ಅಂಕೋಲ ದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಟಕಾ ದಂದೆ ಮತ್ತು ಕೋಳಿ ಅಂಕ, ಜೂಜು ಇನ್ನಿತರ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವರೇ ನೂತನ ಸಿಪಿಐ ಶ್ರೀಕಾಂತ ತೌಟಗಿ
ಅಂಕೋಲಾ- ಯಾರೇ ಕೂಗಾಡಲಿ.ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವಂತೆ ಅಂಕೋಲದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮಟ್ಕಾ ದಂದೆಗೆ ಮಟ್ಟ ಹಾಕಿ ಮಟ್ಕಾ ಬುಕ್ಕಿಗಳಿಗೆ ಹಾಗೂ ಸಹಚರರಿಗೆ ಭಯ ಹುಟ್ಟಿಸುವ ಅಧಿಕಾರಿಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಲು ಸಾಧ್ಯವಾಗಿಲ್ಲ.
ಮಟ್ಕಾ ದಂದೆಗೆ ಪ್ರೋತ್ಸಾಹಿಸಲು ಸರ್ಕಾರದ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ.
ಈ ರಾಜಕೀಯ ಪ್ರಭಾವಿ ವ್ಯಕ್ತಿಗಳ ಲಾಭಿಗೆ ಮಣಿದು ಪೊಲೀಸರು ಸರಿಯಾಗಿ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದೆ ಹೈರಾಣಾಗುತ್ತಿದ್ದಾರೆ…
ಅಂಕೋಲದಲ್ಲಿ ಅಕ್ರಮ ಮಟ್ಕಾ ದಂದೆಯನ್ನು ಗಟ್ಟಿ ಮಾಡಿಕೊಂಡು. ಮಟ್ಕಾ ಬುಕ್ಕಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಗೆ ಈ ಹಿಂದೆ ಹೊಸದಾಗಿ ಬಂದ ಅದೆಷ್ಟೋ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದ ಪ್ರಥಮ ದಿನಗಳಿಂದ ಕೆಲವು ದಿನದವರೆಗೆ ಮಟ್ಕಾ ದ
ಜುಜುಕೋರರನ್ನು ಹಿಡಿದು ಪ್ರಕರಣ ದಾಖಲಿಸುತ್ತಾರೆ . ಹಾಗೂ ಕೆಲವೊಂದಿಷ್ಟು ಅಧಿಕಾರಿಗಳು ಈ ಮಟ್ಕ ದ ಸಹವಾಸ ಬೇಡವೇ ಬೇಡ ಎಂದು ಸುಮ್ಮನಿದ್ದು ಬಿಡುತ್ತಾರೆ.
ಪೊಲೀಸರು ಎಷ್ಟು ಚುರುಕಾಗಿ ಮಟ್ಕ ಆಡಿಸುವ ಅಂಗಡಿಯವರನ್ನು ಹಿಡಿಯುತ್ತಾರೋ ಇದನ್ನು ತೀರ್ಮಾನ ಮಾಡಿಕೊಂಡು ಇವರಿಗೆ ನಂತರ ದಿನಗಳಲ್ಲಿ ತಿಂಗಳಿಗೆ ಕೊಡುವ ಮಂತ್ಲಿ ಹಣ ಹೆಚ್ಚಲು ಸಹಕಾರಿಯಾಗುತ್ತದೆ
ಪೊಲೀಸ್ ಅಧಿಕಾರಿಗಳು ಮೊದಲಾರ್ಧದಲ್ಲಿ ಎಷ್ಟೇ ಪ್ರಾಮಾಣಿಕರಾಗಿದ್ದರು ನಂತರ ದಿನಗಳಲ್ಲಿ ಮಟ್ಕಾ ಬುಕ್ಕಿಗಳು ತಮ್ಮ ನೆಚ್ಚಿನ ಪ್ರಭಾವಿ ರಾಜಕಾರಣಿಗಳ ಮೂಲಕ ಹಣದ ಆಸೆಯನ್ನು ತೋರಿಸಿ ದಕ್ಷ ಅಧಿಕಾರಿಗಳನ್ನು ಕೂಡ ಭ್ರಷ್ಟ ಅಧಿಕಾರಿಯಾಗಲು ನೇರವಾಗಿ ಕಾರಣಿಕರ್ತರಾಗುತ್ತಾರೆ.
