ಭಟ್ಕಳ ಬಸ್ ನಿಲ್ದಾಣದಲ್ಲಿ ಎರಡು ಹೊಸ “ಪಲ್ಲಕ್ಕಿ” ಬಸ್’ಗಳಿಗೆ ಚಾಲನೆ ನೀಡಿದ ಸಚಿವ ಮಂಕಾಳ ವೈದ್ಯ.
ಭಟ್ಕಳ-ಮುರುಡೇಶ್ವರ-ಭಟ್ಕಳ ದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ಭಟ್ಕಳ ಬಸ್ ನಿಲ್ದಾಣದಲ್ಲಿ ಎರಡು ಹೊಸ “ಪಲ್ಲಕ್ಕಿ” ಬಸ್’ಗಳಿಗೆ ಸಚಿವ ಮಾಂಕಳ ವೈದ್ಯ ಅವರು ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯದ್ಯಂತ ಸರಕಾರ ಸಾರಿಗೆ ವಿಚಾರವಾಗಿ ಜನರ ಸುರಕ್ಷತೆಗಾಗಿ ಈಗಾಗಲೇ ಹೊಸ ಹೊಸ ಬಸ್’ಗಳಿಗೆ ಚಾಲನೆ ನೀಡುತ್ತಿದ್ದೆ.
ನನ್ನ ಭಟ್ಕಳ ಕ್ಷೇತ್ರದಲ್ಲಿಈ ಹಿಂದೆ ನಾನು ಶಾಸಕನಾಗಿದ್ದಾಗ ಪ್ರತಿ ಹಳ್ಳಿಗಳಿಗು ಶಾಲಾ, ಕಾಲೇಜು ಮಕ್ಕಳ, ಹಾಗೂ ದಿನಕೂಲಿ ನೌಕರಿಗೆ ಸಮಯಕ್ಕೆ ಸರಿಯಾಗಿ ತೆರಳಲು ಬಸ್ ವೆವಸ್ಥೆ ಕಲ್ಪಿಸಿದ್ದೆ ಆದರೆ ಈ ಹಿಂದಿನ ಬಿಜೆಪಿ ಸರಕಾರ ಆ ಎಲ್ಲಾ ಬಸ್’ಗಳನ್ನು ಮಾರಾಟ ಖಾಸಗಿ ಅವರಿಗೆ ಮಾಡಿದೆ. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿ ಹಾಗೂ ನನ್ನ ಜಿಲ್ಲೆಯ ಪ್ರತಿ ಹಳ್ಳಿಗಳಿಗು ಬಸ್ ಸೇವೆಯನ್ನು ಕಲ್ಪಿಸಲಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಡಿ.ಸಿ, ಭಟ್ಕಳ ಬಸ್ ದೀಪೋ ಮೆನೇಜರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ್, ಕಾಂಗ್ರೆಸ್ ತಾಲೂಕ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ನಾಯ್ಕ್ ಬೆಳಕೇ, ನಾರಾಯಣ ನಾಯ್ಕ್ ಮುಂಡಲ್ಲಿ, ವೆಂಕಟ್ರಮಣ ಮೊಗೇರ್ ಮುಂಡಲ್ಲಿ, ರಮೇಶ್ ನಾಯ್ಕ್ ಹುರುಳಿಸಲ, ಭಾಸ್ಕರ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.