ಭಟ್ಕಳದ ಸಮಾಜ ಸೇವಕ ಜಾವೇದ್ ಮುಕ್ರಿ ಅವರಿಗೆ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ
ಭಟ್ಕಳ-ಜೆಸಿಐ ಭಟ್ಕಳ ನಗರ*ಘಟಕದ ವತಿಯಿಂದ
28ನೇ ಜನವರಿ 2024 ರಂದು ಭಟ್ಕಳದ ಅಮೀನ ಪ್ಯಾಲೇಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆ.ಸಿ.ಐ
ಭಟ್ಕಳದ ವತಿಯಿಂದ ಸಮಾಜ ಸೇವಕ *ಜಾವೇದ್ ಮುಕ್ರಿ ಅವರಿಗೆ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ*ನೀಡಿ ಗೌರವಿಸಿದರು. ಜಾವೇದ್ ಮುಕ್ರಿ ಅವರು ಕಳೆದ ಹಲವಾರು ವರುಷಗಳಿಂದ ಭಟ್ಕಳ್ದ ಲ್ಲಿ ಯಾವುದೇ ಪ್ರತಿಪಾಲಾಪೇಕ್ಷೆ ಇಲ್ಲದೆ ತಮನ್ನು ತಾವು ಸಮಾಜ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಭಟ್ಕಳ ಮತ್ತು ಸುತ್ತಮುತ್ತಲಿನ ಎಲ್ಲಾ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಅವರು ಹೆಚ್ಚು ತೊಡಗಿಸಿಕೊಂಡಿದ್ದಾರೆ.
ಅವರು ಎಲ್ಲಾ ಸಮುದಾಯಗಳಿಗೆ ಎಲ್ಲಾ ರೀತಿಯ ಸಾಮಾಜಿಕ ಕೆಲಸಗಳನ್ನು ಮಾಡಿ ಕೊಡುತ್ತಿದ್ದರು. ಮುಂದೆ ಕೂಡ ಯಾವುದೇ ಸಾಮಾಜಿಕ ಸಹಾಯಕ್ಕಾಗಿ ಯಾರು ಬೇಕಾದರೂ ತಮ್ಮನ್ನು ಸಂಪರ್ಕಿಸಬಹುದ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಜೆ.ಸಿ.ಐ ಪದಾಧಿಕಾರಿಗಳು ಉಪಸ್ಥಿತರಿದ್ದರು.