*ಅಂಕೋಲಾದ ಪೊಲೀಸ್* *ಠಾಣೆಗಳ ಮುಂದೆ ನಿಲ್ಲುವ ಐಷಾರಾಮಿ ಕಾರುಗಳು* :: ನಾವು ಅನೇಕ ಬಾರಿ ಠಾಣೆಗೆ ಹೋದಾಗ ಐಷಾರಾಮಿ ಕಾರುಗಳಲ್ಲಿ ಸುತ್ತಲು ನಿಂತಿರುತ್ತದೆ… ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಈ ರಾಜಕೀಯ ವ್ಯಕ್ತಿಗಳು ಕಾರು ಗಳು ನೀಲ್ಲಲು ಕಾರಣವೇನು ತಿಳಿಯುತ್ತಿಲ್ಲ.
*ಪೊಲೀಸ್ ಅಧಿಕಾರಿಗಳನ್ನು ಏಕವಚನದಲ್ಲಿ ಹೆಸರಿನಿಂದ ಕರೆದು ಅತಿಸಲುಗೆಯಿಂದ ಮಾತನಾಡಿಸುವ ರಾಜಕೀಯ ವ್ಯಕ್ತಿಗಳು* : ಐಷಾರಾಮಿ ಕಾರುಗಳಲ್ಲಿ ಬಂದ ಕೆಲವು ರಾಜಕೀಯ ವ್ಯಕ್ತಿಗಳು ಕರ್ತವ್ಯದಲ್ಲಿ ಇರುವಾಗ ಪಿಎಸ್ಐ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಏಕವಚನದಲ್ಲಿ ಹೆಸರಿನಿಂದ ಕರೆಯುತ್ತಿದ್ದಾಗ . ಅವರ ಕೆಳಹಂತದ ಅಧಿಕಾರಿಗಳಿಗೆ ಮುಜುಗರ ಉಂಟಾಗುವ ಪ್ರಸಂಗ ಎದುರಾಗಿದೆ.. ಕಾರಣ ತಮ್ಮ್ ಮೇಲಾಧಿಕಾರಿಗಳಿಗೆ ಏಕವಚನದಲ್ಲಿ ಗೌರವ ಕೊಡದೆ ಹೆಸರಿನಿಂದ ಕರೆಯುವ ವ್ಯಕ್ತಿಗಳು ಕೆಳಹಂತದ ಅಧಿಕಾರಿಗಳಿಗೆ ಇನ್ನು ಯಾವ ಮಟ್ಟದಲ್ಲಿ ಮರ್ಯಾದೆ ನೀಡಬಹುದು ಎಂಬುದನ್ನು ಉಹಿಸಿಸಿಕೊಳ್ಳಬೇಕಾಗಿದೆ… ರಾಜಕೀಯ ಪುಡಾರಿಗಳೊಂದಿಗೆ ಅತಿ ಸಲುಗೆಯು ಮುಂದೆ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಲು ಸಮಸ್ಯೆ ತಂದೊಡುತ್ತದೆ.
ರಾಜ್ಯದಲ್ಲಿ ಕೋಳಿ ಅಂಕ ಹಗಲಿರುಳು ಎನ್ನದೆ ನಡೆಯುತ್ತಿದ್ದು. Prevention of cruelty to animal act . 1960 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಡೈರೆಕ್ಟರ್ ಜನರಲ್ ಆಪ್ ಪೊಲೀಸ್ ರವರ ಕಚೇರಿ ಬೆಂಗಳೂರು ರವರಿಂದ ದಿನಾಂಕ 6-01=2024 ರಿಂದ ಎಲ್ಲಾ ಪೊಲೀಸ್ ಆಯುಕ್ತರಿಗೆ. ಆದೇಶ ಜಾರಿಯಾಗಿದೆ.. ಅಂಕೋಲದಲ್ಲಿ ಕೋಳಿ ಅಂಕ ನಡೆಸಿ ಸಿಕ್ಕಿ ಬೀಳುವರಿಗೆ ಜೈ ಲೂಟ ತಿನ್ನುವ ಭಾಗ್ಯ ನೇರವಾಗಿ ದೊರಕಲಿದೆ.
