*ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಕುಮಟಾ ಕನ್ನಡ ಸಂಘದಿಂದ ಸನ್ಮಾನ*
ಹೊನ್ನಾವರ : ನಾಡಿನ ಹೆಸರಾಂತ ಸಾಹಿತಿ, ವಾಗ್ಮಿ, ವಿಶ್ರಾಂತ ಪ್ರಾಧ್ಯಾಪಕ
ಡಾ. ಶ್ರೀಪಾದ ಶೆಟ್ಟಿಯವರನ್ನು 23ನೇ ಉತ್ತರ ಕನ್ನಡ ಜಿಲ್ಲಾ
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯುಕ್ತಿಗೊಂಡ
ಪ್ರಯುಕ್ತ ಡಿ. 4ರಂದು ಅವರ ಸುನಾದ ಮನೆಯಂಗಳದಲ್ಲಿ
*ಕುಮಟಾ ಕನ್ನಡ ಸಂಘ* ದಿಂದ ಸನ್ಮಾನಿಸಿ, ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ ಮಾತನಾಡಿ,
ಡಾ. ಶ್ರೀಪಾದ ಶೆಟ್ಟಿಯವರು ಕೇವಲ ಉತ್ತರ ಕನ್ನಡಕಷ್ಟೇ ಅಲ್ಲದೆ
ನಾಡಿನ ಆಸ್ತಿಯಾಗಿದ್ದಾರೆ.ಅವರು ಬದುಕನ್ನೇ ಬರೆಯುತ್ತಾ
, ಬದುಕನ್ನೇ ಬರೆಸುತ್ತಾ, ಬದುಕೇ ಸಾಹಿತ್ಯವೆಂದು ಪ್ರತಿಪಾದಿಸುತ್ತಲೇ
ಬಂದವರು. ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಎಲ್ಲಾ
ಅರ್ಹತೆಯನ್ನೂ ಹೊಂದಿರುವ ಅವರನ್ನು ಎಷ್ಟೋ ವರ್ಷಗಳ
ಹಿಂದೆಯೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರನ್ನಾಗಿ ಮಾಡುವ ಬದಲು ತಡವಾಗಿಯಾದರೂ, ಕನ್ನಡ
ಸಾಹಿತ್ಯ ಪರಿಷತ್ತು ಅವರ ತಾಯ್ನೇಲವಾದ ಶರಾವತಿಯ
ಸುಕ್ಷೇತ್ರದಲ್ಲಿ ಈಗಲಾದರೂ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿ
ತನ್ನ ಘನತೆಯನ್ನು ಎತ್ತರಿಸಿಕೊಂಡಿದೆ ಎಂದರು.
ಸನ್ಮಾನ ಸ್ವೀಕರಿಸಿ ಡಾ. ಶ್ರೀಪಾದ ಶೆಟ್ಟಿಯವರು ಮಾತನಾಡಿ, ತನಗೆ
ಬಯಸದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯು
ಒದಗಿ ಬಂದಿರುವ ಭಾಗ್ಯಕ್ಕಿಂತಲೂ ತಾನೇ ಉದ್ಘಾಟಿಸಿದ ಜನನುಡಿ
ಜನಸಾಮಾನ್ಯನ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು
ಸಂಘಟಿಸಿದ ಕುಮಟಾ ಕನ್ನಡ ಸಂಘವು ನನ್ನ ಮನೆಯಂಗಳಕ್ಕೆ
ಬಂದು ಆದರಿಸಿರುವುದು ಸಂತಸ ತಂದಿದೆ ಎಂದು ಭಾವುಕರಾಗಿ
ನುಡಿದರು.
ಕುಮಟಾ ಕನ್ನಡ ಸಂಘದ
ಸಂಸ್ಥಾಪಕ ಅಧ್ಯಕ್ಷ ಸದಾನಂದ ದೇಶಭಂಡಾರಿ, ಉಪನ್ಯಾಸಕ ಹರೀಶ
ಬೇಲೆಕೇರಿ, ಶಿಕ್ಷಕರಾದ ಶಿವಾನಂದ ಪೈ, ಶಿವಚಂದ್ರ, ಕನ್ನಡ ಸಂಘದ ಉಪಾಧ್ಯಕ್ಷ ಉದಯ ಭಟ್ಟ
ಇನ್ನಿತರರು ಉಪಸ್ಥಿತರಿದ್ದರು.