ಸುಫ್ರೀಂ ಕೋರ್ಟನ ತೀರ್ಪು;
ಅರಣ್ಯವಾಸಿಗಳಿಗೆ ಮರಣ ಶಾಸನವಾಗುವುದು- ರವೀಂದ್ರ ನಾಯ್ಕ.
ಕಾರವಾರ: ಪರಿಸರ ಸಂಘಟನೆಗಳಿAದ ಸುಫ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕೆಂಬ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ, ರಾಜ್ಯ ಮತ್ತು ಕೇಂದ್ರ ಸರಕಾರವೂ ಸಕರಾತ್ಮಕವಾಗಿ ಸ್ಫಂದಿಸದಿದ್ದಲ್ಲಿ ಸುಫ್ರೀಂ ಕೋರ್ಟನ ತೀರ್ಪು ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಸಂಬAಧಿಸಿ ಮರಣಶಾಸನವಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.
ಅವರು ಇಂದು ಕಾರವಾರ ತಾಲೂಕಿನ, ಮಲ್ಲಾಪುರ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಜರುಗಿದ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡುತ್ತಾ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫,೫೫೭ ಅರ್ಜಿಗಳು ಸಲ್ಲಿಸಿದ್ದು, ಅವುಗಳಲ್ಲಿ ೬೯,೭೩೩ ಅರ್ಜಿಗಳು ತೀರಸ್ಕಾರವಾಗಿದ್ದು ಇರುತ್ತದೆ. ಜಿಲ್ಲೆಯಲ್ಲಿ ಕೇವಲ ೨,೮೫೫ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿರುವುದು ವಿಷಾದಕರ. ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿನ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳು ತೀರಸ್ಕಾರವಾಗಿದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ ಉಪಾಧ್ಯಕ್ಷೆ ಪಿ ಯಾದರ್ ಡಿಸೋಜಾ, ಚಂದ್ರಕಾAತ ಬಾಂದೇಕರ್, ಸಂದೀಪ್ ಶೇಟ್, ಗಫರ್ ಶೇಖ್, ಶಾಂತಾರಾಮ ಹೆಗಡೆ, ಗ್ಯಾಬ್ರಿಯಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಕೃಷ್ಣ ಆರ್ ಕುಣಬಿ, ಮಹಾಭಲೇಶ್ವರ ಮಲ್ಲಾಪುರ, ಶಾಂತಾ ಟಿ, ಮಂಜುನಾಥ ಕುಣಬಿ, ನಾರಾಯಣ ಎಮ್ ಕಾರವಾರ, ವೆಂಕಟ್ರಮಣ ಬಿ, ನಾರಾಯಣ ವಿ ಕುಣಬಿ ಮುಂತಾದವರು ಉಪಸ್ಥಿತರಿದ್ದರು.
ಮಲ್ಲಾಪುರ ಗ್ರಾಮ ಪಂಚಾಯತ ಅಧ್ಯಕ್ಷ ಉದಯ್ ಬಾಂದೇಕರ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಅರಣ್ಯ ಭೂಮಿ ಹಕ್ಕಿಗೆ ಹೋರಾಟ ಅನಿವಾರ್ಯ, ಹಕ್ಕಿಗಾಗಿ ಕಾನೂನಾತ್ಮಕ ಮತ್ತು ಸಾಂಘಿಕ ಹೋರಾಟ ಮಾಡುವೆವು ಎಂದು ಅವರು ಹೇಳಿದರು.
ಹೋರಾಟ ನಿರಂತರ:
ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ ೩೩ ವರ್ಷದಿಂದ ನಿರಂತರವಾದ ಹೋರಾಟ ಜರಗುತ್ತಿದ್ದು, ಭೂಮಿ ಹಕ್ಕು ದೊರಕುವರೆಗೂ ಹೋರಾಟ ನಿರಂತರವಾಗಿರುತ್ತದೆ. ಹೋರಾಟಕ್ಕೆ ಜಾತಿ, ಮತ, ಪಕ್ಷ, ಧರ್ಮ ಆಧಾರಿತ ಹೋರಾಟವಾಗಿರುವುದಿಲ್ಲ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.