ್ ಕೈ ತಪ್ಪಿತು.ಟಿಕೆಟ್ ವಂಚಿತರಾದರೂ ಸಕ್ರಿಯ ರಾಜಕಾರಣಕ್ಕೆ ರಾಜ್ಯ ನಾಯಕರ ಆದೇಶಕ್ಕೆ ತಲೆಬಾಗಿ ಟಿಕೆಟ್ ಘೋಷಣೆ ಆದ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆದರು ಟಿಕೆಟ್ ಗಟ್ಟಿಸಿಕೊಳ್ಳಲು ರಾಜ್ಯ ಹಾಗೂ ರಾಷ್ಟ್ರ ನಾಯಕರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಅಷ್ಟೇ ದೆಹಲಿ ಭೇಟಿಕೊಟ್ಟಿದ್ದು ಕುತೂಹಲಕ್ಕೆ ಕಾರಣವಾಗಿದೆ.ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಡಿಸಿಸಿ ಉಪಾಧ್ಯಕ್ಷರ ಆಯ್ಕೆಯಲ್ಲಿ ಇವರ ಹೆಸರು ಚಾಲ್ತಿಯಲ್ಲಿ ಇದ್ದು ಎಂಪಿ ಚುನಾವಣೆಗಾಗಿ ರಾಜ್ಯ ನಾಯಕರು ಕೊನೆಯದಾಗಿ ಯಾರಿಗೆ ಮಣೆ ಹಾಕುತ್ತಾರೆ ಅನ್ನೋದು ಕಾದುನೋಡ್ಬೇಕಾಗಿದೆ.