ಭಟ್ಕಳ: ಭಟ್ಕಳದಲ್ಲಿ ಡೆಂಗ್ಯೂದಿಂದ ಯುವಕನೋರ್ವನ ಮೃತಪಟ್ಟಿದ್ದು, ಈ ಮೂಲಕ ಉತ್ತರ ಕನ್ನಡದಲ್ಲಿ ಡೆಂಗ್ಯೂನಿಂದ ಎರಡನೇ ಸಾವು ಸಂಭವಿಸಿದೆ.
ಭಟ್ಕಳದ ಖಾಝಿಯಾ ಸ್ಟ್ರೀಟ್ ನಿವಾಸಿಯಾಗಿದ್ದ ಮೊಹಮ್ಮದ್ ಮೀರಾನ್ ಸಾದಾ (77) ಡೆಂಗ್ಯೂ ಜ್ವರದಿಂದ ಸಾವು ಕಂಡವರು.
ನಿನ್ನೆ ರಾತ್ರಿ ಮಾವಿನಕುರ್ವಾ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24 )ಡೆಂಗ್ಯೂಗೆ ಬಲಿಯಾಗಿದ್ದು.
ಜಿಲ್ಲೆಯ ಭಟ್ಕಳದಲ್ಲಿ ಅತೀ ಹೆಚ್ಚು ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ನಡೆಸುವ ನಾಲ್ಕು ಜನರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ 26 ಜನರು ಡೆಂಗ್ಯೂದಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು 8 ಜನರಲ್ಲಿ ಮಲೇರಿಯ, ಮೂವತ್ತೆರಡು ಜನರಿಗೆ ಇಲಿಜ್ವರ ಕಾಣಿಸಿಕೊಂಡಿದೆ.