*ರಾಜಕೀಯ ಪಕ್ಷಗಳ ರಾಜಕಾರಣಿಗಳ ಕೈವಾಡ* : ಅಂಕೋಲದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಯಾವ ಸರ್ಕಾರ ಅಧಿಕಾರ ಬರುತ್ತೋ ಅವರು ಅದನ್ನು ನಿರ್ಧಾರ ಮಾಡುತ್ತಾರೆ … ಸರ್ಕಾರ ತಮ್ಮದೆಂದ ಮೇಲೆ ತಾವು ಹೇಳಿದ ವ್ಯಕ್ತಿಗಳಿಗೆ ಓಸಿಬುಕ್ಕಿ ಪಟ್ಟ ಕೊಡಬೇಕೆಂಬುದು ಕಾನೂನು ಮಾಡಿಕೊಂಡುಬಿಟ್ಟಿದ್ದಾರೆ.
ವಿರೋಧ ಪಕ್ಷದಲ್ಲಿ ಇರುವವರು ಅಕ್ರಮ ಚಟುವಟಿಕೆಯನ್ನು ಅಂದು ವಿರೋಧಿಸಿಯೇ ಇಲ್ಲ.
ಅಂದು ವಿರೋಧ ಪಕ್ಷದಲ್ಲಿ ಇರುವ ರಾಜಕೀಯ ಪಕ್ಷಗಳು ಇಂದು ಸರ್ಕಾರ ರಚಿಸಿವೆ . ಸರ್ಕಾರ ತಮ್ಮದೆಂದ್ ಮೇಲೆ ತಾವು ಹೇಳಿದ ವ್ಯಕ್ತಿಗಳಿಗೆ ಓಸಿ ಬುಕ್ಕಿಪಟ್ಟ ನೀಡಬೇಕೆಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಿದಂತಿದೆ..
ಮುಖ್ಯವಾಗಿ ವಿರೋಧ ಪಕ್ಷದ ಜನ ಪ್ರತಿನಿಧಿಗಳು ತಮಗೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ವಿಷಯ ಗೊತ್ತಿದ್ದರೂ ತುಟಿಕ್ ಪಿಟಿಕ್ ಅನ್ನದೇ ತಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ನಾವು ಅದನ್ನು ಮುಂದುವರಿಸಿದರಾಯಿತು ಎಂಬ ದೃಢ ನಿರ್ಧಾರಕ್ಕೆ ಬಂದಂತಿದೆ.
ಪೋಲಿಸ್ ಇಲಾಖೆ ಹಾಗೂ ಸರ್ಕಾರದ ಅನೇಕ ಇಲಾಖೆಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ.
ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರು ಕೂಡ ಕಾನೂನಾತ್ಮಕವಾಗಿ ಕೆಲಸವನ್ನು ನಿರ್ವಹಿಸದೆ. ಅಕ್ರಮ ದಂದೆಕೊರರು ನೀಡುವ ಮಂತ್ಲಿ ಹಣಕ್ಕೆ ಆಸೆಪಟ್ಟು . ಅಕ್ರಮದಲ್ಲಿ ಪರೋಕ್ಷವಾಗಿ ಶಾಮೀಲಾಗಿ ನಂತರ ವರ್ಗಾವಣೆ ಸಮಯದಲ್ಲಿ ಪ್ರಾಮಾಣಿಕ ಅಧಿಕಾರಿ. ಸಂಭವಿತ ಅಧಿಕಾರಿ ಎಂದು ಪತ್ರಿಕೆಯಲ್ಲಿ ಶೀರ್ಷಿಕೆಯನ್ನು ಕೊಟ್ಟು ರಿಯಲ್ ಸಿಂಗಂ ಗಳೆಂದು ಮಾಧ್ಯಮಗಳು ಲಂಚಬಾಕ ಅಧಿಕಾರಿಗಳನ್ನು ಹೀರೋಗಳೆಂದು ಬಿಂಬಿಸುವುದು ಇಡೀ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ..