ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಾರ್ಮಿಕ ಸಂಘಟನೆ ಎ.ಐ.ಟಿ.ಯು.ಸಿ ಮನವಿ
ಭಟ್ಕಳ-1996 ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯ್ದೆಯ ಪ್ರಕಾರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಯೋಜನೆಗಳಿಗೆ ರಾಷ್ಟ್ರದ ಯಾವುದೇ ರಾಜ್ಯಗಳು ವಿನಯೋಗಿಸಬಾರದು, ನಿರ್ಮಾಣ ಕಾರ್ಮಿಕರಿಗೆ ಮಾತ್ರ ಮೀಸಲಿಡುವುದು,
1996 ಮೂಲ ಸೆಸ್ ಕಾಯ್ದೆ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಈಗ ಇರುವ 1% ಸೆಸ್ ನ್ನು 2%ಗೆ ಹೆಚ್ಚಳ ಮಾಡುವುದು, ಸೆಸ್ ಹಣವನ್ನು ಕಾರ್ಮಿಕರ ಯೋಗ ಕ್ಷೇಮಕ್ಕೆ ಗಣನೀಯವಾಗಿ ಆರ್ಥಿಕ ಬೆಂಬಲ ವೃದ್ಧಿಸಲು ಬಳಕೆಯಾಗಬೇಕು, ಹಾಗೂ ಪ್ರಸ್ತುತ ಇರುವ ಖಾಸಗಿ ಸೆಸ್10 ಲಕ್ಷ ವಾಣಿಜ್ಯ ಸೆಸ್ 5 ಲಕ್ಷ ಮಿತಿಯನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಮತ್ತು ಒಳಾಂಗಣ ಅಲಂಕಾರಕ್ಕೂ ಸೆಸ್ ಸಂಗ್ರಹಿಸಬೇಕು,
ನಮ್ಮ ರಾಜ್ಯದಲ್ಲಿರುವ ತಿಂಗಳ 3000 ಪಿಂಚಣಿಯನ್ನು ಕನಿಷ್ಠ 6000 ಕ್ಕೆ ಹೆಚ್ಚಳ ಮಾಡಬೇಕು,
ಕಾರ್ಮಿಕ ಇಲಾಖೆಯ ಆಯುಕ್ತಕರ ಕಚೇರಿಯಲ್ಲಿ ( ಎಐಸಿಬಿಸಿ ಡಬ್ಲ್ಯೂ) ನಮ್ಮ ಸಂಘಟನೆ ಸದಸ್ಯರನ್ನು ಎಲ್ಲಾ ರಾಜ್ಯದಲ್ಲಿ ಮಂಡಳಿ ಸದಸ್ಯರನ್ನಾಗಿ ನೇಮಿಸುವುದು ಹಾಗೂ ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣು- ಗಂಡು ಎಂಬ ಭೇದ ಭಾವ ವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು,
ರಾಷ್ಟ್ರೀಯ ಹಬ್ಬದ ದಿನವಾದ ದೀಪಾವಳಿಯ ಉಡುಗೊರೆಯಾಗಿ ಪ್ರತಿವರ್ಷ 10 ಸಾವಿರ ರೂಪಾಯಿ ಬೋನಸ್ ನೀಡುವುದು (ಈಗಾಗಲೇ ಈ ಸೌಲಭ್ಯ ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಯಲ್ಲಿದೆ)
ಕಟ್ಟಡ ಕಾರ್ಮಿಕರ ಮಂಡಳಿಯನ್ನು ಕಾರ್ಮಿಕ ಕಾನೂನುಗಳು ತಿದ್ದುಪಡಿಯಾಗಿರುವ 4 ಕೋಡ್ ಗಳಿಗೆ ವಿಲೀನ ಮಾಡಬಾರದು,
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಾಯವನ್ನು ಈ ಹಿಂದೆ ಇದ್ದ ಹಾಗೆ ಮುಂದುವರಿಸುವುದು ಮತ್ತು ಕಡಿಮೆ ಮಾಡಿರುವುದನ್ನು ಮತ್ತೆ ವಾಪಸ್ ಪಡೆಯಬೇಕು, ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಖಾಸಗಿ ಆಸ್ಪತ್ರೆಗಳ ಆರೋಗ್ಯ ತಪಾಸನೆಯನ್ನು ತಕ್ಷಣ ನಿಲ್ಲಿಸಬೇಕು, ಸರ್ಕಾರಿ ಆಸ್ಪತ್ರೆಯಿಂದ ಆರೋಗ್ಯ ತಪಾಸನೆ ನಡೆಸಬೇಕು, ಮಂಡಳಿಯ ಹಣದಲ್ಲಿ ಯಾವುದೇ ರೀತಿಯ ಕಿಟ್ಟುಗಳನ್ನು ಖರೀದಿಸಬಾರದು ಮುಂತಾದ ವಿಷಯಗಳೊಂದಿಗೆ ಭಾರತದ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಜಿ ಅವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಯಾದ ಸನ್ಮಾನ್ಯ ಸಿದ್ದರಾಮಯ್ಯ ಸರ್ ಅವರಿಗೆ ಸಹಾಯಕ ಆಯುಕ್ತಕರು ಭಟ್ಕಳ ಇವರ ಮುಖಾಂತರ ಮನವಿ ಸಲ್ಲಿಸಲಾಯಿತು. ಜಿ. ಎನ್. ರೇವಣಕರ್. ಸುರೇಶ್ ನಾಗಪ್ಪ ಆಚಾರಿ,ರತ್ನಾಕರ್ ಗಣಪತಿ ಆಚಾರಿ.ಪ್ರೇಮ ಸುರೇಶ್ ಆಚಾರಿ
ಮಂಜುನಾಥ್ ಮುರುಡೇಶ್ವರ ನಾಯ್ಕ್,ಮಂಜುನಾಥ್ ತಿಮ್ಮಪ್ಪ ನಾಯ್ಕ್ನಾರಾಯಣ ಹೂವಯ್ಯ ಮರಾಠಿ.ಮುಂತಾದವರು ಇದ್ದರು