ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧ ಸಂಘದ ವತಿಯಿಂದ ನಡೆದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ದ ಸಚಿವ ಮಂಕಾಳ ಎಸ್ ವೈದ್ಯ
ಭಟ್ಕಳ-ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸಮರ್ಪಣಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪತ್ರಕರ್ತರಿಗೆ ಸಹಾಯ , ಸಹಕಾರ ಮಾಡಲು ನಾನು ಸದಾ ಸಿದ್ದ ಎಂದು ತಿಳಿಸಿದರು ಮತ್ತು ಪ್ರತಿ ವರ್ಷ ಪತ್ರಕರ್ತ್ರರ ಕ್ಷೇಮಾಭಿವೃದ್ಧಿ ನಿಧಿ ಸಮರ್ಪಣಾ ಕಾರ್ಯಕ್ರಮ ನಡೆಯಲಿ ಎಂದರು. ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧ ಸಂಘದ ಗೌರವ ಅಧ್ಯಕ್ಷ ರಾದ ರಾಧಾಕೃಷ್ಣ ಭಟ್ ಮತ್ತು ಅಧ್ಯಕ್ಷ ರಾದ ರಾಘವೇಂದ್ರ ಹೆಬ್ಬಾರ ಅವರ ನೇತೃತ್ವದಲ್ಲಿ ಎಲ್ಲ ಪತ್ರಕರ್ತರು ಸೇರಿ ಒಟ್ಟಾಗಿ ಈ ಕಾರ್ಯಕ್ರಮ ನೆರವೇರಿಸುತಿದ್ದು , ಈ ಸಂಘ ಬಹಳ ದೊಡ್ಡ ಮಟ್ಟಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ನಾಗಾಯಕ್ಷೆ ದೇವಸ್ಥಾನ ದ ಧರ್ಮದರ್ಶಿಗಳಾದ ರಾಮದಾಸ್ ಪ್ರಭು ಮಾತನಾಡಿದರು. ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಭಟ್ ಮಾತನಾಡಿದರು. ಪ್ರಾಧಾನ ಕಾರ್ಯದರ್ಶಿ ಮನಮೋಹನ್ ನಾಯ್ಕ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷ ಎಂ.ಆರ್. ಮಾನ್ವಿ, ಪ್ರಧಾನ ಕಾರ್ಯದರ್ಶಿ ಮನಮೋಹನ್ ನಾಯ್ಕ್ ಮುಂತಾದ ವರು ಉಪಸ್ಥಿತರಿದ್ದರು. ಪ್ರಸನ್ನ ಪ್ರಭು ಕಾರ್ಯ ಕ್ರಮ ನಿರ್ವಹಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಟ್ಕಳ ದ ಪತ್ರಕರ್ತರು, ಸಂಘ ಪದಾಧಿಕಾರಿಗಳು , ಸಾರ್ವಜನಿಕ ರು ಉಪಸ್ಥಿತರಿದ್ದರು. ನಂತರ ಭಟ್ಕಳ ಜ್ಹೆಂಕಾರ ಮೇಲೋಡಿಸ್ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.