ವಾಕಿಂಗ್ ಗೆ ತೆರಳುತ್ತಿದ್ದ ಮಹಿಳೆ ಗೆ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು
ಅಂಕೋಲಾ -ವಾಯು ವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯೊರ್ವಳಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅವರ್ಸಾ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ತಾಲೂಕಿನ ಡೋಂಗ್ರಿ ಗ್ರಾಪಂ.ವ್ಯಾಪ್ತಿಯ ಹೆಗ್ಗರಣ ಮೂಲದ ಅವರ್ಸಾದಲ್ಲಿ ಬಾಡಿಗೆ ಮನೆಯ ನಿವಾಸಿ ದೀಪಾ ಅಶೋಕ ನಾಯ್ಕ (52) ಮೃತಪಟ್ಟ ಮಹಿಳೆ. ಮೃತಳು ತನ್ನ ಮಗಳ ಜತೆಯಲ್ಲಿ ರಾ.ಹೆದ್ದಾರಿ ಪಕ್ಕ ದಲ್ಲಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಗೋವಾ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಕಾರ್ ದೀಪಾ ನಾಯ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಯ ಭಾಗಕ್ಕೆ ತೀವೃಸ್ವರೂಪ ಗಾಯವಾಗಿ ರಕ್ತ ಸೂರು ವಿಕೆಯಿಂದ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.
ಗೋವಾದ ಪ್ರವಾಸ ಮುಗಿಸಿ ಗೋಕರ್ಣ ಕಡೆಗೆ ತೆರಳುತ್ತಿದ್ದ ಕೋಲಾರ ಮುಳಬಾಗಲು ಹೋಗುತ್ತಿದ್ದ ಚಾಲಕ ಸೇರಿದಂತೆ ಒಟ್ಟು 7 ಮಂದಿ ಪ್ರಯಾಣ ಸುತ್ತಿದ್ದರು. ಕಾರವಾರ ಟೌನ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಮೇಶ ಹೂಗಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ ಚಾಲಕ ಕೋಲಾರ ಮುಳಬಾಗಲಿನ ನಿವಾಸಿ ಚಂದು ಎಲ್.ಶ್ರೀನಿವಾಸ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ. ಮೃತ ಮಹಿಳೆ ಅಂಕೋಲಾ ಮಹಿಳಾ ಸಾಂತ್ವನ ಕೇಂದ್ರದ ಮೇಲ್ವಿಚಾರಕಿ ಮಮತಾ ನಾಯ್ಕ ಅವರ ತಾಯಿ ಆಗಿ ರುತ್ತಾಳೆ.
ಮೃತ ಮಹಿಳೆಯನ್ನು ಎನ್.ಎಚ್.ಎ.ಐ (ಹೆದ್ದಾರಿ ಸುರಕ್ಷತಾ) ವಾಹನದ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಶಿವಾ ನಾಯ್ಕ ಸಂಗಡಿಗರು ಸಹಕರಿಸಿದರು.