ಬಿಜೆಪಿ ಅಬ್ಯರ್ಥಿ ಕಾಗೇರಿ ತವರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ- ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅರಣ್ಯ ಅತಿಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ್ ಸಭೆಗೆ ಗೈರು
ಶಿರಸಿ-ಸೋಮವಾರ ದಿನ ಶಿರಸಿಯ ಪಾಂಡುರಂಗ ಸಭಾಭವನ ಹುಸರಿ ರಸ್ತೆ ಶಿರಸಿಯಲ್ಲಿ ಕೆನರಾ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಬೇ ಜರುಗಿತು ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ *ಶ್ರೀಮತಿ ಅಂಜಲಿ ಹೇಮಂತ ನಿಂಬಾಲ್ಕರ್* ಸನ್ಮಾನ್ಯ ಉಸ್ತುವಾರಿ ಸಚಿವರಾದ *ಶ್ರೀ ಮಂಕಾಳ್ ವೈದ್ಯ ರವರು*, ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರಾದ ಸನ್ಮಾನ್ಯ *ಶ್ರೀ ಆರ್ ವಿ ದೇಶಪಾಂಡೆ ರವರು,* ಮಾನ್ಯ ಶಾಸಕರಾದ *ಶ್ರೀ ಭೀಮಣ್ಣ ನಾಯ್ಕ್ ರವರು*, ಶಾಸಕರಾದ *”ಶ್ರೀ ಸತೀಶ ಸೈಲ್ ರವರು “* ಕುಮಟಾ ವಿಧಾನ ಸಭಾ ಅಭ್ಯರ್ಥಿ *”ಶ್ರೀ ನಿವೇದಿತ ಆಳ್ವಾ”* ಅವರು ಹಾಗೂ ಯಲ್ಲಾಪುರ ವಿಧಾನ ಸಭಾ ಅಭ್ಯರ್ಥಿಯಾದ *”ವಿ ಎಸ್ ಪಾಟೀಲ”* ಅವರ ಉಪಸ್ಥಿತಿಯಲ್ಲಿ ಚುನಾವಣಾ ತಯಾರಿ ಸಭೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ , ಅರಣ್ಯ ಅತಿಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ್ ಅವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು.ಸಭೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರದ ಚುನಾವನೆಯಲ್ಲಿ ಯಾವ ರೀತಿಯಾಗಿ ಅಭ್ಯರ್ಥಿಯ ಗೆಲುವಿಗಾಗಿ ತಯಾರಿ ನಡೆಸಬೇಕು ಮತ್ತು ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿಸಿ ಮತ ಯಾಚನೆ ನಡೆಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು ಈ ಸಭೆಯಲ್ಲಿ ,ಕೆಪಿಸಿಸಿ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸೆಲ್ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರು, ಕೆಪಿಸಿಸಿ ಸಂಯೋಜಕರು,ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರು ಮತ್ತು ಸದಸ್ಯರು, ತಾಲೂಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಎಲ್ಲಾ ಸ್ತರದ ಚುನಾಯಿತ ಪ್ರತಿನಿಧಿಗಳು,ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮತ್ತು ಮಹಿಳಾ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.