*ಭಟ್ಕಳ ತಾಲೂಕಾ ಕಸಾಪದಿಂದ ಕುವೆಂಪು ಸಂಸ್ಮರಣೆ*
ಭಟ್ಕಳ : ಇಲ್ಲಿನ ಮುರ್ಡೇಶ್ವರದ ಬಿದ್ರಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಕುವೆಂಪು ಸ್ಮರಣೆ ಕಾರ್ಯಕ್ರಮ ಜರುಗಿತು.
ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆ, ಸಾಹಿತಿ,ಶಿಕ್ಷಕಿ ಪೂರ್ಣಿಮಾ ಕರ್ಕಿಕರ್ ಕುವೆಂಪು ಅವರ ಬದುಕು ಬರೆಹದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಪ್ರತಿದಿನ ಶಾಲೆಯಲ್ಲಿ ಕುವೆಂಪು ರಚಿಸಿದ ನಾಡಗೀತೆಯನ್ನು ಶಾಲೆಯಲ್ಲಿ ಹಾಡುತ್ತ ನಾವೆಲ್ಲ ನಾಡದೇವಿಯನ್ನು ಸ್ಮರಿಸುಬಮವ ಕಾರ್ಯ ಸಾಧ್ಯವಾಗಿದ್ದರೆ ಅದು ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಎಂದೇ ಹೆಸರಾದ ಕುವೆಂಪು ಅವರಿಂದ. ಕುವೆಂಪು ರವರು ಕನ್ನಡ ಸಾರಸ್ವತ ಲೋಕದಲ್ಲಿ ಸದಾ ಪ್ರಾತಃಸ್ಮರಣಿಯರು.
ಕುವೆಂಪುರವರ ಸಾಹಿತ್ಯವನ್ನು ಓದುವ ಆಸಕ್ತಿಯನ್ನು
ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ನುಡಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಮೀನಾಕ್ಷಿ ಹೆಗಡೆ ಹಾಗೂ ಉಮಾದೇವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.