ಉತ್ತರಕೊಪ್ಪದಲ್ಲಿ ಮಾವಳ್ಳಿ ರೈತ ಉತ್ಪಾದಕ ಕಂಪನಿಯಿಂದ ರೈತರಿಗೆ ಮಾಹಿತಿ ಕಾರ್ಯಕ್ರಮ ಸಂಪನ್ನ
ಭಟ್ಕಳ: ಇಲ್ಲಿನ ಉತ್ತರಕೊಪ್ಪದಲ್ಲಿ ಮಾವಳ್ಳಿ ರೈತ ಉತ್ಪಾದಕ ಕಂಪನಿಯಿಂದ ರೈತರಿಗೆ ಮಾಹಿತಿ ಕಾರ್ಯಕ್ರಮ ಸಂಪನ್ನ ಗೊಂಡಿತು. ಉತ್ತರ ಕೊಪ್ಪದ ರೈತರಿಗೆ ಮತ್ತು ರೈತ ಮಹಿಳೆಯರಿಗೆ ರೈತ ಉತ್ಪಾದಕ ಕಂಪನಿಯನ್ನು ಪರಿಚಯಿಸಿ, ಅದರಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಮತ್ತು PMFME ಯೋಜನೆಯ ಕುರಿತು ಸವಿಸ್ತಾರ ಮಾಹಿತಿಯನ್ನು ಸ್ಕೊಡವೆಸ್ ಸಂಸ್ಥೆಯ ಉತ್ತರಕನ್ನಡ ಮತ್ತು ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ನೀಡಿದರು. ಕೃಷಿ ಇಲಾಖೆಯ ಜಿ.ಎಲ್ ಹೆಗಡೆ ಕೃಷಿ ಇಲಾಖೆಯ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ನಾಯ್ಕ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾವಳ್ಳಿ FPO ನಿರ್ದೇಶಕ ಗಣಪತಿ ಮರಾಠಿ, ಎಲ್.ಆರ್.ಪಿ.ಗಣೇಶ ಹಾಗೂ ರೈತರು , ರೈತ ಮಹಿಳೆಯರು ಉಪಸ್ಥಿತರಿದ್ದರು