ಭಟ್ಕಳ ದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಿದ ಕಳ್ಳರು
ಭಟ್ಕಳ-ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿರುವ ಕಪಾಟುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿಸಿ ನಗದು ದೋಚಿ ಪರಾರಿಯಾಗಿರುವ ಘಟನೆ ನಾಗಪ್ಪ ನಾಯ್ಕ ರಸ್ತೆಯ 1 ನೇ ಕ್ರಾಸ್ ಬಳಿ ನಡೆದಿದೆ.
ಪಟ್ಟಣದ ನಾಗಪ್ಪ ನಾಯ್ಕ ರಸ್ತೆಯಲ್ಲಿರುವ ಬದ್ರುದ್ದುಜ ಬರ್ಮಾವರ್ ಅವರ ನಿವಾಸಕ್ಕೆ ಕನ್ನ ಹಾಕಿದ ಕಳ್ಳರು ನಗದು ದೋಚಿ ಪರಾರಿಯಾಗಿದ್ದಾರೆ. ಮನೆ ದೋಚುವ ಯತ್ನದಲ್ಲಿ ಬೆಲೆಬಾಳುವ ಬಾಗಿಲುಗಳು ಮತ್ತು ಕಪಾಟುಗಳಿಗೆ ಹಾನಿಯಾಗಿದ್ದು, ಕದ್ದ ನಗದಿನಿಂದ ಲಕ್ಷಗಟ್ಟಲೆ ನಷ್ಟವಾಗಿದೆ. ಶನಿವಾರ ರಾತ್ರಿ ಹೆರಿಗೆ ನಿಮಿತ್ತ ಮಗಳ ಮನೆಯಲ್ಲಿ ತೆರಳಿದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮಾಹಿತಿ ಪಡೆದ ಪಟ್ಟಣ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಮುಂಬಾಗಿಲಿನಿದ ಒಳ ಪ್ರವೇಶಿಸಿದ ಕಳ್ಳರು ಮನೆಗೆ ನುಗ್ಗಿ ದೋಚಿದ್ದು, ಕದ್ದ ಹಣದೊಂದಿಗೆ ಹಿಂಬಾಗಿಲ ಮೂಲಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.