ಅಂಕೋಲಾದ ಸಮರ್ಥ ಚಿತ್ರಮಂದಿರ ಇನ್ನು ನೆನಪು ಮಾತ್ರ.
ಬೆಳ್ಳಿ ತೆರೆಯ ಆಟವನ್ನು ನಿಲ್ಲಿಸಿದ ಅಂಕೋಲಾದ ಸಮರ್ಥ ಚಿತ್ರಮಂದಿರ. ಕಳೆದ 47 ವರ್ಷಗಳ ಕಾಲ ಅಂಕೋಲದಲ್ಲಿ ಸಿನಿ ಪ್ರೇಕ್ಷಕರನ್ನು ರಂಜಿಸಿದ ಚಿತ್ರಮಂದಿರ ಇದೀಗ ಥಿಯೇಟರ್ ನ ಮಾಲೀಕರು ದಿನಾಂಕ 2-02-2024 ರಿಂದ ಶಾಶ್ವತವಾಗಿ ಚಿತ್ರಮಂದಿರವನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ದೂರದ ಕುಮಟಾ ಯಲ್ಲಾಪುರ ಭಾಗದಲ್ಲಿ ಚಿತ್ರಮಂದಿರಗಳು ಇಲ್ಲದ ಕಾರಣ ಸ್ಟಾರ್ ನಟರ ಹಿಟ್ ಸಿನಿಮಾಗಳು ಬಂದಾಗ ಅಂಕೋಲಾದ ಚಿತ್ರಮಂದಿರ ಮುದುವಣಗಿತ್ತಿಯಂತೆ ಶೃಂಗಾರಗೊಂಡು . ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.
ಕಳೆದ 2019 ರಲ್ಲಿ ಮಾರಣಾಂತಿಕ ರೋಗ ಕರೋನಾ ವೈರಸ್ ಬಂದ ಕಾಲದಲ್ಲಿ ಕರ್ನಾಟಕದ ಅನೇಕ ಚಿತ್ರಮಂದಿಗಳು ಬಂದಾಗಿ ನಷ್ಟದಲ್ಲಿ ಸಾಗಿತ್ತು.
ನಂತರ ದಿನಗಳಲ್ಲಿ ಕೆಜಿಎಫ್. ಕಾಂತಾರಾ. ಚಾರ್ಲಿ. ಕನ್ನಡದ ಹಿಟ್ ಸಿನಿಮಾಗಳಿಂದ ಮುಳುಗುತ್ತಿದ್ದ ಚಿತ್ರಮಂದಿರಗಳು ಚೇತರಿಕೆಯನ್ನು ಕಂಡಿದ್ದವು.
ಇನ್ನು ಮುಂದೆ ಅಂಕೋಲಾದ ಸಮರ್ಥ ಚಿತ್ರಮಂದಿರದಲ್ಲಿ ನಾವುಗಳು ಸಿನಿಮಾಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಶಿವರಾಜ್ ಕುಮಾರ್. ಸುದೀಪ್. ದರ್ಶನ್ ಇನ್ನಿತರ ಸ್ಟಾರ್ ನಟರ ಕಟೌಟ್ಗಳನ್ನು ಇನ್ನು ಮುಂದೆ ಥಿಯೇಟರ್ ನ ಮುಂಭಾಗ ಕಲ್ಪನೆಯನ್ನು ಮಾಡುವುದಕ್ಕೆ ಆಗುವುದಿಲ್ಲ. ಅಭಿಮಾನಿಗಳ ಜೈಕಾರ ಕೇಳಲಾಗುದಿಲ್ಲ.
ಈಗಾಗಲೇ ನಮಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಸಮರ್ಥ ಟಾಕೀಸನ್ನು ಮಾಲೀಕರು ಮಾಲ್ ಅಥವಾ ಲಾಡ್ಜ್ ಮಾಡಲು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಅಂಕೋಲಾದ ಏಕೈಕ ಪ್ರಮುಖ ಚಿತ್ರಮಂದಿರ ಸ್ಥಗಿತಗೊಳ್ಳುವ ವಿಷಯವನ್ನು ತಿಳಿದು ಅಂಕೋಲಾದ ಸಿನಿ ಪ್ರೇಕ್ಷಕರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಸಮರ್ಥ ಟಾಕೀಸ್ ನಲ್ಲಿ ಸಿಬ್ಬಂದಿಯಾಗಿ ರಾಜು ಗಾಂವಕರ. ಪೂಜಗೇರಿ ಹಾಗೂ ಚಿತ್ರಮಂದಿರದ ಮ್ಯಾನೇಜರ್ ಆಗಿ ಮೋಹನ ನಾಯ್ಕ. 35 ವರ್ಷಗಳ ಕಾಲ ಕೆಲಸವನ್ನು ನಿರ್ವಹಿಸಿದ್ದಾರೆ. ಇದೀಗ ಹಾಲಿ ಚಿತ್ರಮಂದಿರದ ಮ್ಯಾನೇಜರ್ ಆಗಿ ಸುನಿಲ್ ರವರು ಕಾರ್ಯ ನಿರ್ವಹಿಸುತ್ತಿದ್ದರು.
ಸಮರ್ಥ ಚಿತ್ರಮಂದಿರದಲ್ಲಿ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಕೊನೆಯ ಚಿತ್ರ ಪ್ರದರ್ಶನಗೊಂಡಿತ್ತು… ಕೊನೆಯ ಚಿತ್ರವನ್ನು ವೀಕ್ಷಣೆ ಮಾಡಿ ತೆರಳುತ್ತಿದ್ದ ಪ್ರೇಕ್ಷಕರು ನಾಳೆಯಿಂದ ಚಿತ್ರಮಂದಿರ ಸ್ಥಗಿತಗೊಳ್ಳಲಿದೆ ಎಂಬ ವಿಷಯವನ್ನು ಅರಗಿಸಿಕೊಳ್ಳಲಾಗದೆ ಪ್ರೇಕ್ಷಕರ ಕಣ್ಣುಗಳು ಕಣ್ಣೀರಿನಿಂದ ತೇವಗೊಂಡಿದ್ದವು.
ಅಂಕೋಲಾದ ದುರಾದೃಷ್ಟ ಏನೆಂದರೆ ಇದ್ದ ಏಕೈಕ ಸಮರ್ಥ ಚಿತ್ರಮಂದಿರವನ್ನು ಸಿನಿ ಪ್ರೇಕ್ಷಕರು ಕಳೆದುಕೊಂಡಿರುವದು.