ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸುವ ವ್ಯವಸ್ಥೆಗೆ ಅಂಕೋಲಾ ಬಸ್ ನಿಲ್ದಾಣದಲ್ಲಿ ವಿಭಾಗಿಯ ನಿಯಂತ್ರಣ ಅಧಿಕಾರಿ ಕೆ.ಹೆಚ್. ಶ್ರೀನಿವಾಸ್ ರವರಿಂದ ಚಾಲನೆ.
ಅಂಕೋಲಾ ಬಸ್ ನಿಲ್ದಾಣ ದಲ್ಲಿ ಇಂದು ಪ್ರಥಮ ಬಾರಿಗೆ ಬಸ್ಸಿನಲ್ಲಿ ಸಂಸ್ಥೆಯಿಂದ ನಿರ್ವಾಹಕರಿಗೆ ನೀಡಿರುವ ಕ್ಯೂಆರ್ ಕೋಡ್ ಮೂಲಕ ಪ್ರಯಾಣಿಕರು ಟಿಕೇಟನ್ನು ಪಡೆದುಕೊಳ್ಳುವ ವ್ಯವಸ್ಥೆಗೆ ಚಾಲನೆ
ಅಂಕೋಲಾ-ಅಂಕೋಲಾ ಬಸ್ ನಿಲ್ದಾಣಕ್ಕೆ ಆಗಮಿಸಿದ ಉತ್ತರ ಕನ್ನಡ ಜಿಲ್ಲೆಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಧಿಕಾರಿಗಳು
ಅಂಕೋಲಾ ಘಟಕದ ಬಸ್ಸಿನ ಒಳಗಡೆ ಹೋಗಿ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿ ಸಂಸ್ಥೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಕ್ಯೂಆರ್ ಕೋಡ್ ಅನ್ನು ಜಾರಿಗೆ ತಂದಿದ್ದು. ಫೋನ್ ಪೇ. ಯು.ಪಿ.ಐ ಯನ್ನು ಹೊಂದಿರುವ ಪ್ರಯಾಣಿಕರು ನಗದು ಇಲ್ಲದೆ ಇರುವ ಸಂದರ್ಭದಲ್ಲಿ ಸಂಸ್ಥೆಯ ಚಾಲಕರಿಗೆ ನೀಡಿರುವ ಕ್ಯೂಆರ್ ಕೋಡಿಗೆ ಹಣವನ್ನು ಪಾವತಿ ಮಾಡಿ ಟಿಕೆಟ್ ಅನ್ನು ಪಡೆದುಕೊಳ್ಳಲು ಸಂಸ್ಥೆಯಿಂದ ಅವಕಾಶ ಕಲ್ಪಿಸಿಕೊಟ್ಟಿದೆ. ಇದರ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದರು.
ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ವಿಭಾಗೀಯ ನಿಯಂತ್ರಣಧಿಕಾರಿಗಳು ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಲ್ಲಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುವ ಯೋಜನೆ ಜಾರಿಗೆ ತಂದಿದ್ದು ಅಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ. ಉತ್ತರ ಕನ್ನಡ ಜಿಲ್ಲೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಸಾರಿಗೆ ಘಟಕದಲ್ಲೂ ಪ್ರಾರಂಭಿಸಲು ಆದೇಶ ಮಾಡಿದ್ದೇನೆ. ಇದರಿಂದ ಪ್ರಯಾಣಿಕರಿಗೂ ಅನುಕೂಲ ಹಾಗೂ ನಿರ್ವಾಹಕರಿಗೂ ಅನುಕೂಲವಾಗಲಿದೆ ಯಾವುದೇ ರೀತಿಯ ಚಿಲ್ಲರೆ ಸಮಸ್ಯೆ ಇರೋದಿಲ್ಲ. ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸುತ್ತೇವೆ ಎಂದರು.
ಮುಂದುವರೆದು ಅಂಕೋಲಾ ಬಸ್ ನಿಲ್ದಾಣದಲ್ಲಿ ಖಾಲಿ ಇರುವ ಜಾಗದಲ್ಲಿ ಹೊಸ ವಾಣಿಜ್ಯ ಮಳಿಗೆಗಳನ್ನು ತೆರೆದು ನಿರುದ್ಯೋಗಿ ಯುವಕರಿಗೆ ಪುಸ್ತಕದ ಅಂಗಡಿ. ಹೂವಿನ ಅಂಗಡಿ. ಡಿಟಿಪಿ ಸೆಂಟರ್. ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಗಮನಹರಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಂಕೋಲಾದ ಘಟಕದ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ.. ಕೇಂದ್ರ ಕಚೇರಿ ಹುಬ್ಬಳ್ಳಿಯ ಗಣಕ ಅಧೀಕ್ಷಕ ರವೀಶ್.ಸಹಾಯಕ ಸಂಚಾಲಕ ಅಧಿಕ್ಷಕ ವಿಭಾಗೀಯನಿಯಂತ್ರಣಧಿಕಾರಿ ಕಚೇರಿಯ ಶಿರಸಿಯ ಪ್ರವೀಣ್ ಶೇಟ್.ಅಂಕೋಲಾ ಸಹಾಯಕ ಸಂಚಾರ ಅಧೀಕ್ಷಕ ಶಿವಾನಂದ್ ನಾಯ್ಕ್.ಸಿಬ್ಬಂದಿ ಮೇಲ್ವಿಚಾರಕಡಿ ಎನ್ ನಾಯ್ಕ್.ಮಾಹಿತಿ ತಂತ್ರಜ್ಞಾನ ಇಲಾಖೆಯ ಸುಬ್ರಮಣ್ಯ .ಹಾಗೂ ಅಂಕೋಲಾ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರು ಶಿಸ್ತಿನ ಸಿಪಾಯಿಗಳಂತೆ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾ ಇವರೆಲ್ಲರೂ ಉಪಸ್ಥಿತರಿದ್ದರು.