ಕುಮಟಾ ಮಿರ್ಜಾನ ತಾರೀಬಾಗಿನಲ್ಲಿ ನಿರ್ಮಾಣ ಹಂತದ ಸೇತುವೆಯ ಫ್ಲ್ಯಾಬ್ ಕುಸಿದು ಬಿದ್ದು ಹಿಟಾಚಿ,ಕ್ರೇನ್ ಜಖಂ-ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕುಮಟಾ: ನಿರ್ಮಾಣ ಹಂತದ ಸೇತುವೆಯ ಫ್ಲ್ಯಾಬ್ ಕುಸಿದು ಬಿದ್ದು ಹಿಟಾಚಿ,ಕ್ರೇನ್ ಜಖಂಗೊಂಡು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಮಿರ್ಜಾನ ತಾರೀಬಾಗಿನಲ್ಲಿ ಘಟನೆ
ಅಘನಾಶಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕುಂದಾಪುರದ ಸೈಂಟ್ ಅಂಟೋನಿ ಕನ್ಸ್ಟ್ರಕ್ಷನ್ ಈ ಕಾಮಗಾರಿಯನ್ನ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದೆ. ಈ ಕಾಮಗಾರಿ ಆರಂಭದಿಂದಲ್ಲೂ ಸ್ಥಳೀಯರು ಕಳಪೆ ಕಾಮಗಾರಿ ಆಗುತ್ತಿರುವ ಬಗ್ಗೆ ಆರೋಪಿಸುತ್ತಲೇ ಬಂದಿದ್ದು, ಆದರೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯಾಗಲಿ ಸಂಬಧಿಸಿದ ಅಧಿಕಾರಿಗಳು ಆ ಬಗ್ಗೆ ಯಾವುದೇ ಜಾಗೃತೆ ವಹಿಸದೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿಕೊಂಡು ಬರುತ್ತಿರುವ ಬಗ್ಗೆಯೂ ಸ್ಥಳೀಯರು ಆರೋಪಿಸುತ್ತಲೆ ಬಂದಿದ್ದರು. ಈಗ ಕಾಮಗಾರಿ ಮಾಡುತ್ತಿರುವಾಗ ಪಿಲ್ಲರ್ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲಾಬ್ಗಳು ಕುಸಿದು ಬಿದಿದ್ದೆ. ಇದರಿಂದಾಗಿ ಸೇತುವೆಯ ಕೇಳಭಾಗದಲ್ಲಿ ನಿಂತಿದ್ದ ಹಿಟಾಚಿ,ಕ್ರೇನ್ ಜಖಂಗೊಂಡಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸೇತುವೆಯ ಕಳಪೆ ಕಾಮಗಾರಿ ಕಂಡು ಗ್ರಾಮಸ್ಥರ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯವರು ಸ್ಥಳೀಯರ ಮೇಲೆರಗಿ ಬಂದಿದ್ದಾರೆನ್ನಲಾಗಿದ್ದು, ಕೆಲ ಸಮಯ ಸ್ಥಳೀಯರು ಹಾಗೂ ಗುತ್ತಿಗೆ ಕಂಪನಿ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ಸಹ ಉಂಟಾಗಿದೆ.