ಭಟ್ಕಳದ ಸರಕಾರಿ ಪ್ರೌಢಶಾಲೆಯ ತೆಂಗಿನ ಗುಂಡಿಯ ವಿದ್ಯಾರ್ಥಿನಿ ಕುಮಾರಿ ತ್ರಿಶಾ ಶ್ರೀಧರ ದೇವಾಡಿಗ ಗೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ
ಭಟ್ಕಳ-ಸರಕಾರಿ ಪ್ರೌಢಶಾಲೆ ತೆಂಗಿನ ಗುಂಡಿಯ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ
ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ತೆಂಗಿನ ಗುಂಡಿಯ ವಿದ್ಯಾರ್ಥಿನಿಯಾದ ಕುಮಾರಿ ತ್ರಿಶಾ ಶ್ರೀಧರ ದೇವಾಡಿಗ ಇವಳು 100 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ ಇವಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ವಿಡಿ ಮೊಗೆರ್ ಸರ್ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ದತ್ತಾತ್ರೇಯ ನಾಯ್ಕ್ ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ ಜಿ ಭಟ್ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಿರೀಶ್ ವಿ ನಾಯಕ್ ಹಾಗೂ ಉಳಿದ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮೋಹನ್ ದೇವಾಡಿಗ ಹಾಗೂ ಸದಸ್ಯರು ಊರ ನಾಗರಿಕರು ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.